ಬಸವಂತಪುರ ಗ್ರಾಮದ ಶುದ್ಧ ಕುಡಿಯುವ ನೀರಿನ ಕೊರತೆಯಾಗದಂತೆ ನಡೆಸಿಕೊಂಡು ಬಂದ ಹೊರಗುತ್ತಿಗೆ ಸಿಬ್ಬಂದಿ

ಯಾದಗಿರಿ : ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸರಕಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರತಿ ಗ್ರಾಮಗಳಲ್ಲಿ ಸ್ಥಾಪಿಸುವಂತೆ ಹೊರಗುತ್ತಿಗೆ ಎನ್ಜಿಓ ದವರಿಗೆ ನೀಡಿತ್ತು. ಕೆಲವು ಜಿಲ್ಲೆಗಳಲ್ಲಿ ಪಲಪ್ರದವಾದರೆ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗದೆ ಕೆಟ್ಟು ನಿಂತಿವೆ. ಕೆಲವು ಕಡೆ ದುರಸ್ತಿಯಾದರೆ ಇನ್ನು ಕೆಲವು ಕಡೆ ಪಾಳು ಬಿದ್ದಿವೆ.

ಬಸವಂತಪುರ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ 
****
ಯಾದಗಿರಿ ಜಿಲ್ಲೆಯಲ್ಲಿಯೂ ಕೂಡ ಅದೇ ಸ್ಥಿತಿ. ಕೆಲವೊಂದು ಕಡೆ ಸುರಕ್ಷಿತವಾಗಿ ನಡೆಸಿಕೊಂಡು ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಇದರಲ್ಲಿ ಹೊರಗುತ್ತಿಗೆ ಎನ್ಜಿಓದವರ  ಸಹಕಾರ ಅಗತ್ಯ. ಅದರಲ್ಲಿ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬಸವಂತಪುರ ಗ್ರಾಮದಲ್ಲಿ ಆರಂಭದಿಂದಲೂ ಶುದ್ಧ ಕುಡಿಯುವ ನೀರಿನ ಘಟಕವು ಇಂದಿನವರೆಗೂ ಶುದ್ಧ ನೀರನ್ನು ಗ್ರಾಮೀಣ ಜನತೆಗೆ ನೀಡುತ್ತಿದೆ. ಇದಕ್ಕೆ ಘಟಕದ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವ ಸಿಬ್ಬಂದಿಯವರಾದ ನಿಂಗಣ್ಣ ಮತ್ತು ಅಯ್ಯಣ್ಣನವರೆ ಕಾರಣ ಎನ್ನುತ್ತಾರೆ ಗ್ರಾಮಸ್ಥರು.
ಸುಮಾರು ಹತ್ತು ವರ್ಷ ಕಳೆದರೂ ಯಾವುದೇ ಅಡೆತಡೆಯಾಗದಂತೆ ಅಲ್ಲಿನ ಸಿಬ್ಬಂದಿಯವರು ಶುದ್ಧ ನೀರಿನ ಘಟಕವನ್ನು ನಡೆಸಿಕೊಂಡು ಹೋಗುತ್ತಿರುವುದು ಪ್ರಶಂಸನೀಯ.ಶುದ್ದ ನೀರಿನ ಘಟಕವು ಕೆಟ್ಟ ಸಂದರ್ಭದಲ್ಲಿ ಮುತುವರ್ಜಿ ವಹಿಸಿ ಗ್ರಾಮದ ಜನರಿಗೆ ತೊಂದರೆಯಾಗದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಿ ಕೊಡುತ್ತಿದ್ದಾರೆ ಸಿಬ್ಬಂದಿಯವರು. ಹೊರಗುತ್ತಿಗೆಯಲ್ಲಿ ಸಿಬ್ಬಂದಿಯವರು ಕೆಲಸ ಮಾಡುತ್ತಿದ್ದರು ಕೂಡ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
*****
ಬಸವಂತಪುರ ಗ್ರಾಮದ ಶುದ್ಧ ಕುಡಿಯುವ ನೀರನ್ನು ಬೆಳಿಗ್ಗೆಯಿಂದ ರಾತ್ರಿ ಸುಮಾರು 10 ಗಂಟೆವರೆಗೂ ಸತತವಾಗಿ ಮುಂದುವರಿಯುತ್ತಾ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ. ಈ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಮುನ್ಮುಟಗಿ, ಹಯ್ಯಳ ಬಿ, ಮದರ್ಕಲ್ ಸೇರಿದಂತೆ ಇತರ ಗ್ರಾಮೀಣ ಪ್ರದೇಶಗಳ ಜನರು ಕೂಡ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆ ಮಾಡಿದರೆ ಸಾಲದು. ಅದನ್ನು ನಿರ್ವಹಿಸಿಕೊಂಡು ಹೋಗುವ ಸಿಬ್ಬಂದಿಯವರ ಕಾಳಜಿಯು ಕೂಡ ಪ್ರಮುಖವಾಗಿರುತ್ತದೆ. ಅದನ್ನು ಇಲ್ಲಿನ ಸಿಬ್ಬಂದಿಯವರು ನಿರ್ವಹಿಸಿರುವುದು ಸಮರ್ಥನೀಯ.

About The Author