ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಕರಣ ಸುಬೇದಾರ ಹರ್ಷ

ಶಹಾಪೂರ : ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ವರಿಷ್ಟರು ನೇಮಕ ಮಾಡಿರುವುದು ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಮುಖಂಡರಲ್ಲಿ ಸಂತಸ ಮತ್ತು ಹರ್ಷ ತಂದಿದೆ ಎಂದು ಬಿಜೆಪಿ ಮುಖಂಡ ಕರಣ ಸುಬೇದಾರ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ  ಮಾತನಾಡಿದ ಅವರು,  ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಹಿರಿಯ ಮುತ್ಸದಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಅವರು ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಆನೆ ಬಲ ಬರಲಿದೆ.ಪಕ್ಷಕ್ಕೆ ನೀಡಿರುವ ದೀಪಾವಳಿ ಹಬ್ಬದ ಈ ಕೊಡುಗೆ ಬರಲಿರುವ ಲೋಕಸಭಾ- 2024ರ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಹ ತುಂಬಲಿದೆ.ಕಾರ್ಯಕರ್ತರು ಐಕ್ಯತೆಯಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ  ಕಾರ್ಯಾಪ್ರವೃತ್ತರಾಗಲಿದ್ದಾರೆ ಎಂದು ಅವರ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರಬಸ್ಸು ಬೀರಾಳ, ಮಲ್ಲಿಕಾರ್ಜುನ ಜಾಕಾ, ಉಮೇಶ ಮಹಾಮನಿ, ಅಬ್ದುಲ್ ಹಾದಿಮನಿ, ಶರಣಗೌಡ ಕರಣ ಸಿರವಾಳ, ಶಿವಕುಮಾರ ಶಿರವಾಳ, ಮಹೇಶ ದೊರೆ, ಸಾಯಿಬಣ್ಣ ಶಹಾಪುರ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author