ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಪ್ರಚಾರ ಅಭಿವೃದ್ಧಿ ಕೆಲಸ ನೋಡಿ ಮತ ಹಾಕಿ ದರ್ಶನಾಪುರ ಹೇಳಿಕೆ

ಶಹಾಪುರ : ವಿರೋದ ಪಕ್ಷದಲ್ಲಿದ್ದು ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಮ್ಮ ಪಕ್ಷದ ಸರ್ಕಾರವಿಲ್ಲದಿದ್ದರೂ ಅಪಾರ ಅನುದಾನವನ್ನು ಕ್ಷೇತ್ರಕ್ಕೆ ತಂದು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನನ್ನ ಅಭಿವೃದ್ಧಿ ಕೆಲಸವನ್ನು ನೋಡಿ ನನಗೆ ಮತ ಹಾಕಿ. ಮತ್ತೊಮ್ಮೆ ಶಾಸಕರನ್ನಾಗಿ ಮಾಡುವಂತೆ ಮತದಾರರಿಗೆ ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಮನವಿ  ಮಾಡಿದರು.
ಶಹಾಪುರ ಕ್ಷೇತ್ರದ ಚಂದಾಪುರ ಮೇಲಿನ ತಾಂಡ,ಹೊಸ್ಕೇರಾ ಬಾಂಗ್ಲಾ ತಾಂಡ, ಗೋಗಿಯ ರಾಮನಾಯಕ ತಾಂಡ, ಬಿಎನ್ ತಾಂಡ, ಕನ್ಯ ಕೋಳೂರಿನ ಚಾಪನಾಯಕ ತಾಂಡ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಮತಯಾಚನೆ ಮಾಡಿದರು.
ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಪತ್ನಿಯವರಾದ ಭಾರತಿ ದರ್ಶನಪುರ ಅವರು ಕೂಡ ಮುಡಗೋಳ ಗ್ರಾಮದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತಯಾಚನೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *