ಸೈದಾಪುರದಲ್ಲಿ ಸಪ್ತ ಪಲ್ಲಕ್ಕಿ ಸಂಗಮ ಜಾತ್ರೆ | ಶೈಕ್ಷಣಿಕ ಮತ್ತು ರಾಜಕೀಯ ಏಳ್ಗೆಯಾದಾಗ ಸಮಾಜ ಪ್ರಬಲವಾಗಲು ಸಾಧ್ಯ : ಸಚಿವ ದರ್ಶನಾಪುರ

* ಸೈದಾಪುರದಲ್ಲಿ ಸಪ್ತಪಲ್ಲಕ್ಕಿ ಉತ್ಸವ.
* ಡಾ. ಭೀಮಣ್ಣ ಮೇಟಿ ನೇತೃತ್ವ.
* ಅದ್ದೂರಿಯಾಗಿ ಜರುಗಿದ ಮಾಳಿಂಗರಾಯ ಜಾತ್ರೆ.
* ಪಟ್ಟದ ದೇವರು ಪೂಜಾರಿಗಳು ಉಪಸ್ಥಿತಿ.
* ಹಾಲುಮತ ಅಭಿವೃದ್ಧಿಗೆ ಸರಕಾರ ಬದ್ಧ.
ಫೆಬ್ರುವರಿ 24ರೊಳಗೆ ಶಹಪುರ ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ-ಸಚಿವರ ಹೇಳಿಕೆ
* ಕಲ್ಯಾಣ ಮಂಟಪ ನಿರ್ಮಿಸಿಕೊಡಲು ಸರಕಾರದಿಂದ ಒಂದುವರೆ ಕೋಟಿ ನೀಡಲು ಸಚಿವರ ಭರವಸೆ.

ಶಹಾಪುರ : ಹಾಲುಮತದವರ ಋಣ ನನ್ನ ಮೇಲಿದೆ. ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಕೊಟ್ಟು ನನ್ನನ್ನು ಗೆಲ್ಲಿಸಿದ್ದೀರಿ. ನೀವು ಕೂಡ ಶೈಕ್ಷಣಿಕ ಮತ್ತು ಸಾಮಾಜಿಕ ಹಾಗೂ ರಾಜಕೀಯವಾಗಿ ಏಳಿಗೆಯಾದಾಗ ಸಮಾಜ ಪ್ರಬಲವಾಗಲು ಸಾಧ್ಯ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಸೈದಾಪುರ ಗ್ರಾಮದಲ್ಲಿ ಮಾಳಿಂಗರಾಯ ಜಾತ್ರೆ ಮತ್ತು ಸಪ್ತ ಪಲ್ಲಕ್ಕಿಗಳ ಸಂಗಮ ಜಾತ್ರೆ ಹಾಗೂ ಮಾಳಿಂಗರಾಯ ಜಾತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಒಂದೇ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣಬೇಕು ಅಂದಾಗ ದೇಶ ಪ್ರಬಲವಾಗಲು ಸಾಧ್ಯ. ಹಾಲುಮತದವರು ಕಾಯಕವೇ ಕೈಲಾಸ ಎಂದು ಬದುಕುತ್ತಿದ್ದಾರೆ ಎಂದರು.
ಶಹಪುರ ನಗರದಲ್ಲಿ ನಿವೇಶನವನ್ನು ಸಮಾಜದವರು ಖರೀದಿಸಿದರೆ ಸರಕಾರದಿಂದ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪವನ್ನು ನಿರ್ಮಿಸಿಕೊಡಲು ನಾನು ಸಿದ್ಧನಿದ್ದೇನೆ. ಈಗಾಗಲೇ ನಗರದಲ್ಲಿ ಟೌನ್ ಹಾಲ್ಗೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೆಸರಿಡಲಾಗಿದೆ. 18 ಫೀಟ್ ಎತ್ತರದ ಮೂರ್ತಿಯನ್ನು ನಿಲ್ಲಿಸಲಾಗಿದೆ. ಫೆಬ್ರುವರಿ 24ರ ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಬೃಹತ್ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಇಲ್ಲಿ ಸೇರಿರುವ ಪೂಜ್ಯರು ದೈವ ಸಂಭೂತರು.ನೀವು ಮನಸ್ಸು ಮಾಡಿದರೆ ಕಂಬಳಿ ಬೀಸಿ ಮಳೆ ತರುತ್ತೀರಿ. ಮುಂದಿನ ವರ್ಷ ಮಳೆ-ಬೆಳೆಗಳು ಚೆನ್ನಾಗಿ ಬರಲೆಂದು ಆ ದೇವರಲ್ಲಿ ನಿಮ್ಮ ಪ್ರಾರ್ಥನೆ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಶಿವಲಿಂಗ ಶರಣರು ಕೈಲಾಸ ಆಶ್ರಮ ಹೋತಪೇಠ,ಮರಿಗೌಡ ಹುಲಕಲ್,
ಡಾ.ಭೀಮಣ್ಣ ಮೇಟಿ,ಮಹಾದೇವಪ್ಪ ಪೂಜಾರಿ ಸೈದಾಪುರ,ದೇವು ಗಂಗನಾಳಮಲ್ಲಣ್ಣಗೌಡ,
ಭೀಮಣ್ಣಗೌಡ,ಶರಣಪ್ಪ ಸನ್ನತಿ,ನಾನೇಗೌಡ ಮೇಟಿ,
ದೇವಿಂದ್ರಪ್ಪ ಮೇಟಿ,ಶರಣಗೌಡ ಬಿರಾದರ,ಪರ್ವತರಡ್ಡಿ,ಮಹಲರೋಜ ಗಂಗನಾಳ ಸಗರ ಪಲ್ಲಕ್ಕಿಗಳ ಪಟ್ಟದ ಪೂಜಾರಿಗಳು ಹಾಗೂ ವಿಜಯಪುರ ಹಾಗೂ ಹಲವಾರು ಸ್ಥಳಗಳಿಂದ ಜಡೆ ಪೂಜಾರಿಗಳು ಪಟ್ಟದ ಪೂಜಾರಿಗಳು
ಆಗಮಿಸಿದ್ದರು.ಕಾರ್ಯಕ್ರಮವನ್ನು ಚಂದ್ರಶೇಖರ ಕರ್ನಾಳ ನೆರವೇರಿಸಿದರು.

About The Author