ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ ಅಕ್ರಮ ! ರಾಜಕೀಯ ಪ್ರಭಾವಿ ನಾಯಕರ ಪ್ರವೇಶ ಶಂಕೆ ! ನಾನ್ ಸೆಲೆಕ್ಟ್ ಆದರೂ ಸಂದರ್ಶನಕ್ಕೆ ಕರೆ ? RTI ಮೊರೆ !

ಬಸವರಾಜ ಕರೇಗಾರ

ಶಹಾಪೂರ,,

ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ ಹುದ್ದೆಗಳ ಆಯ್ಕೆಯಲ್ಲಿ ಅಕ್ರಮದ ಆರೋಪ ಬಲವಾಗಿ ಕೇಳಿ ಬರುತ್ತಿದ್ದು, ಜೊತೆಗೆ ರಾಜಕೀಯ ಮುಖಂಡರ ಅದು ಪ್ರಭಾವಶಾಲಿ ರಾಜಕೀಯ ಮುಖಂಡರ ಕೈಚಳಕ ನಡೆದಿದೆ ಎಂದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ ಎನ್ನಲಾಗಿದೆ?.ನೋಟಿಫಿಕೇಶನ್ ಆದಾಗಿನಿಂದಲೂ ಒಂದಿಲ್ಲ ಒಂದು ರೀತಿಯ ಅಕ್ರಮ ವಾಸನೆ ಕೇಳಿ ಬರುತ್ತಿದೆ. ನೇಮಕಾತಿಯಲ್ಲಿ ಒಳ ಮೀಸಲಾತಿ ಅಳವಡಿಸಿಲ್ಲ ಎಂದು ಕಲಬುರ್ಗಿ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದರೂ ಪ್ರಯೋಜನವಾಗಿಲ್ಲ. ಬ್ಯಾಂಕಿನ ನೇಮಕಾತಿ ಪ್ರಾಧಿಕಾರ ಸಂದರ್ಶನಕ್ಕೆ ಸೂಚನೆ ನೀಡಿದೆ.

ಸಂದರ್ಶನದ ದಿನಾಂಕ ಪ್ರಕಟಿಸಿದ ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ ಪ್ರಾಧಿಕಾರವು ಸಂದರ್ಶನದಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಎನ್ನಲಾಗಿದೆ!

1:5 ರ ಅಡಿಯಲ್ಲಿ ಸಂದರ್ಶನಕ್ಕೆ ಕರೆಯುವುದರಲ್ಲಿ ಪ್ರಬಲ ಸಮುದಾಯದವರನ್ನೇ ತೆಗೆದುಕೊಳ್ಳುತ್ತಾರೆ ಎನ್ನುವ ಅನುಮಾನಗಳು ಜಿಲ್ಲೆಯಾದ್ಯಂತ ಪಸರಿಸುವೆ ಎನ್ನಲಾಗಿದೆ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರು ವ್ಯರ್ಥ ಎಂದು ಕೆಲವು ಅಭ್ಯರ್ಥಿಗಳು ಕೈಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರೋಸ್ಟರ್ ಅಳವಡಿಸದೆ ನೇಮಕಾತಿ ಮಾಡಿದೆ ಎಂದು ಕೆಲ ಸಂಘಟನೆಗಳು ಜಿಲ್ಲಾಧಿಕಾರಿಗಳು ಮತ್ತು ಬ್ಯಾಂಕ್ ನೇಮಕಾತಿ ಪ್ರಾಧಿಕಾರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರೂ ಆಡಿಸಿಸಿ ಬ್ಯಾಂಕ್ ನೇಮಕಾತಿ ಪ್ರಾಧಿಕಾರ ಕ್ಯಾರೆ ಎನ್ನುತ್ತಿಲ್ಲ.

ರಾಜಕೀಯ ಪ್ರದೇಶ ಆತಂಕದಲ್ಲಿ ನೇಮಕಾತಿ !

ಬ್ಯಾಂಕಿನ ನೇಮಕಾತಿಯಲ್ಲಿ ಪ್ರಬಲ ರಾಜಕೀಯ ಮುಖಂಡರ ಪ್ರವೇಶ ಮಾಡಿದೆ ಎನ್ನುವ ಸುದ್ದಿ ಜಿಲ್ಲೆಯಾದ್ಯಂತ ಹರಡಿದೆ ಎನ್ನಲಾಗಿದೆ! ರಾಷ್ಟ್ರೀಯ ಮತ್ತು ರಾಜ್ಯದ ಅತ್ಯಂತ ಪ್ರಭಾವಶಾಲಿ ನಾಯಕರು ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕರ ಮೇಲೆ ಒತ್ತಡ ಏರಿದ್ದಾರೆ ಎನ್ನಲಾಗಿದೆ.

ಜಿಲ್ಲೆಯ ಪ್ರಬಲ ರಾಜಕೀಯ ನಾಯಕರ ಸಂಬಂಧಿಕರನ್ನು ತೆಗೆದುಕೊಳ್ಳಬೇಕು ಎನ್ನುವ ಒತ್ತಡ ನೇಮಕಾತಿ ಪ್ರಾಧಿಕಾರದ ಮುಂದಿದೆ ಎನ್ನುವ ಮಾತುಗಳು ಪಿಸುಗುಟ್ಟುತ್ತಿವೆ!

ಇನ್ನು ಅನುಮಾನ ಹೆಚ್ಚಾಗಲು ದಾಖಲಾತಿ ಪರಿಶೀಲನೆ ಇಲ್ಲದೆ ನೇರ ಸಂದರ್ಶನಕ್ಕೆ ಕರೆ ಪತ್ರ ಹೋಗಿದೆ ಎನ್ನಲಾಗಿದ್ದು, ನಾನು ಸೆಲೆಕ್ಟ್ ಎಂದು ಬಂದಿರುವ ವ್ಯಕ್ತಿಗೆ ಸಂದರ್ಶನ ಪತ್ರ ಹೋಗಿದೆ ಎನ್ನಲಾಗಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 

ನೇಮಕಾತಿ ಸ್ಥಗಿತವಾಗಿಲ್ಲ ಏಕೆ !

ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹಲವು ಸಂಘಟನೆಗಳು ಮನವಿ ಮಾಡಿದರೂ ಬ್ಯಾಂಕ್ ನೇಮಕಾತಿ ಪ್ರಾಧಿಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಒಳಮೀಸಲಾಯಿ ಅಳವಡಿಸಿಕೊಂಡಿಲ್ಲ. ಬೇಕಾಬಿಟ್ಟಿ ಸಂದರ್ಶನಕ್ಕೆ ಕರೆ ಮಾಡಿದ್ದಾರೆ. ಒಳಮೀಸಲಾತಿ ಜಾರಿಯಾಗಿಲ್ಲ. ಮೇ ತಿಂಗಳ ನಂತರ ಪ್ರಸ್ತುತ ಇರುವ ನಿರ್ದೇಶಕ ಅವಧಿ ಮುಗಿಯುತ್ತದೆ ಎನ್ನಲಾಗಿದ್ದು! ಅದಕ್ಕಿಂತ ಮುಂಚೆಯೇ ಎಲ್ಲವೂ ನೇಮಕ ಮಾಡಿ ಮುಗಿಸಬೇಕು ಎನ್ನುವ ಉದ್ದೇಶದಿಂದ ಅವಸರವಾಗಿ ನೇಮಕಾತಿಯನ್ನು ಸಂಪೂರ್ಣವಾಗಿ ಮುಗಿಸುವ ಉದ್ದೇಶ ಒಂದಿದೆ ಎನ್ನಲಾಗಿದೆ! ಸರಕಾರದ ಕೆಲವು ನೇಮಕಾತಿ ಸೂಚನೆ ಹೊರಡಿಸಿದ್ದರೂ ಕೆಲವು ನೇಮಕಾತಿಗಳು ಒಳ ಮೀಸಲಾತಿಗಾಗಿ ಸ್ಥಗಿತಗೊಳಿಸಲಾಗಿದೆ. ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ ಸ್ಥಗಿತಗೊಳಿಸಿದೆ. ಆದರೆ ರಾಯಚೂರು ಡಿಸಿಸಿ ಬ್ಯಾಂಕ್ ಮಾತ್ರ ಯಾವುದಕ್ಕೂ ಮಣಿಯದೆ ಯಾರನ್ನು ಕ್ಯಾರೆ ಮಾಡುತ್ತಿಲ್ಲ ಎನ್ನಲಾಗಿದೆ.

ಡಿಸಿಸಿ ಬ್ಯಾಂಕುಗಳು ರಾಜ್ಯಾದ್ಯಂತ ಕೆಲವೇ ಸಮುದಾಯದ ಕಪಿ ಮುಷ್ಟಿಗಳಲ್ಲಿರುವುದರಿಂದ ಇದೇ ರೀತಿಯಾಗಿ ನೇಮಕಾತಿಗಳು ನಡೆಯುತ್ತಿರುತ್ತವೆ. ಸರ್ಕಾರದ ಅಧಿಸೂಚನೆಗಳನ್ನು ಅನ್ವಯಿಸಿಕೊಂಡು ನೇಮಕಾತಿಯನ್ನು ಕರೆದು ಒಳಗೊಳಗೆ ಬೇಕಾಬಿಟ್ಟಿಯಾಗಿ ನೇಮಕಾತಿ ಮಾಡಿ ಕೊಳ್ಳುತ್ತಿರುವುದು ಕೆಲವೇ ಸಮುದಾಯಗಳಿಗೆ ಲಾಭದಾಯಕವಾಗಿವೆ ಎನ್ನುವ ಕೂಗು ರಾಜ್ಯಾದ್ಯಂತ ಕೇಳಿ ಬರುತ್ತಿದ್ದು, ಸರ್ಕಾರ ಡಿಸಿಸಿ ಬ್ಯಾಂಕುಗಳ ನಿರ್ದೇಶಕರ ಆಯ್ಕೆ ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ಸಾರ್ವಜನಿಕರ ಒತ್ತಾಯ. ಸರ್ಕಾರ ಕೆಲವು ಸಮುದಾಯಗಳ ಪ್ರಭಾವಕ್ಕೆ ಮಣಿದು ಮೀಸಲಾತಿ ಜಾರಿಗೆ ತರುತ್ತಿಲ್ಲ ಎನ್ನುವ ಕೂಗು ರಾಜ್ಯಾದ್ಯಂತ ಕೇಳಿ ಬರುತ್ತಿದೆ.ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕುಗಳಲ್ಲಿ ಮೀಸಲಾತಿ ಜಾರಿಗೆ ತಂದರೆ ಎಲ್ಲಾ ಸಮುದಾಯಕ್ಕೂ ಸಮಾನತೆ ದೊರಕಿದಂತಾಗುತ್ತದೆ. ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಕಾದುನೋಡಬೇಕಿದೆ.

ಮಾಹಿತಿ ಹಕ್ಕಿನ (RTI) ಮೊರೆ 

ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಳ್ಳಬೇಕಾದರೆ ಮಾಹಿತಿ ಹಕ್ಕಿನ (RTI) ಮೊರೆಹೋಗುವುದು ಉಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಪಡೆಯಲು ಕೆಲವರು ಮಾಹಿತಿ ಹಕ್ಕಿನ ಮೊರೆ ಹೋಗಬಹುದು ಎನ್ನಲಾಗಿದೆ ?