ಕ್ರೀಡೆಯಿಂದ ಮನಸು ಬದಲಾವಣೆ:ಡಾ:ಶರಣು ಗದ್ದುಗೆ

ವಡಗೇರಾ: ತಾಲೂಕಿನ ಕಾಡಂಗೇರಾ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಅಂಡರ್ 20 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನಾ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷರಾದ ಡಾ ಶರಣು ಬಿ ಗದ್ದುಗೆ ಉದ್ಘಾಟನಾ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಯಿಂದ ನಮ್ಮ ಮಾನಸಿಕ ಸಮಸ್ಯೆಗಳನ್ನು ದೂರವಿಡಲು ಸಾದ್ಯ ಹಾಗೂ ಆಟಗಾರರಿಗೆ ಸೋಲು ಗೆಲುವು ಪಂದ್ಯದಲ್ಲಿ ಸರಿಸಮನಾಗಿ ಸ್ವೀಕರಿಸಬೇಕು.ಗ್ರಾಮೀಣ  ಪ್ರದೇಶಗಳಲ್ಲಿ ಕ್ರೀಡೆ ಹೆಚ್ಚು ಬೆಳೆಸುವುದು ನಮ್ಮ ನಿಮ್ಮಲರ ಕರ್ತವ್ಯ ವಾಗಿದೆ ಎಂದು ಸಲಹೆ ನೀಡಿದರು.

ಕನ್ನಡ ಪರ ಒಕ್ಕೂಟದ ಶಹಾಪೂರ ತಾಲ್ಲೂಕಿನ ಅಧ್ಯಕ್ಷರಾದ ಮಲ್ಯಯ್ಯ ಸ್ವಾಮಿ ಇಟಗಿ ಡಾ ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು ಕಲೆ ಸಾಹಿತ್ಯ ಕ್ರೀಡೆ ಉಳಿಸುವದು ಈಗಿನ ಯುವಕರ ಜವಾಬ್ದಾರಿ. ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಒಂದು ಚಟುವಟಿಕೆಯಿಂದ ಕ್ರೀಡಾ ಆಸಕ್ತಿ ಹೊಂದಿರುತಾರೆ. ಅವರಿಗೆ ನಾವು ಸಹಕಾರ ನೀಡುತ್ತಾ ಬಂದರೆ ಗ್ರಾಮೀಣ ಮಕ್ಕಳು ಬೆಳಯಲು ಸಾದ್ಯ ಎಂದು ಹೇಳಿದರು.

ಸಂಸ್ಥೆಯ ಆಯೋಜಕರಾದ ಶರಣು ಎಸ್ ನಾಯ್ಕೋಡಿ ಅದ್ಯಕ್ಷತೆ ವಹಿಸಿ ಮಾತನಾಡಿದ ಕ್ರೀಡಾ ಲೋಕ ಒಂದು ಮನರಂಜನೆ ಇದ್ದಂತೆ. ನಮ್ಮ ಆರೋಗ್ಯ ಕ್ರೀಡೆಯಿಂದ ಬಲಿಷ್ಠ ಗೊಳ್ಳುತ್ತದೆ ಎಂದು ಯುವಕರಿಗೆ ಸಲಹೆ ನೀಡಿದರು. ಶ್ರೀಮಂತ ಗಾಡಿ ವೆಂಕಟೇಶ ಪಾಟೀಲ್ ಶರಣು ಸಾಹುಕಾರ್ ಸಿದ್ದರಾಮಪ್ಪ ಪಾಟೀಲ್ ಮಲ್ಲಿಕಾರ್ಜುನ ನಾಯ್ಕೋಡಿ ವಿಶ್ವನಾಥ ನಾಯ್ಕೋಡಿ ಹಲವಾರು ಕ್ರೀಡಾ ಯುವಕರು ಮತ್ತು ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು

About The Author