ಸ್ವಾಮಿ ವಿವೇಕಾನಂದ ಶಾಲೆಯಲ್ಲಿ  ಗಣರಾಜ್ಯೋತ್ಸವ ಆಚರಣೆ

ವಡಗೆರಾ : ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ74ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.  ಸಂಸ್ಥೆಯ ಖಜಾಂಚಿಗಳಾದ ಬಸವರಾಜ ಸೊನ್ನದ  ಧ್ವಜಾರೋಹಣ ನೆರೆವರಿಸಿ ಮಾತನಾಡಿ,ಡಾ.ಬಿ .ಆರ್. ಅಂಬೇಡ್ಕರ್ ಸಂವಿಧಾನವನ್ನು ಜಾರಿಗೊಳಿಸಿ ಎಲ್ಲಾ ವರ್ಗದ ಹಿತ ಬಯಸಿದ ಮಹಾನ್ ವ್ಯಕ್ತಿ. ಪ್ರತಿಯೊಬ್ಬರು ಅವರನ್ನು ಸ್ಮರಿಸಲೇಬೇಕು.ಮತದಾನದ ಹಕ್ಕಿನ ಜೊತೆಗೆ ಹೋರಾಟ ಶಿಕ್ಷಣ ಸಂಘಟನೆಗೆ ಹೆಚ್ಚಿನ ಹೊತ್ತನ್ನು ನೀಡಿ ನಮಗೆ ಒಂದು ಪವಿತ್ರವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ದಿನ ನಮಗೆ ಐತಿಹಾಸಿಕ ದಿನ. ಇಂದು ಸಂವಿಧಾನ ಜಾರಿಯಾದ ದಿನವಾಗಿದೆ. ನಾವೆಲ್ಲರೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸೋಣ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
 ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸುರೇಶ ಕರಣಿಗಿ ವಿಶ್ವನಾಥ ರೆಡ್ಡಿ ಬಸರೆಡ್ಡಿ ಬಸವರಾಜ ಇಟಗಿ  ತಿಮ್ಮಣ್ಣ ಬಸೇನಿ ಉಸ್ಮನ್ ಭಾಷಾ ತಡಿಬಿಡಿ ಮಲ್ಲಣ್ಣ ನೀಲಳ್ಳಿ ಅಬ್ದುಲ್ ಬಾಷಾ ಚಿಗನೂರುಸನಾಗಪ್ಪ ವೈ.ಬಿ. ಮಲ್ಲಣ್ಣ ಪಾಟೀಲ  ಮಲ್ಲಪ್ಪ ಕೊಪ್ಪೂರ ಖಾಜಾಫೀರ
ಚನ್ನಪ್ಪ ಮಂಜುಳಾ ಡೋರೆಪಲ್ಲಿ ರುದ್ರಮ್ಮ ಶ್ರೀದೇವಿ ಪಾಲಕರು ಮಕ್ಕಳು ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

About The Author