ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು.ಶ್ರದ್ಧಾಭಕ್ತಿಯಿಂದ ಜರುಗಿದ ಹನುಮ ಜಯಂತಿ

ಶಹಾಪುರ: ಸಂಜೀವರಾಯರ (ಹನುಮಂತನ) ಸ್ಮರಣೆ ಮಾಡಿದ ಮೇಲೆ ಸರ್ವ ಸಂಕಷ್ಟಗಳು ದೂರವಾಗಿ, ಸರ್ವರಿಗೂ ಆರೋಗ್ಯ ಆಯಸ್ಸು, ಯಶಸ್ಸು ದೊರೆಯುತ್ತದೆ ಎಂದು ಅರ್ಚಕರಾದ ಗುರುರಾಜಾಚಾರ್ಯ ಕೊಪ್ಪರÀ ತಿಳಿಸಿದರು.ನಗರದ ಹಳೇಪೇಟೆಯಲ್ಲಿ ಹನುಮಜಯಂತಿ ನಿಮಿತ್ಯ ಬೆಳಗ್ಗೆ ಹರಿ,ವಾಯು,ಗುರುಗಳ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ ಸಂದರ್ಭದಲ್ಲಿ ಪವಮಾನ ಹೋಮ ನೆರವೇರಿಸಿ ಅಭಿಪ್ರಾಯ ಹಂಚಿಕೊಂಡ ಅವರು, ಪ್ರಭು ಶ್ರೀರಾಮಚಂದ್ರನ ಪರಮಬಂಟನಾಗಿ ನಂಬಿದ ಭಕ್ತರ ಪೊರೆವ ಹನುಮಂತನ ಸೇವೆಯಲ್ಲಿ ಪಾಲ್ಗೊಂಡ ಸರ್ವರಿಗೂ ಶ್ರೇಯಸ್ಸು ಲಭಿಸಲಿ ಎಂದರು.

ಶಹಾಪುರ ನಗರದ ಹಳೆಪೇಟೆಯಲ್ಲಿ ಹನುಮಜಯಂತಿ ನಿಮಿತ್ಯ ಅರ್ಚಕ ಗುರುರಾಜಾಚಾರ್ಯ ಕೊಪ್ಪರ ನೇತೃತ್ವದಲ್ಲಿ ಪವಮಾನ ಹೋಮ ಜರುಗಿತು

ಬೆಳಗ್ಗೆ ವಿಶೇಷ ಪೂಜೆ ರಥೋತ್ಸವ, ಭಕ್ತಾದಿಗಳಿಗೆ ತೀರ್ಥಪ್ರಸಾದದ ವ್ಯವಸ್ಥೆ ಗುಂಡೇರಾವ ದೇಶಪಾಂಡೆ ಪರಿವಾರದ ವತಿಯಿಂದ ಕಲ್ಪಿಸಲಾಗಿತ್ತು, ಪಂಡಿತರಾದ ಅನಂತಾಚಾರ್ಯ ಕೊಪ್ಪರ, ಅರ್ಚಕ ವಿಠ್ಠಲಾಚಾರ್ಯ ಪ್ರತಿನಿಧಿ, ನರಸಿಂಹಚಾರ್ಯ ರೊಟ್ಟಿ, ಹಿರಿಯರಾದ ಭಾಸ್ಕರರಾವ ಮುಡಬೂಳ, ಡಾ.ರಾಮರಾವ ಕುಲ್ಕರ್ಣಿ, ರಾಘವೇಂದ್ರರಾವ ಸರ್ನಾಡ, ತಿರುಮಲಾಚಾರ್ಯ ಭಕ್ರಿ, ಕೊನೇರಾಚಾರ್ಯ ಸಗರ, ರಮೇಶ ದೇಶಪಾಂಡೆ, ಸತ್ಯನಾರಾಯಣ ದೇಸಾಯಿ, ವಿಠ್ಠಲರಾವ ಕುಲ್ಕರ್ಣಿ, ವಾಸುದೇವ ಬೀರನೂರು, ಮಧ್ವಚಾರ್ಯ ಜೋಶಿ, ಜೀವನರಾವ ಕುಲ್ಕರ್ಣಿ, ಕಿರಣಭಟ್ಟ ಜೋಶಿ, ರಾಮಕೃಷ್ಣ ತಿಪ್ಪನಹಳ್ಳಿ, ವಾದಿರಾಜ ಕುಲಕರ್ಣಿ, ಮಾರುತಿ ಕುಲಕರ್ಣಿ, ಶಾಮಸುಂದರ, ಗುರುರಾಜ, ಗುಂಡೇರಾವ ಕುಲ್ಕರ್ಣಿ, ಸುಧೀಂದ್ರರಾವ ಯಾಟ್ಗಲ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು, ಮಹಿಳಾ ಭಜನಾ ಮಂಡಳಿಯವರಿಂದ ಲಕ್ಷ್ಮೀಶೋಭಾನೆ ಪ್ರಸ್ತುತಪಡಿಸಿದರು.

About The Author