ಶಹಾಪುರದಲ್ಲಿ ಧಾರಾಕಾರ ಮಳೆ : ಬಸವೇಶ್ವರ ವೃತ್ತದಲ್ಲಿ ಆವರಿಸಿಕೊಂಡ ನೀರು : ಅವೈಜ್ಞಾನಿಕ ಚರಂಡಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ಶ‌ಹಾಪುರ,,

ಶಹಾಪುರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಬಸವೇಶ್ವರ ವೃತ್ತ ಸೇರಿದಂತೆ ನಗರದ ಹಲವೆಡೆ ಬಾರಿ ಪ್ರಮಾಣದಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಮಳೆಯ ನೀರಿನ ಜೊತೆಗೆ ಚರಂಡಿ ನೀರು ಸೇರಿ ರಸ್ತೆಗಳು ಕಾಲುವೆಗಳಾಗಿ ಮಾರ್ಪಟ್ಟಂತಾಗಿವೆ. ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಹರಿಯುವುದರಿಂದ ವಾಹನಗಳು ಓಡಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಸವೇಶ್ವರ ವೃತ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ವಾಹನ ಸವಾರರು ಓಡಾಡಲು ಪರದಾಡುವಂತಹ ಸ್ಥಿತಿ ಕೆಲ ಹೊತ್ತು ನಿರ್ಮಾಣವಾಗಿತ್ತು.

ಅವೈಜ್ಞಾನಿಕ ಚರಂಡಿ ಕಾಮಗಾರಿಗೆ ಆಕ್ರೋಷ

ಕೆಲವು ದಿನಗಳ ಹಿಂದೆ ರಸ್ತೆಗಳ ಮೇಲೆ ಚರಂಡಿಯ ನೀರು ಹರಿಯುವುದನ್ನು ತಡೆಗಟ್ಟಲು ದೊಡ್ಡ ಮಟ್ಟದ ಚರಂಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಮೋಚಿ ಗಡ್ಡದಿಂದ ಬಸವೇಶ್ವರ ವೃತ್ತ ಯಾದಗಿರಿ ಮಾರ್ಗಕ್ಕೆ ಹೋಗುವ ಹಳ್ಳಕ್ಕೆ ಸಂಪರ್ಕ ಕಲ್ಪಿಸಲಾಗಿದ್ದರೂ ಕೂಡ ಪ್ರತಿ ಬಾರಿ ಸುರಿಯುವ ಮಳೆಯಿಂದಾಗಿ ರಸ್ತೆಯ ಮೇಲೆ ಚರಂಡಿಯ ನೀರಿನ ಜೊತೆಗೆ ಮಳೆಯ ನೀರು ಹರಿಯುತ್ತವೆ. ಮೋಚಿ ಗಡ್ಡದಿಂದಿಡಿದು ನಗರ ಪೊಲೀಸ್ ಠಾಣೆಯಲ್ಲಿ ಚರಂಡಿ ನೀರು ನಿಂತಿರುತ್ತವೆ.

ಬಸವೇಶ್ವರ ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮೇಲೆಯೂ ಕೂಡ ಚರಂಡಿ ಮತ್ತು ಮಳೆಯ ನೀರು ಹರಿಯುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಇದಕ್ಕೆಲ್ಲ ಅವೈಜ್ಞಾನಿಕ ಚರಂಡಿ ಕಾಮಗಾರಿ ಕಾರಣವೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ

ಶಾಶ್ವತ ಪರಿಹಾರಕ್ಕೆ ಮನವಿ 

ನಗರದಲ್ಲಿ ಮಳೆಬರುವುದರಿಂದ ನಗರದ ಹಲವೆಡೆ ರಸ್ತೆಗಳ ಮೇಲೆ ಚರಂಡಿಯ ನೀರಿನ ಜೊತೆಗೆ ಮಳೆಯ ನೀರು ಹರಿಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ನಗರಸಭೆ ಮತ್ತು ಸರ್ಕಾರ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಒಳಿತು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಚರಂಡಿ ನಿರ್ಮಾಣ ಮೂಲಭೂತ ಸೌಕರ್ಯ. ಇದರ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಚರಂಡಿ ನೀರು ಹರಿಯುವುದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯು ಇರುತ್ತದೆ.

 

Leave a Reply

Your email address will not be published. Required fields are marked *