ವಡಗೇರಾ ಪಟ್ಟಣದಲ್ಲಿ ಸಡಗರದ ರಾಜ್ಯೋತ್ಸವ ಆಚರಣೆ

yagiri ವಡಗೇರಾ : ಕರ್ನಾಟಕ ರಕ್ಷಣಾ ವೇದಿಕೆಯ ವಡಗೇರಾ ತಾಲೂಕು ಘಟಕದ ವತಿಯಿಂದ 68 ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ‌ ತಾಲೂಕು ಅಧ್ಯಕ್ಷರಾದ ಅಬ್ದುಲ್ ಚಿಗಾನೂರ  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾಡು ನುಡಿ ಭಾಷೆ ಜಲ ರಕ್ಷಣೆ ಹೋರಾಟವೆಂದು ಬಂದಾಗ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಮ್ಮ ಭಾಷೆ ನೆಲ ಜಲ  ಅತಿ ಪವಿತ್ರವಾದದ್ದು.  ಕನ್ನಡ ರಾಜ್ಯೋತ್ಸವವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ  ಹಬ್ಬದಂತೆ ಆಚರಿಸಬೇಕು.  ಅಂದಾಗ ಮಾತ್ರ ರಾಜ್ಯೋತ್ಸವಕ್ಕೆ ಮತ್ತಷ್ಟು ಕಳೆ ಹೆಚ್ಚುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡ ಶಿವರಾಜ ನಾಡಗೌಡ,ಪಟ್ಟಣದ ಮುಖಂಡರುಗಳಾದ ಬಸವರಾಜ ಸೊನ್ನದ,ಹೃಶಿಕೇಶ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಗಿರಿ,ವಿದ್ಯಾಧರ ಜಾಕ,ಗೌರಿಶಂಕರ ಹಿರೇಮಠ, ಬಸವರಾಜ ನೀಲಹಳ್ಳಿ,ಬಸರೆಡ್ಡಿ ಹಭಿಸಿಹಾಳ,ಸತೀಶ್ ಜಡಿ, ಮರಿಲಿಂಗ ಗೋನಾಲ, ಶ್ರೀನಿವಾಸ್ ಮಡಿವಾಳ,ರಮೇಶ್ ದೇವರೆಡ್ಡಿ, ಶರಣಯ್ಯ ಸ್ವಾಮಿ, ಪೀರಸಾಬ ಮರಡಿ,ಬಸವರಾಜ, ಮಲ್ಲು ಜಡಿ,ಸುರೇಶ,ಮೊಹಮ್ಮದ ಖತಾಲಿ, ಶರಣು ಜಡಿ,ಬಸ್ಸಯ್ಯ ಸ್ವಾಮಿ ಉಳ್ಳೆಸೂಗೂರ, ಸಾಬರೆಡ್ಡಿ ಹೊರಟೂರ,ಬಸ್ಸು ಬುಸೇನಿ,ಹಣಮಂತ ಒಡ್ಕರ, ಕೃಷ್ಣ ಟೇಲರ್, ಮಹಿಬೂಬ್ ಮುಲ್ಲಾ,ನಿಂಗಪ್ಪ ಮುನಮುಟಿಗಿ,ಶಿವು ಗೋನಾಲ,ಮೊನೋದ್ದಿನ್ ನಾಯಿಕೋಡಿ,ಹೊನ್ನಪ್ಪ ಕಲ್ಲಪ್ಪನೋರ್ಮೊಹಮ್ಮದ ಖುರೇಶಿ ರವಿ ಹಲಸೂರು ಸೇರಿದಂತೆ ಇತರರು ಇದ್ದರು.

About The Author