ಸ್ವಯಂ ಉದ್ಯೋಗ ಜಿಲ್ಲಾಮಟ್ಟದ ಸಮಿತಿಯಲ್ಲಿ ಸಾಹೇಬ್ ಜಾನಿ ಆಯ್ಕೆ

ಶಹಾಪುರ: ಸ್ವಯಂ ಉದ್ಯೋಗ ಆಧಾರ್ ಯೋಜನೆಯ ಯಾದಗಿರಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನಾಮ ನಿರ್ದೇಶಕ ಸದಸ್ಯರಾಗಿ ಶಹಾಪುರ ತಾಲೂಕಿನ ಸಾಹೇಬ್ ಜಾನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಲ್ಲಯ್ಯ ಸ್ವಾಮಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಸಾಹೇಬ್ ಜಾನಿ ಸುಮಾರು 10 ವರ್ಷಗಳಿಂದ ಜಿಲ್ಲೆಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಹೋರಾಟ ನಡೆಸಿದ್ದಾರೆ. ಜಿಲ್ಲಾಮಟ್ಟದಲ್ಲಿ ಆಯ್ಕೆಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹತ್ತಿಗುಡುರು, ಬಸವರಾಜ ಪ್ರವೀಣ್ ಕುಮಾರ್ ಶರಬಣ್ಣ ರಸ್ತಾಪುರ, ರವಿ ಆಟೋ ಚಾಲಕರ ಅಧ್ಯಕ್ಷ ಅಂಬ್ಲಪ್ಪ ಸುರಪುರಕರ್ ಯಕಬಾಲ್ ಪಟೇಲ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *