ನಾಡಧ್ವಜ ಸ್ತಂಭ ತೆರವು, ಅಧಿಕಾರಿಗಳ ಅಮಾನತ್ತಿಗೆ ಕರವೇ ಆಗ್ರಹ

ಶಹಾಪುರ : ಸುರಪುರ ತಾಲೂಕಿನ ರಂಗAಪೇಟೆಯ ದೊಡ್ಡ ಬಜಾರದಲ್ಲಿನ ಕನ್ನಡ ಧ್ವಜ ಸ್ತಂಭವನ್ನು ಸುರಪುರ ತಾಲೂಕು ಆಡಳಿತ ಮತ್ತು ನಗರಸಭೆ ಆಡಳಿತ ತೆರವುಗೊಳಿಸಿದ್ದು ಖಂಡನಿಯ. ಪುನಃ ಕನ್ನಡ ದ್ವಜ ಸ್ತಂಭವನ್ನು ನಿರ್ಮಿಸಿ, ತೆರವುಗೊಳಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಶಹಾಪುರ ತಾಲ್ಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿ, ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ನೂತನವಾಗಿ ನಿರ್ಮಿಸಿದ ಕನ್ನಡ ಧ್ವಜ ಸ್ತಂಭವನ್ನು ಸುರುಪೂರು ತಾಲೂಕು ಆಡಳಿತ ಏಕಾಏಕಿ ತೆರವುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಒಕ್ಕೂಟದ ತಾಲೂಕು ಅಧ್ಯಕ್ಷ ಮಲ್ಲಯ್ಯ ಸ್ವಾಮಿ ಇಟಗಿ, ಅಬ್ದುಲ್ ಹಾದಿಮನಿ, ಸುಭಾಷ್, ಭೀಮಾಶಂಕರ ಕಟ್ಟಿಮನಿ, ಸೋಪಣ್ಣ ಹಳಿಸಗರ, ಸಿದ್ದು ಪಟ್ಟೇದಾರ, ಪ್ರಭುಗೌಡ,ಪೋತರೆಡ್ಡಿ, ವೆಂಕಟೇಶ ನಾಯಕ ಆಲ್ದಾಳ, ಕಾಸಿನಾಥ, ಶೇಖರ್ ಚಂಡು ಹಳಿಸಗರ, ಸಿಎನ್ ಅರಿಕೇರಿ, ದಾವಲ್ ಸಾಬ್ ಗೋಗಿ, ಶಂಕರಗೌಡ ಪಡಶೆಟ್ಟಿ, ಭೀಮನಗೌಡ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *