ಯಾದಗಿರಿ ಜಿಲ್ಲೆ ಪದವೀಧರ ಕ್ಷೇತ್ರದ ಮತದಾರರು ಹೆಸರು ನೋಂದಾಯಿಸಿ ಡಾ.ಕೃಷ್ಣಮೂರ್ತಿ ಕರೆ

ಯಾದಗಿರಿ : ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಶೀಘ್ರದಲ್ಲಿ ನಡೆಯಲಿದ್ದು, ಪದವೀಧರರು ಮತದಾನದ ಅವಕಾಶ ಪಡೆದುಕೊಳ್ಳಲು ತಹಶೀಲ್ದಾರರು ಮನವಿ ಮಾಡಿಕೊಂಡಿದ್ದಾರೆ.ಆದ್ದರಿಂದ ಕಡ್ಡಾಯವಾಗಿ ಪದವಿ ಪಡೆದವರು ಹೆಸರು ನೋಂದಾಯಿಸಬೇಕು ಎಂದು ಕೆಪಿಸಿಸಿ ಯಾದಗಿರಿ ಜಿಲ್ಲಾ ವೈದ್ಯಕೀಯ ಘಟಕದ ಅಧ್ಯಕ್ಷರಾದ ಡಾ.ಕೃಷ್ಣಮೂರ್ತಿ ರವರು ಯಾದಗಿರಿ ಜಿಲ್ಲೆಯ ಅರ್ಹ ಪದವೀಧರ ಮತದಾರರಲ್ಲಿ ಮನವಿ ಮಾಡಿದ್ದಾರೆ.
     ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನವೆಂಬರ ಆರು ನೋಂದಣಿಯ ಕೊನೆಯ ದಿನಾಂಕವಾಗಿದ್ದು, ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಮಾರ್ಗಸೂಚಿ ಅನುಸರಿಸಿ,ತಕ್ಷಣವೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು.ಆಯಾ ನಗರದ ತಹಶೀಲ ಕಾರ್ಯಾಲಯದಲ್ಲಿ ಅರ್ಜಿ ನೋಂದಣಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

Leave a Reply

Your email address will not be published. Required fields are marked *