ಮಹಾಶೈವ ಧರ್ಮಪೀಠದಲ್ಲಿ 33 ನೆಯ ‘ ಶಿವೋಪಶಮನ ಕಾರ್ಯ : ಯಾದಗಿರಿ ಜಿಲ್ಲೆಯ ಸಾಬಣ್ಣ ಪಾರ್ಶ್ವವಾಯು ಕಾಯಿಲೆಯಿಂದ ಗುಣಮುಖ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜನೆವರಿ 29 ರಂದು 33 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಗಬ್ಬೂರು ಹಾಗೂ ಪರ ಊರುಗಳಿಂದ ಬಂದಿದ್ದ ಭಕ್ತರುಗಳಿಗೆ ವಿಶ್ವೇಶ್ವರಾನುಗ್ರಹವನ್ನು ಕರುಣಿಸಿ ಭಕ್ತರನ್ನು ಕಾಡುತ್ತಿರುವ ಸಮಸ್ಯೆ,ಸಂಕಷ್ಟಗಳಿಗೆ ಪರಿಹಾರ ರೂಪದಲ್ಲಿ ‘ ಶಿವೋಪಶಮನ’ ನೀಡಿದರು.ಯಾದಗಿರಿ ಜಿಲ್ಲೆಯಿಂದ ಬಂದಿದ್ದ ಸಾಬಣ್ಣ ಎನ್ನುವ ಪಾರ್ಶ್ವವಾಯು ಪೀಡಿತರು ( ಪೀಠಾಧ್ಯಕ್ಷರ ಎದುರು ಕೆಳಗಡೆ ಕುಳಿತಿರುವ ಕೆಂಪುಶಲ್ಯ ಹೊದ್ದಿರುವ ವ್ಯಕ್ತಿ) ಗುಣಮುಖರಾಗಿ ಬಂದಿದ್ದು ಇಂದಿನ ವಿಶೇಷವಾಗಿತ್ತು.ಮಹಾಶೈವ ಧರ್ಮಪೀಠಕ್ಕೆ ಪ್ರತಿವಾರವೂ ನಾನಾ ಬಗೆಯ ಸಮಸ್ಯೆಗಳನ್ನು ಹೊತ್ತ ಭಕ್ತಜನರು ಬರುತ್ತಿದ್ದಾರೆ.’ಮಾತನಾಡುವ ಮಹಾದೇವ’ ಎಂದೇ ಪ್ರಸಿದ್ಧನಾಗಿರುವ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಎಲ್ಲ ಸಮಸ್ಯೆಗಳಿಗೂ ನಿಶ್ಚಿತ ಪರಿಹಾರವಿದೆ.