ಯಾದಗಿರಿ ಜಿಲ್ಲಾಡಳಿತದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯಾದಗಿರಿ : ಇಂದು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 9 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಯಾದಗಿರಿ ಮತಕ್ಷೇತ್ರ ರವರು ಉದ್ಘಾಟಿಸಿದರು.

ಈ ವೇಳೆ ಶ್ರೀಮತಿ ಸ್ನೇಹಲ್ ಆರ್ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ, ಶ್ರೀ ಮತಿ ಗರಿಮಾ ಪನ್ವಾರ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಯಾದಗಿರಿ, ಶ್ರೀ ಡಾ|| ಸಿ.ಎಸ್, ವೇದಮೂರ್ತಿ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಪತಂಜಲಿ ಸಂಸ್ಥೆಯ ಯೋಗ ಗುರುಗಳಾದ ಶ್ರೀ ಅನಿಲ ಗುರುಜಿ ಯವರಿಂದ ಯೋಗ ಪ್ರದರ್ಶನ ನೆರವೇರಿಸಿದರು.


ರಾಷ್ಟ್ರ / ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಜಿಲ್ಲೆಯ ಯೋಗ ಪಟುಗಳು ಮತ್ತು ಹಿರಿಯ ಯೋಗಪಟಗಳನ್ನು ಜಿಲ್ಲಾಡಳಿತ ವತಿಯಿಂದ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ, ಶ್ರೀ ಶಾಲಂ ಹುಸೇನ್ ಸಹಾಯಕ ಆಯುಕ್ತರು ಯಾದಗಿರಿ, ಆಯುಷ್ಯ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಡಾ|| ವಂದನಾ ಕಾಳೆ, ಶ್ರೀ ರಾಜು ಬಾವುಳೆ ಸಹಾಯಕ ನಿರ್ದೇಶಕರು ಯುವ ಸಬಿಲೀಕರಣ & ಕ್ರೀಡಾ ಇಲಾಖೆ ಯಾದಗಿರ ರವರು ಸೇರಿದಂತೆ ಶಿಬಿರಾರ್ಥಿಗಳು, ಇತರೆ ಇಲಾಖೆಯ ಅಧಿಕಾರಿ, ಸಿಬ್ಬಂದಿಯವರು ಭಾಗವಹಿಸಿದ್ದರು.

About The Author