ರಾಜ್ಯದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ಗೆ ಅಧಿಕಾರ ಕೊಡಿ | ಯಾದಗಿರಿ ಜಿಲ್ಲೆ ದತ್ತು ಪಡೆಯುವೆ : H.D.ಕುಮಾರಸ್ವಾಮಿ

ಶಹಾಪುರ : ಪಂಚರತ್ನ ಐದು ಯೋಜನೆಗಳು ಜಾರಿಯಾದರೆ ರಾಜ್ಯ ಅಭಿವೃದ್ಧಿಯಾಗುತ್ತದೆ.ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ಗೆ ಅಧಿಕಾರ ಕೊಡಿ.
ಶಹಾಪುರದಲ್ಲಿ ಗುರುಪಾಟೀಲ್ ಯಾದಗಿರಿಯಲ್ಲಿ ಮಾಲಕರೆಡ್ಡಿ ಗುರುಮಿಟ್ಕಲ್ ದಲ್ಲಿ ಶರಣಗೌಡ ಕಂದಕೂರ್ ಅವರನ್ನು ಗೆಲ್ಲಿಸಿಕೊಡಿ.ಯಾದಗಿರಿ ಜಿಲ್ಲೆಯನ್ನು ದತ್ತು ತೆಗೆದುಕೊಳ್ಳುತ್ತೇನೆ.ಕೆಂಭಾವಿ ತಾಲೂಕು ಕೇಂದ್ರವನ್ನಾಗಿ ಮಾಡುವೆ ಎಂದು
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜೆಡಿಎಸ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪಂಚರತ್ನ ಯೋಜನೆಗಳಲ್ಲಿ ವಯಸ್ಸಾದ ಪಾಲಕರಿಗೆ, ವಿಧವೆಯರಿಗೆ, ರೈತರಿಗೆ ಭೂಮಿ ಇಲ್ಲದವರಿಗೆ, ಶಿಕ್ಷಣಕ್ಕೆ, ವೈದ್ಯಕೀಯ, ಉದ್ಯೋಗ ಸೃಷ್ಟಿ, ನೀರಾವರಿ ಸೌಲಭ್ಯಗಳು, ಸೇರಿದಂತೆ ಎಲ್ಲಾ ವಲಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
 ಜೆಡಿಎಸ್ ಪಕ್ಷದ ಮುಖಂಡರಾದ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ ಸಾಹು, ವಿಠ್ಠಲ ನುಗ್ಗಿ, ಲಕ್ಷ್ಮಿಕಾಂತ ಮದ್ದರಕಿ, ರಾಮಚಂದ್ರಪ್ಪ ದೊರೆ, ರಾಮನಗೌಡ,ಕಾಂತು ಪಾಟೀಲ್, ಲಾಲನ್ ಸಾಹೇಬ್,ಲಾಲ್ ಅಹ್ಮದ್ ಖುರೇಶಿ ಸೇರಿದಂತೆ ಇತರರು ಇದ್ದರು.
****
ಶಹಾಪುರದಲ್ಲಿ ನಾನು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ನಾನು ಪ್ರಸ್ತಾವನೆ ಸಲ್ಲಿಸಿ ತಂದಿರುವ ಕೆಲಸಗಳನ್ನು ಶಾಸಕರು ಮಾಡುತ್ತಿದ್ದಾರೆ. ಹೊಸ ಪ್ರಸ್ತಾವನೆಯ ಯಾವುದೆ ಯೋಜನೆಗಳಿಲ್ಲ. ಡಿಗ್ರಿ ಮಾಡರ್ನ್ ಕಾಲೇಜ್, ಐಟಿಐ ಕಾಲೇಜ್, ಹಳೆ ಬಸ್ ನಿಲ್ದಾಣ, ಟೌನ್ ಹಾಲ್, ಸರಕಾರದ ಆಸ್ಪತ್ರೆ ಉನ್ನತ ದರ್ಜೆ ಏರಿಸಿದ್ದು, ವಾಲ್ಮೀಕಿ ಭವನಕ್ಕೆ ಸ್ಥಳ ನಿಗದಿ, ಜಗಜೀವನ್ ರಾಮ್ ಭವನಕ್ಕೆ ಸ್ಥಳ ನಿಗದಿ, ಬುದ್ಧ ವಿಹಾರಕ್ಕೆ ಎರಡು ಕೋಟಿ, 110 ಕೋಟಿ ನಗರಕ್ಕೆ ಕುಡಿಯುವ ನೀರು, ಕೆಂಬಾವಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದ್ದು, ನಗನೂರು ಮತ್ತು ಶಿರವಾಳದಲ್ಲಿ 110 ಕೆವಿ ವಿದ್ಯುತ್, ತಾಂಡಗಳ ಅಭಿವೃದ್ಧಿ, ಕನಕ ಭವನ ನಿರ್ಮಾಣದ ಪ್ರಸ್ತಾವನೆ ಇವೆಲ್ಲವೂ ನನ್ನ ಆಡಳಿತದಲ್ಲಿ ಆದ ಕೆಲಸಗಳಾಗಿವೆ.
ಗುರುಪಾಟೀಲ್ ಶಿರವಾಳ
ಮಾಜಿ ಶಾಸಕ ಶಹಾಪೂರ ಕ್ಷೇತ್ರ
*****
 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ, ನಾನು ಮುಖ್ಯಮಂತ್ರಿ ಆದಾಗ ಲೋಕೋಪಯೋಗಿ ಇಲಾಖೆಯಲ್ಲಿ ಹಲವಾರು ಕೆಲಸಗಳನ್ನು ಮಾಡಿಕೊಂಡಿದ್ದ. ನಮಗೆ ಟೋಪಿ ಹಾಕಿ ಬಿಜೆಪಿ ಪಕ್ಷ ಸೇರಿದ. ನಂತರ ಗುರು ಪಾಟೀಲರಿಗೆ ಟೋಪಿ ಹಾಕಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ. ಇಂಥವರಿಗೆ ಏನೆನ್ನ ಬೇಕು 420 ಎನ್ನ ಬೇಕಾ ಎಂದು ಪರೋಕ್ಷವಾಗಿ ಅಮೀನ್ ರೆಡ್ಡಿ ಯಾಳಗಿ ವಿರುದ್ಧ ಕುಮಾರಸ್ವಾಮಿಯವರು ಹರಿಹಾಯ್ದರು.

About The Author