ಭೀರಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ ನಿಖಿಲ್ ವಿ ಶಂಕರ್

ವಡಗೇರಾ : ತಾಲೂಕಿನ ಹಂಚಿನಾಳ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ  ಉಸ್ತುವಾರಿಗಳಾದ ನಿಖಿಲ್ ವಿ ಶಂಕರ್ ಭೇಟಿ ನೀಡಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ಭೀರಲಿಂಗೇಶ್ವರ ದೇವರ ಅಳಿಲು ಸೇವೆ ಮಾಡುವ ಭಾಗ್ಯ ಗ್ರಾಮಸ್ಥರು ಕಲ್ಪಿಸಿದ್ದೀರಿ. ಇದು ನನ್ನ ಸಣ್ಣ ಕಾಣಿಕೆ. ದೇವರ ಸೇವೆ ಮಾಡುವುದರಿಂದ ಪುಣ್ಯ ಸಿಗುತ್ತದೆ. ಆ ದೇವರ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ ಎಂದರು.

    2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೆ. ಯಾದಗಿರಿ ಕ್ಷೇತ್ರದ ಸರ್ವೆಯ ಪ್ರಕಾರ ಚೆನ್ನಾರಡ್ಡಿ ತುನ್ನೂರು ಹಾಗೂ ನನ್ನ ಹೆಸರು ಕಾಂಗ್ರೆಸ್ ಹೈಕಮಾಂಡಿನಲ್ಲಿ ಚಾಲ್ತಿಯಲ್ಲಿತ್ತು. ಕಾಂಗ್ರೆಸ್ ಪಕ್ಷ ಚೆನ್ನಾರೆಡ್ಡಿ ಪಾಟೀಲ್ ರವರಿಗೆ ಟಿಕೆಟ್ ನೀಡಿತು. ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ರಾಜಕೀಯವನ್ನು ಹೊರತುಪಡಿಸಿ ಕ್ಷೇತ್ರದ ಜನರ ಜೊತೆ ಸದಾ ನಾನಿರುವೆ. ನನ್ನಿಂದಾಗುವ ಸೇವೆಯನ್ನು ಕ್ಷೇತ್ರದ ಜನತೆಗಾಗಿ ಮಾಡುವೆ. ಜನರ ಜೊತೆ ಸದಾ ಸಂಪರ್ಕದಲ್ಲಿರುವೆ ಎಂದು ತಿಳಿಸಿದರು.

 

ಮರೇಪ್ಪ ನಸಲಾಯಿ ಬಸವಂತಪುರ,ಗ್ರಾಪಂ.ಸದಸ್ಯರು,ಮುಖಂಡರಾದ ಹೊನ್ನಯ್ಯ ಬಸ್ವಂತಪುರ, ಹನುಮಂತಪ್ಪ ದಾಳಿ, ಭಾನುಪ್ರಕಾಶ್ ಸಮಾಜದ ಯುವ ಮುಖಂಡರು, ವಿಜಯ್ ಬಾಧ್ಯಪುರ ಸುರಪುರ, ದೊಡ್ಡಪ್ಪ,  ಅಯ್ಯಪ್ಪ ವಗ್ಗರ್, ಧರ್ಮಪ್ಪ ವಗ್ಗರ್, ಹನುಮಂತರಾಯ ಪೂಜಾರಿ, ಹನುಮಂತರಾಯ ಗೊಂದೇನೂರು, ಚಂದ್ರಾಯ ಗ್ರಾಮ ಪಂಚಾಯಿತಿ ಸದಸ್ಯರು, ಭೀಮಣ್ಣ, ಮಾರ್ಥಂಡಪ್ಪ, ಮಲ್ಲಪ್ಪ, ಮಲ್ಲಪ್ಪ,ಮಾಳಪ್ಪ, ನಿಂಗಪ್ಪ, ಹೊನ್ನಪ್ಪ, ತಿಪ್ಪಾರೆಡ್ಡಿ, ಭೀಮಾಶಂಕರ್, ಶಿವಪ್ಪ, ದೇವೇಂದ್ರಪ್ಪ, ಸಾಬಣ್ಣ,ಭೀಮರಾಯ ಸೇರಿದಂತೆ ಹಲವು ಕುರುಬ ಸಮಾಜದ ಮುಖಂಡರು  ಉಪಸ್ಥಿತರಿದ್ದರು.

ನಿಖಿಲ್ ವಿ ಶಂಕರ್ ಅವರು ಕರ್ನಾಟಕ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದು 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು ದಿನಗಳಾಯಿತು. ರಾಜ್ಯ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಯಾದಗಿರಿ ಕ್ಷೇತ್ರದಾದ್ಯಂತ ಸಂಚರಿಸಿ ಸದಾ ಸುದ್ದಿಯಲ್ಲಿದ್ದಾರೆ. ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ಕೋಲೂರು ಮಲ್ಲಪ್ಪನವರ ಸಮಾದಿ ಸ್ಥಳವನ್ನು ಸ್ಮಾರಕವನ್ನಾಗಿಸಿದ್ದು ಆದಷ್ಟು ಬೇಗನೆ ಆ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಯಾದಗಿರಿ ಕ್ಷೇತ್ರದ ಜನರ ಮನದಾಳದಲ್ಲಿ ನೆಲೆಸಿದ್ದಾರೆ ನಿಖಿಲ್ ವಿ ಶಂಕರ್. ಯಾದಗಿರಿ ಕ್ಷೇತ್ರದ ಜನರ ಜೀವಾಳದಲ್ಲಿ ನೆಲೆಸಿರುವ ನಿಖಿಲ್ ವಿ ಶಂಕರ್ ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ಜನರ ಕಷ್ಟ ನೋವುಗಳನ್ನು ಆಲಿಸಲಿ ಎಂದು ಆಶಿಸೋಣ. 

ಬಸವರಾಜ ಅತ್ತನೂರು
ಜಿಲ್ಲಾಧ್ಯಕ್ಷರು
ಸಿದ್ದರಾಮಯ್ಯ ಯುವ ಬ್ರಿಗೇಡ್ ಯಾದಗಿರಿ

Leave a Reply

Your email address will not be published. Required fields are marked *