ಸಾಮಾಜಿಕ ಕಳಕಳೆಯ ಕ್ಲಾಸಿಕ್ ಹೋಮಿಯೋಪತಿ ವೈದ್ಯರು ಡಾ.ಕೃಷ್ಣಮೂರ್ತಿ

ಸಾಮಾಜಿಕ ಕಳಕಳೆಯ ಕ್ಲಾಸಿಕ್ ಹೋಮಿಯೋಪತಿ ವೈದ್ಯರು ಡಾ.ಕೃಷ್ಣಮೂರ್ತಿ

ಡಾ.ಕೃಷ್ಣಮೂರ್ತಿ  ದಂಪತಿಗಳಿಬ್ಬರೂ ವೈದ್ಯರಾಗಿದ್ದು,ನಮಗೆ ಹಲೋಪತಿ ವೈದ್ಯರು ಬಹಳಷ್ಟು ಗೊತ್ತು.ಯಾಕೆಂದರೆ ನಮ್ಮ ಕಾಯಿಲೆಗಳಿಗೆ ಆದಷ್ಟು ಗುಣಪಡಿಸುವ ಸಾಮರ್ಥ್ಯ ಹಲೋಪತಿ ಔಷಧಿಗಳಿವೆ.ಆದರೆ ಕಾಯಿಲೆಗಳು ಮತ್ತೆ ಮರುಕಳಿಸಬಹುದು. ಆದರೆ ಹೋಮಿಯೋಪತಿ ಔಷಧಿಗಳಿಂದ ಕಾಯಿಲೆಗಳು ಮರುಕಳಿಸುವುದುಕಡಿಮೆ.ಹೋಮಿಯೋಪತಿಯಲ್ಲಿ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಗೆ ಒಂದೇ ರೀತಿಯ ಔಷಧಿಗಳು ಇರುತ್ತವೆ.ಯಾವುದೇ ರೀತಿಯ ಇತರ ಕಾಯಿಲೆಗಳು ಬರುವುದಿಲ್ಲ.ಒಂದು ಸಾರಿ ಕಾಯಿಲೆ ವಾಸಿಯಾಯಿತು ಎಂದರೆ ಮತ್ತೆ ಮರುಕಳಿಸುವುದು ಅತ್ಯಂತ ಕಡಿಮೆ.

 

ಶಹಾಪುರ ನಗರದ ನಂದಿನಿ ಹೋಟೆಲ್ ಹಳೆಬಸ್ ನಿಲ್ದಾಣದ ಹತ್ತಿರ ಇರುವ ಕ್ಲಾಸಿಕಲ್ ಹೋಮಿಯೋಪತಿ ಕ್ಲಿನಿಕ್ ವೈದ್ಯರೇ ಕೃಷ್ಣಮೂರ್ತಿ.ಅವರ ಧರ್ಮಪತ್ನಿಯು ಕೂಡ ಹೋಮಿಯೋಪತಿ ವೈದ್ಯರಾಗಿದ್ದು, 2 ವರ್ಷಗಳ ಹಿಂದೆ ಕರೋನಾ ಸಂದರ್ಭದಲ್ಲಿ ಹಲವಾರು ರೋಗಿಗಳನ್ನು ಹೋಮಿಯೋಪತಿ ಕ್ಲಿನಿಕ್ ಔಷಧಿಯಿಂದ ಗುಣಪಡಿಸಿದ್ದಾರೆ.ಯಾವ ಕಾಲಕ್ಕೂ ಇವರು ಪ್ರಚಾರಪ್ರಿಯರಲ್ಲ. ಕಾಯಕವೆ ಕೈಲಾಸವೆಂದು ವೈದ್ಯ ವೃತ್ತಿಯಲ್ಲಿ ಕೆಲಸ ಮಾಡುತಿದ್ದಾರೆ.

ಡಾ.ಕೃಷ್ಣಮೂರ್ತೀಯವರು ಹೊಮಿಯೋಪತಿಯಲ್ಲಿಯೆ M.D. ಪದವಿದಾರರಾಗಿದ್ದು,ಬೆಂಗಳೂರು ಯಾದಗಿರಿ ಮತ್ತು ಕಲಬುರ್ಗಿಯಲ್ಲಿಯೂ ಇವರ ಕ್ಲಿನಿಕ್ ಗಳಿದ್ದು, ವಿಶೇಷವಾಗಿ ರೋಗಿಗಳನ್ನು ಅತ್ಯಂತ ಕಾಳಜಿವಹಿಸಿ ಧೈರ್ಯ ತುಂಬುತ್ತಾರೆ.ಹೋಮಿಯೋಪತಿ ಔಷದಿ  ಸುಮಾರು ಹದಿನೈದು ದಿನಗಳ ನಂತರ ಪಲಿತಾಂಶ ಗೊತ್ತಾಗುತ್ತದೆ.ಎಲ್ಲ ಕಾಯಿಲೆಗಳಿಗೂ ಔಷಧಿಗಳಿವೆ.

ಡಾ.ಕೃಷ್ಣಮೂರ್ತಿಯವರು ಅಸಿಡಿಟಿ,ಬೆನ್ನುನೋವು,ಗ್ಯಾಂಗ್ರಿನ್ ಗಳಿಗೆ ಸಂಬಂಧಿಸಿದಂತೆ ಇತರ ಹಲವಾರು ಕಾಯಿಲೆಗಳಿಗೆ ಬರುವ ರೋಗಿಗಳನ್ನು ಸಂಪೂರ್ಣವಾಗಿ ಗುಣಪಡಿಸಿದ್ದಾರೆ.ಗ್ಯಾಂಗ್ರಿನ್ ಅಂತಹ ಭಯಾನಕ ಕಾಯಿಲೆಗಳನ್ನು ಕ್ಲಾಸಿಕ್ ಹೋಮಿಯೋಪತಿಯಲ್ಲಿ ಗುಣಪಡಿಸಲಾಗಿದೆ.ಗ್ಯಾಂಗ್ರಿನ್ ಕಾಯಿಲೆ ಕಾಲೂ ಹೂತವಾಗಿರುತ್ತದೆ.ಹೋಮಿಯೋಪತಿ ಔಷದಿಯಿಂದ  ಗಾಯವಾದ ಸ್ಥಳ ಮಾತ್ರ ಹೂತವಾಗುತ್ತದೆ.ಕಾಲಿನ ಇತರ ಭಾಗದಲ್ಲಿ ಹರಡುವುದಿಲ್ಲ. ಗ್ಯಾಂಗ್ರಿನ್ ಸಂಪೂರ್ಣವಾಗಿ ಗುಣವಾಗುತ್ತದೆ. ಒಬ್ಬ ರೋಗಿಗೆ ಇದಕ್ಕಿಂತ ಹೆಚ್ಚಿನದೇನೂ ಬೇಕು.

ದಿನಂಪ್ರತಿ ಕಾಡುವ ಅಸಿಡಿಟಿಯಂತಹ ಕೆಲವು ಕಾಯಿಲೆಗಳು ಶಾಶ್ವತವಾಗಿ ಡಾ.ಕೃಷ್ಣಮೂರ್ತಿಯವರಿಂದ ಗುಣಪಡಿಸಲಾಗಿದೆ. ಮಲಬದ್ಧತೆ ಸೇರಿದಂತೆ ಇತರ ಕಾಯಿಲೆಗಳು ಹೋಮಿಯೋಪತಿ ಔಷಧಿಗಳನ್ನು ಕೊಟ್ಟು ಗುಣಪಡಿಸಿದ್ದಾರೆ.ಬಡರೋಗಿಗಳು ಹಣವಿಲ್ಲದೆ ಬಂದಾಗ ಗ್ಯಾಂಗ್ರಿನ್ ಅಂತಹ ಭಯಾನಕ ಕಾಯಿಲೆಗಳಿಂದ ತಮ್ಮ ಸ್ವಂತ ಕ್ಲಿನಿಕ್ಕಿನಲ್ಲಿ ಇರಿಸಿಕೊಂಡು ಗುಣಪಡಿಸಿ ಕೈಯಿಂದ ಹಣಕೊಟ್ಟು ರೋಗಿಗಳಿಗೆ ಕಳಿಸಿಕೊಟ್ಟ ಹಲವಾರು ಉದಾಹರಣೆಗಳಿವೆ.

ಯುವ ಉತ್ಸಾಹಿ ಡಾ. ಕೃಷ್ಣಮೂರ್ತಿಯವರು ಕಲ್ಯಾಣ ಕರ್ನಾಟಕ ಭಾಗದಲ್ಲಿ  ಮೊದಲನೆಯದಾಗಿ ಹೋಮಿಯೋಪತಿ ಕ್ಲಿನಿಕ್ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಉತ್ತರ ಕರ್ನಾಟಕದಲ್ಲಿ ಹೋಮಿಯೋಪತಿಕ್ ಔಷಧಿಗಳನ್ನು ಜನರಿಗೆ ತಲುಪಿಸಿದ ಕೀರ್ತಿ ಡಾಕ್ಟರ ಕೃಷ್ಣಮೂರ್ತಿಯವರಿಗೆ ಸಲ್ಲುತ್ತದೆ.ಯಾದಗಿರಿ ಜಿಲ್ಲೆಯಾದ್ಯಂತ ಪ್ರತಿಯೊಂದು ಹಳ್ಳಿ ಹಳ್ಳಿಗೆ ಪ್ರಚಾರನಡೆಸಿ ಹೋಮಿಯೋಪತಿ ಔಷಧಿಯನ್ನು ಪರಿಚಯಿಸಿದವರು.  ಕೃಷ್ಣಮೂರ್ತಿಯವರು.ಹನ್ನೆರಡು ವರ್ಷಗಳ ಕಾಲ ವೈದ್ಯವೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ಹೋಮಿಯೋಪತಿ ವೈದ್ಯಕೀಯ ಮಂಡಳಿಗೆ ಡಾ. ಕೃಷ್ಣಮೂರ್ತಿ ಸ್ಪರ್ಧೆ

ಡಾ. ಕೃಷ್ಣಮೂರ್ತಿಯವರು ಕರ್ನಾಟಕ ಹೋಮಿಯೋಪತಿ ವೈದ್ಯಕೀಯ ಮಂಡಳಿ ಚುನಾವಣೆಯಲ್ಲಿ ಪ್ರಸ್ತುತ ಮೊದವ ಬಾರಿ ಸ್ಪರ್ಧಿಸಿದ್ದಾರೆ.ಹೋಮಿಯೋಪತಿಯಲ್ಲಿ ಏನಾದರೂ ಹೊಸ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ಸ್ಪರ್ಧಿಸಿದ್ದು,ವೈದ್ಯಕೀಯ ವೃತ್ತಿಯ ಜೊತೆಗೆ ಸಾಮಾಜಿಕ ಕೆಲಸವನ್ನು ಮಾಡುವ ಹಂಬಲ ಡಾ. ಕೃಷ್ಣಮೂರ್ತಿಯವರಿಗಿದೆ.

ರಾಜ್ಯಾದ್ಯಂತ ಹೋಮಿಯೋಪತಿ ವೈದ್ಯರ ಒತ್ತಾಯದ ಮೇರೆಗೆ ಸ್ಪರ್ಧಿಸಿದ ಕೃಷ್ಣಮೂರ್ತಿಯವರು, ರಾಜ್ಯದಲ್ಲಿನ ಬಡತನಧ ಜನರಿಗೆ ಸೇವೆ ಮಾಡುವ ಅವಕಾಶ ನನಗೊಂದು ಸಾರಿ ಒದಗಿಸಿಕೊಡಬೇಕು ಎಂದು ಪ್ರಾರ್ಥಿಸಿದ್ದಾರೆ.

ಒಣ ಪ್ರತಿಷ್ಠೆಯ ಭರವಸೆ ಕೊಡದೆ, ಕೊಟ್ಟಮಾತಿನಂತೆ ನಡೆದುಕೊಳ್ಳುವ ಮನೋಭಾವವುಳ್ಳವರು ಡಾ. ಕೃಷ್ಣಮೂರ್ತಿಯವರು. ರಾಜಕೀಯದಲ್ಲಿ ತೊಡಗಿಕೊಂಡಿರುವ ಹಲವಾರು ವೈದ್ಯರು,ವಿಧಾನ ಸಭೆ  ಮತ್ತು ವಿಧಾನಪರಿಷತ್ ಸದಸ್ಯರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಅದೇ ರೀತಿ ಸಮಾಜಸೇವೆಗಾಗಿ ಧುಮುಕಲು ಹೋಮಿಯೋಪತಿಕ್ ಚುನಾವಣೆಯಲ್ಲಿ ಗೆಲ್ಲಲಿ ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ.

 

About The Author