ಯಾದಗಿರಿ ಜೆಡಿಎಸ್ ಟಿಕೆಟ್ ಶರಣಗೌಡ ಕಂದಕೂರಗೆ ?




ಬಸವರಾಜ ಕರೇಗಾರ
basavarajkaregar@gmail.com

ಯಾದಗಿರಿ:2023 ಕ್ಕೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲೆಬೇಕು ಎನ್ನುತ್ತಿರುವ ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ರಾಜ್ಯಾದ್ಯಂತ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಶಸ್ವಿ ಕಾರ್ಯಕ್ರಮದತ್ತ ಸಾಗಿದೆ.ಯಾದಗಿರಿ ಜಿಲ್ಲೆಯಲ್ಲಿರುವ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುವ ಸಂಭವವಿದೆ ಎಂದು ಜೆಡಿಎಸ್ ಪಕ್ಷದಲ್ಲಿ ಹೇಳಲಾಗುತ್ತಿದೆ ?. ಗುರುಮಿಟ್ಕಲ್ ಕ್ಷೇತ್ರದಲ್ಲಿ ಶಾಸಕರಾದ ನಾಗನಗೌಡ ಕಂದಕೂರ ತನ್ನದೆ ಆದ ನೆಲೆಯನ್ನು ಕಂಡುಕೊಂಡಿದ್ದು, ಜೆಡಿಎಸ್ ಪಕ್ಷ ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.ಕಂದಕೂರ ಜಿಲ್ಲೆಯ ಯಾದಗಿರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಚಾಣಾಕ್ಷತೆ ಹೊಂದಿರುವ ನಾಗನಗೌಡ ಕಂದಕೂರ ಪುತ್ರನಾದ ಶರಣಗೌಡರು ಯಾದಗಿರಿ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡರೆ ಗುರುಮಿಟ್ಕಲ್ ಮತ್ತು ಯಾದಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಭದ್ರಬುನಾದಿಯಾಗಿಸುವ ಮಟ್ಟದಲ್ಲಿರುವುದು ಕಂಡುಬರುತ್ತಿದೆ.ಪಕ್ಷದ ತತ್ವ ಸಿದ್ಧಾಂತ ಮತ್ತು ಗುರುಮಿಟಕಲ್ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ನಾಗನಗೌಡ ಕಂದಕೂರ ಪುತ್ರ ಯಾದಗಿರಿಯಾದ್ಯಾಂತ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡಿಗಾಗಿ ದಾರಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ?.ಜೆಡಿಎಸ್ ಪಕ್ಷವು ಶರಣಗೌಡ ಕಂದಕೂರರಿಗೆ ಟಿಕೆಟ್ ಕೊಟ್ಟರೆ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸೇರಿಸಿಕೊಂಡು ಬೃಹತ್ ಸಮಾವೇಶ ಮಾಡುವ ನಿರೀಕ್ಷೆಯಲ್ಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದಿದೆ.

ಹಣಮೇಗೌಡ ಬೀರನಕಲ್ ಗೆ ಜೆಡಿಎಸ್ ಟಿಕೆಟ್ ತಪ್ಪುತ್ತಾ ?
ಸುಮಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಯಾದಗಿರಿ ಕ್ಷೇತ್ರದಾದ್ಯಂತ ತಮ್ಮದೇ ಆದ ಕಾರ್ಯಕರ್ತರನ್ನು ಹೊಂದಿರುವ ಹಣಮೇಗೌಡ ಬೀರನಕಲ್ ರವರಿಗೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೈತಪ್ಪುತ್ತಾ ಎನ್ನುವ ಭೀತಿ ಎದುರಾಗಿದೆ ?. ಯಾದಗಿರಿ ಕ್ಷೇತ್ರದಾದ್ಯಂತ ಹಲವಾರು ಸಾಮಾಜಿಕ ಕಾರ್ಯಗಳನ್ನು,ಸಾಮೂಹಿಕ ವಿವಾಹಗಳು,ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಹಾಯ ಹಸ್ತವನ್ನು ನೀಡುವ ಹಣಮೆಗೌಡರಿಂದ ಜೆಡಿಎಸ್ ಕ್ಷೇತ್ರದಲ್ಲಿ ಬಲವಾಗಿ ನೆಲೆಯೂರಲು ಸಾಧ್ಯವಾಗಿಲ್ಲ ಎಂದು ಕಾರ್ಯಕರ್ತರ ಅಳಲಾಗಿದೆ.ಪ್ರಸ್ತುತ ಬಿಜೆಪಿಯ ಶಾಸಕರಾದ ವೆಂಕಟರೆಡ್ಡಿ ಮುಧ್ನಾಳರನ್ನು ಮುಂದಿನ ಚುನಾವಣೆಯಲ್ಲಿ ಎದುರಿಸುವುದು ಸುಲಭದ ಮಾತಲ್ಲ.ಅದಕ್ಕಾಗಿ ಶರಣಗೌಡ ಕಂದಕೂರರ ಚಾಣಾಕ್ಷತೆ ಯಾದಗಿರಿ ಕ್ಷೇತ್ರದಲ್ಲಿ ಜೆಡಿಎಸ್ ನೆಲೆಯೂರಲು ನೆರವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಇದ್ದಾರೆ ಎಂದು ಅಂದಾಜಿಸಲಾಗಿದೆ.
             ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಸಂಭವ ಹೆಚ್ಚಾಗಿದೆ.ಹಣಮೇಗೌಡ ಬೀರನಕಲ್ ಪಕ್ಷದ ಸಂಘಟನೆಯಲ್ಲಿ ಹಿಂದಿದ್ದಾರೆ ಎಂದು ಪಕ್ಷದಲ್ಲಿಯೇ ಕೇಳಿಬರುತ್ತಿದೆ.ಪಕ್ಷದ ಗೆಲುವಿಗಾಗಿ ಶರಣಗೌಡ ಕಂದಕೂರರನ್ನು ಕಣಕ್ಕಿಳಿಸಿದರೆ ಜೆಡಿಎಸ್ ಪಕ್ಷ ಗೆಲುವು ಸಾಧಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಜೆಡಿಎಸ್ ಪಕ್ಷವಿದೆ.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಂದ ಗೆಲುವು ಕಸಿದುಕೊಳ್ಳುವುದು ಸುಲಭದ ಮಾತಲ್ಲ.ಕಾಂಗ್ರೆಸ್ ಭದ್ರಕೋಟೆಯಾದ ಯಾದಗಿರಿ ಕ್ಷೇತ್ರ 2018 ರಲ್ಲಿ ಬಿಜೆಪಿ ತೆಕ್ಕೆಗೆ ಜಾರಿತು.ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರಿಗೆ ದೊರಕುವುದು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.ಜಲಧಾರೆ ಕಾರ್ಯಕ್ರಮದಲ್ಲಿ ಕೆಲವು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಾಗಲೇ ಪಕ್ಷದ ಟಿಕೆಟ್ ಗಳನ್ನು ಘೋಷಿಸಿದ್ದಾರೆ.ಆದರೆ ಯಾದಗಿರಿ ಕ್ಷೇತ್ರದಲ್ಲಿ ಯಾರಿಗೆ ಪಕ್ಷದ ಟಿಕೆಟ್ ಕೊಡಬೇಕು ಎನ್ನುವುದು ಗುಟ್ಟಾಗಿ ಉಳಿದಿದೆ.ಮುಂದಿನ ವರ್ಷ ಚುನಾವಣೆ ವರ್ಷವಾಗಿರುವುದರಿಂದ ಯಾವ ವ್ಯಕ್ತಿಗೆ ಜೆಡಿಎಸ್ ಟಿಕೆಟ್ ಕೊಟ್ಟರೆ ಗೆಲುವು ಸಾಧ್ಯ ಎನ್ನುವ ಲೆಕ್ಕಾಚಾರದ ನಿರೀಕ್ಷೆಯಲ್ಲಿ ಜೆಡಿಎಸ್ ಪಕ್ಷದಿಂದವಿದೆ ಯಾರಿಗೆ ದಕ್ಕುತ್ತದೆ ಟಿಕೆಟ್ ಕಾದುನೋಡಬೇಕಿದೆ ?.

About The Author