ಮಡ್ನಾಳ ಗ್ರಾಮಕ್ಕೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಲು ಬಲಭೀಮ ಮಡ್ನಳ ಆಗ್ರಹ

ಶಹಪುರ : ತಾಲೂಕಿನ ಮಡ್ನಾಳ್ ಗ್ರಾಮದಿಂದ ಶಹಪುರಕ್ಕೆ ಹೋಗುವ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಶಹಪುರದ ಘಟಕದ ಸಾರಿಗೆ ನಿಗಮ ವ್ಯವಸ್ಥಾಪಕರು ಮಡ್ನಾಳ್ ಗ್ರಾಮಕ್ಕೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಿಕೊಡಬೇಕೆಂದು ಕಾಂಗ್ರೆಸ್ ಮುಖಂಡರಾದ ಬಲಭೀಮ ಮಡ್ನಳ ಆಗ್ರಹಿಸಿದ್ದಾರೆ.

ಶಹಪುರದಿಂದ ಸುಮಾರು ಐದಾರು ಕಿಲೋಮೀಟರ್ ದೂರದಲ್ಲಿರುವ ಮಡ್ನಾಳ್ ಗ್ರಾಮ ಸೇರಿದಂತೆ ಆ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಶಾಲಾ ಮಕ್ಕಳು ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದ ಕಾರಣ ಇರುವ ಬಸ್ ಗಳಲ್ಲಿ ಅತಿಯಾದ ಜನರು ಪ್ರಯಾಣಿಸುತ್ತಿರುವ ಕಾರಣದಿಂದಾಗಿ ಶಹಪುರ ನಗರಕ್ಕೆ ಬರುವ ಶಾಲೆಯ ಮಕ್ಕಳಿಗೆ ಬಸ್ ದೊರಕದಂತಾಗಿ, ಶಾಲೆಯಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ದಿನವಿಡೀ ಇದೇ ಪರಿಸ್ಥಿತಿ ಇದೆ. ಆದಕಾರಣ ಸಂಬಂಧಪಟ್ಟ ತಾಲೂಕು ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕರು ಗಮನಹರಿಸಿ ಶಾಲಾ ಮಕ್ಕಳಿಗೆ ಬಸ್ ಸೌಕರ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *