ಮಹಾಶೈವ ಧರ್ಮಪೀಠದಲ್ಲಿ 67 ನೆಯ ಶಿವೋಪಶಮನ ಕಾರ್ಯ

ರಾಯಚೂರು (ಗಬ್ಬೂರು ನವಂಬರ್ 05,2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 05 ರ ಆದಿತ್ಯವಾರದಂದು 67 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಶ್ರೀಕ್ಷೇತ್ರ ಕೈಲಾಸದಲ್ಲಿ ಸತ್ಯಶಿವನು ನಿತ್ಯಲೀಲೆಯನ್ನಾಡುತ್ತಿರುವುದರಿಂದ ಈ ಅರವತ್ತೇಳು ವಾರಗಳ ಅಲ್ಪಕಾಲದಲ್ಲಿಯೇ ಮಹಾಶೈವ ಧರ್ಮಪೀಠದ ಕೀರ್ತಿಯು ರಾಜ್ಯ ಹೊರರಾಜ್ಯಗಳಲ್ಲಿ ಪಸರಿದ್ದರಿಂದ ಭಕ್ತರುಗಳು ಎಲ್ಲೆಡೆಯಿಂದ ಬರುತ್ತಿದ್ದಾರೆ.ಇಂದು ಹೈದರಾಬಾದ್ ನಿಂದಲ್ಲದೆ ರಾಜ್ಯದ ಶಿವಮೊಗ್ಗ,ಶಿಕಾರಿಪುರ,ಗಜೇಂದ್ರಗಡ,ಇಲಕಲ್ ಗಳಿಂದಲು ಭಕ್ತರುಗಳು ಆಗಮಿಸಿದ್ದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರುಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ್,ಉಮೇಶ ಸಾಹುಕಾರ ಅರಷಣಗಿ,ಸಿದ್ರಾಮಯ್ಯ ಹಳ್ಳಿ,ಸಿದ್ದಯ್ಯ ಮಠಪತಿ ಗಬ್ಬೂರು,ಯಲ್ಲಪ್ಪ ಕರಿಗಾರ,ಬೂದೆಪ್ಪ ಬಳ್ಳಾರಿ,ಪರಶುರಾಮ ಜಡೇರ್,ವೆಂಕಟೇಶ ಮಸೀದಪುರ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author