ನಿರಾಶ್ರಿತರಿಗೆ ಹಕ್ಕು ಪತ್ರ ವಿತರಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಶಹಾಪುರ : ನಗರದ ಸಚಿವರ ಗೃಹ ಕಚೇರಿಯಲ್ಲಿ 49 ಜನ ನಿರಾಶ್ರಿತರಿಗೆ ನಿವೇಶನದ ಹಕ್ಕುಪತ್ರವನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪಗೌಡ  ದರ್ಶನಾಪುರ ಹಕ್ಕು ಪತ್ರ ವಿತರಿಸಿದರು. ಸುಮಾರು 16 ವರ್ಷಗಳಿಂದ ನಿವೇಶನ ಹೊಂದಿದವರಿಗೆ ಹಕ್ಕುಪತ್ರ ವಿತರಿಸಲು ತಾಂತ್ರಿಕ ತೊಂದರೆಯಿಂದಾಗಿ ತಡವಾಗಿತ್ತು. ಇಂದು 49 ಜನ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಇನ್ನು 10 ಜನ ಫಲಾನುಭವಿಗಳಿಗೆ ಹಕ್ಕು ಪತ್ರಗಳಲ್ಲಿ ಕೆಲವು ತಾಂತ್ರಿಕ ದೋಷದ ತಿದ್ದುಪಡಿಗಳು ಇರುವುದರಿಂದ ಇನ್ನು ಕೆಲ ದಿನಗಳ ನಂತರ ವಿತರಿಸಲಾಗುವುದು ಎಂದು ಸಚಿವರು ಹೇಳಿದರು. ನಿವೇಶನದ ಜೊತೆಗೆ ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಸಿಗುವ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ ಸುರಪುರಕರ್, ಪೌರಾಯುಕ್ತರದ ರಮೇಶ ಬಡಿಗೇರ್,ಎಇಇ ನಾನಾಸಾಹೇಬ, ಕಾಂಗ್ರೆಸ್ ಮುಖಂಡರಾದ ಮುಸ್ತಫ ದರ್ಬಾನ್, ನಗರಸಭೆಯ ಸದಸ್ಯರಾದ ಸಿದ್ದಪ್ಪ ಆರ್ಬೋಳ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *