ದೇವದುರ್ಗ ಕರಿಯಮ್ಮ ಗೆಲುವು ಮಹಾಶೈವ ಪೀಠಕ್ಕೆ ಭೇಟಿ

ದೇವದುರ್ಗ : ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಭರ್ಜರಿ ಗೆಲುವು ದಾಖಲಿಸಿದ್ದು,ಶ್ರೀಮತಿ‌ ಕರಿಯಮ್ಮ  ನಾಯಕ್ 34000 ಮತಗಳಿಗಿಂತಲೂ ಅಧಿಕ ಮತಗಳನ್ನು ಪಡೆದು ದೇವದುರ್ಗದ ಶಾಸಕರಾಗಿ ಆಯ್ಕೆಯಾದ ಕೂಡಲೆ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಶ್ರೀಕ್ಷೇತ್ರದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ,ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿ ಹಾಗೂ ಕ್ಷೇತ್ರರಕ್ಷಕಿ ಮಹಾಕಾಳಿಯರ ದರ್ಶನಾಶೀರ್ವಾದ ಪಡೆದು ಕೃತಜ್ಞತಾಪೂರ್ವಕವಾದ ಭಕ್ತಿಪೂರ್ವಕ ನಮನಗಳನ್ನರ್ಪಿಸಿದರು.ಈ ಸಂದರ್ಭದಲ್ಲಿ ಮಹಾ ಶೈವ ಪೀಠದ ಅಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ರವರ ಭೇಟಿ ಮಾಡಿದರು.ಮಹಾಶೈವ ಧರ್ಮಪೀಠದಿಂದ  ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಅವರನ್ನು ಸನ್ಮಾನಿಸಿ,ಆಶೀರ್ವದಿಸಲಾಯಿತು.ಮಹಾಶೈವ ಧರ್ಮಪೀಠದ ಭಕ್ತರು ಹಾಗೂ ಜೆಡಿಎಸ್ ಪಕ್ಷದ ಪ್ರಮುಖರು,ಕಾರ್ಯಕರ್ತರುಗಳು ಇದ್ದರು.

Leave a Reply

Your email address will not be published. Required fields are marked *