ಕರ್ನಾಟಕ ಅಹಿಂದ ಜನ ಸಂಘದ ಬೆಳಗಾವಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ವಿಜಯ ಜಂಬಗಿ ನೇಮಕ

ಬೆಂಗಳೂರು : ಕರ್ನಾಟಕ ಅಹಿಂದ ಜನ ಸಂಘದ ಬೆಳಗಾವಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ವಿಜಯ್ ಜಂಬಗಿ ರವರನ್ನು ನೇಮಕ ಮಾಡಲಾಗಿದೆ.ಅಹಿಂದ ಜನ ಸಂಘದ ಸಂಸ್ಥಾಪಕರು ಮತ್ತು ರಾಜ್ಯಧ್ಯಕ್ಷರಾಗಿರುವ ಅಯ್ಯಪ್ಪಗೌಡ ಅವರು ವಿಜಯ್ ಜಂಬಗಿ ನೇಮಕ ಮಾಡಿದ್ದಾರೆ. ಅಹಿಂದ ಸಮುದಾಯದ ಜನರು ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋ ಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.

ತಮ್ಮನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವಿಜಯ್ ಜಂಬಗಿ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *