ಎಸ್ಟಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ವಡಗೇರಾ : ಪಟ್ಟಣದಲಿ ಜನವರಿ 2ರಂದು ಹಮ್ಮಿಕೊಂಡ ಎಸ್. ಟಿ. ಹೊರಟದಲ್ಲಿ ಕುರುಬ ಸಮಾಜದ ಬಂಧುಗಳು ಹಾಗೂ ಸಮಾಜದ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕುರುಬ ಸಮಾಜದ ಯುವ ಮುಖಂಡರಾದ ಹಣಮಂತರಾಯಗೌಡ ತೇಕರಾಳ ಹಾಗೂ ಮರಿಲಿಂಗಪ್ಪ ಸಾಹುಕಾರ ಕುಮನೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು. ಜನವರಿ 2 ಮಂಗಳವಾರದಂದು ಬೆಳಗ್ಗೆ 10 ಗಂಟೆಗೆ ವಡಗೇರಾ ಪಟ್ಟಣದ ಹೊನ್ನಯ್ಯ ತಾತ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಹಸಿಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು.ನಮ್ಮ ನ್ಯಾಯಯುತವಾದ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸುವ ಮೂಲಕ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ. ನಾವುಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಆದ ಕಾರಣ ಕುರುಬ ಸಮಾಜದ ಬಂಧುಗಳು ಹಾಗೂ ಮಹಿಳೆಯರು ಸಮಾಜದ ವಿವಿಧ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಈ ಹೋರಾಟದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

About The Author