ಶಹಾಪುರ : 2021-22ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕ ಮತ್ತು ಇತರ ಕಾರ್ಮಿಕ ಮಕ್ಕಳಿಗೆ ಸರಕಾರದಿಂದ ಶೈಕ್ಷಣಿಕ ಸಹಾಯಧನ ನೀಡಲು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರದೀಪ್ ಅಣಬಿ ಮನವಿ ಮಾಡಿದರು.
ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ತಹಶೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರ ಮಕ್ಕಳು ಆರ್ಥಿಕವಾಗಿ ದುರ್ಬಲರಾಗಿದ್ದು, ಇವರ ಕುಟುಂಬ ಮಕ್ಕಳಿಗೆ ಸರ್ಕಾರ ಪ್ರತಿವರ್ಷ ಶೈಕ್ಷಣಿಕ ಸಹಾಯಧನ ನೀಡುತ್ತದೆ.ಆದರೆ 2021-2022ನೇ ಸಾಲಿನಲ್ಲಿ ಯಾವುದೇ ಶೈಕ್ಷಣಿಕ ಸಹಾಯಧನ ನೀಡಿಲ್ಲ. ಜಿಲ್ಲೆಯ ಮತ್ತು ತಾಲೂಕು ಕಾರ್ಮಿಕ ಅಧಿಕಾರಿಗಳನ್ನು ವಿಚಾರಿಸಿದರೆ ಇದುವರೆಗೂ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಾರೆ. ಆದ್ದರಿಂದ ಕೂಡಲೇ ಕಾರ್ಮಿಕ ಸಚಿವರು ಸರಕಾರದ ಗಮನಹರಿಸಿ ಕಟ್ಟಡ ಕಾರ್ಮಿಕ ಮಕ್ಕಳಿಗೆ 2021-22ರ ಸಾಲಿನ ಶೈಕ್ಷಣಿಕ ಸಹಾಯಧನವನ್ನು ಮಂಜೂರು ಮಾಡಿಸಿ ಕೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಪ್ಪ ಕಟ್ಟಿಮನಿ,ಸುನಿತಾ ಹಳಿಸಗರ,ಸಂಗಪ್ಪ ಹಳಿಸಗರ, ಭೋಜಪ್ಪ ಮುಂಡಾಸ್, ಶೇಖರ್ ಕಟ್ಟಿಮನಿ, ಪರಶುರಾಮ ದಿಗ್ಗಿ, ಅಂಬರೀಶ ಸಿರವಾಳ, ಮೈಲಾರಿ ಹಳಿಸಗರ, ಶ್ರೀಶೈಲ ಪತ್ತಾರ್, ಮಾರುತಿ ಹೋತಪೇಟ,ಸಂಗಮೇಶ,ಹಣಮಂತ ಸೇರಿದಂತೆ ಇತರರು ಇದ್ದರು.
About The Author
Post Views: 307