ನರೇಗಾದಲ್ಲಿ 100 ದಿನ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕಾಯಕ ಸಮ್ಮಾನ್ ಪ್ರಶಸ್ತಿ 

ವಡಗೇರಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸದುಪಯೋಗ ಪಡೆದುಕೊಂಡು ನೂರು ದಿನಗಳ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ “ಕಾಯಕ ಸಮ್ಮಾನ್ ಪ್ರಶಸ್ತಿ’ ನೀಡಿ ಅಭಿನಂದನೆ ಸಲ್ಲಿಸಲಾಯಿತು.

ಫೆ.2 ರಂದು ಗುರುವಾರ ತಾಲ್ಲೂಕಿನ ತಡಿಬಿಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಂಡೆಕಲ್ ಗ್ರಾಮದ ಅಮೃತ ಸರೋವರ ಕೆರೆ ದಂಡೆಯಲ್ಲಿ ನರೇಗಾ ದಿನಾಚರಣೆ ಪ್ರಯುಕ್ತ 10 ಜನ ಕೂಲಿ ಕಾರ್ಮಿಕರಿಗೆ ಕಾಯಕ ಸಮ್ಮಾನ್ ಪ್ರಶಸ್ತಿ ಪತ್ರ ನೀಡಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ವೆಂಕಟೇಶ ಚಟ್ನಳ್ಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡುತ್ತಾ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವವಾದ ಯೋಜನೆ ಇದಾಗಿದ್ದು, ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಅಮೃತ ಸರೋವರ, ಕೃಷಿ ಹೊಂಡ, ನಾಲ ಹೂಳೆತ್ತುವುದು, ಗ್ರಾಮೀಣ ರಸ್ತೆಗಳ ಸುಧಾರಣೆ ಹಾಗೂ ಜಲಶಕ್ತಿ ವೃದ್ಧಿಸುವ ಯೋಜನೆ ಇದಾಗಿದೆ. ಗ್ರಾಮೀಣ ಜನರ ಬದುಕಿಗೆ ನರೇಗಾ ಯೋಜನೆ ಭರವಸೆ ಬೆಳಕಾಗಿದೆ ಎಂದರು. ಇಂತಹ ಮಹತ್ವದ ಯೋಜನೆ ಸದ್ಬಳಕೆ ಮಾಡಿಕೊಂಡು ಗುಳೆ ಹೋಗುವುದು ಕೈ ಬಿಟ್ಟು  ನರೇಗಾ ಕೆಲಸ ಮಾಡಲು ಹೇಳಿದರು.

    ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ  ಮಾತನಾಡಿ, ಕೇವಲ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಸೀಮಿತವಾಗದೆ ಉನ್ನತಿ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡಿ ಉದ್ಯೋಗ ಕಲ್ಪಿಸುತ್ತಿದೆ. ನರೇಗಾ ಯೋಜನೆ ಗ್ರಾಮೀಣ ಜನರಲ್ಲಿ ಮತ್ತಷ್ಟು ಆಸಕ್ತಿ ಉತ್ಸಾಹ ತುಂಬಿದೆ ಎಂದರು.

ನರೇಗಾ ದಿನ ಅಂಗವಾಗಿ ಕೂಲಿ ಕಾರ್ಮಿಕರಿಗೆ ಜಿಲ್ಲಾ ಪಂಚಾಯತ್ ಪಿಡಿ ರವರು ಇ-ಶ್ರಮ ಕಾರ್ಡ್, ಉದ್ಯೋಗ ಚಿಟ್ಟಿ ವಿತರಣೆ ಮಾಡಿದರು. ಕೂಲಿ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲಿ ಬಿಪಿ, ಶುಗರ್ ತಪಾಸಣೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಎಡಿಪಿಸಿ ಬನ್ನಪ್ಪ, ಡಿಐಇಸಿ ಪರಶುರಾಮ, ಪಿಡಿಒ ಸ್ಮೀತಾ ಪಾಟೀಲ್ ಹಾಗೂ ಹುಸೇನ್ ಭಾಷಾ, ಮುಜಾಮೀಲ್, ವೆಂಕಟೇಶ, ದುರ್ಗೇಶ್, ಮೌನೇಶ್ ಸೇರಿದಂತೆ ಪಂಚ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.

About The Author