ಶಹಾಪುರ : ಇಂದು ನಮ್ಮ ಕರ್ನಾಟಕ ಸೇನೆ ಶಹಾಪುರ ತಾಲೂಕ ಘಟಕದ ವತಿಯಿಂದ ತಾಲೂಕ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದು ಕೂಡಲೆ ತನಿಖೆ ನಡೆಸಿ ಸಿಡಿಪಿಓ ಮೀನಾಕ್ಷಿ ಪಾಟೀಲ ರವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು. ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಾಧ ಭೀಮಣ್ಣ ಶಖಾಪುರ ನೇತೃತ್ವದಲ್ಲಿ ಸಿ ಡಿ ಪಿ ಓ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಯಾದಗಿರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
Video Player
00:00
00:00
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಂಗಯ್ಯ ಮುಸ್ತಾಜೀರ, ಶಹಾಪುರ ತಾಲೂಕ ಅಧ್ಯಕ್ಷರಾದ ಸಿದ್ದು ಪಟ್ಟೇದಾರ್, ಅಮರೇಶ ತೆಲಗೂರ, ಭೀಮರಾಯ ಬಸವಂತಪುರ, ನಿಂಗಪ್ಪ ಮೂಗಿ, ಸಂಗಮೇಶ ರಾಜಾಪುರ, ರಾಜಶೇಖರ ಗುಂಡಗುರ್ತಿ, ಮಲ್ಲಣ್ಣಗೌಡ, ರಾಮಲಿಂಗಪ್ಪ, ಸಕ್ಮೀರ್ ಕನ್ಯಾಕೊಳುರ, ಚಂದ್ರು ಹಲಗಿ, ಶಂಕರ, ರಾಯಣ್ಣ ಹೊತಪೇಠ, ದೇವು, ಚಾಂಸಪಾಶಾ, ರವಿ ಯಾದವ, ದೇವು ಮಕ್ತಾಪೂರ, ಮಲ್ಲಿಕಾರ್ಜುನ, ರವಿ, ಮಾಳಪ್ಪ, ಸಾಯಬಣ್ಣ, ಮಲ್ಲಿಕಾರ್ಜುನ ಆರಬೋಳ, ಸಾಯ್ಬಣ್ಣ ರಾಜಪುರ್, ಮೆಷುಕ್, ಸೈಯಾದ, ಅಯ್ಯಪ್ಪ ಭಂಡಾರಿ ಸೇರಿದಂತೆ ಇತರರು ಇದ್ದರು.