ರಸ್ತಾಪುರ ಅನುಮಾನಾಸ್ಪದ ಯುವಕ ಸಾವು

ಶಹಾಪುರ ಅ 20:- ತಾಲೂಕಿನ ರಸ್ತಾಪುರ ಗ್ರಾಮದ ಆಂಜನೇಯ ತಂದೆ ಭೀಮಣ್ಣ ದಾಸರ ವಯಸ್ಸು (22 ) ಎಂಬ ಯುವಕನು ದಿನಾಂಕ 18 ರಂದು ಕಾಣೆಯಾದ ಬಗ್ಗೆ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಕಾಣೆಯಾದ ಯುವಕನು ಆಟೋ ಚಾಲಕನಾಗಿದ್ದು, ಗ್ರಾಮದಿಂದ ಶಹಾಪುರ ನಗರಕ್ಕೆ ಪ್ಯಾಸೆಂಜರ್ ಹೊಡೆಯುತ್ತಿದ್ದನು. ಕುಟುಂಬಸ್ಥರು ಕಾಣೆಯಾದ ಯುವಕನನ್ನು ಹುಡುಕಾಡುವ ಸಂದರ್ಭದಲ್ಲಿ ನಿನ್ನೆ ಯುವಕನು ವಿಭೂತಿಹಳ್ಳಿ ಗ್ರಾಮದ ಹಿಲ್ ಟೌನ್ ಢಾಬಾದ ಪಕ್ಕದಲ್ಲಿರುವ  ಕೆನಾಲ ರಸ್ತೆ ಯ ಸುಮಾರು  2 ಕಿ.ಮಿ. ದೂರದ ಕೆನಾಲನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ . ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೋಲಿಸರ್ ತನಿಖೆಯ ನಂತರದಲ್ಲಿ ಆತ್ಮಹತ್ಯೆನೋ? ಕೋಲೆನೊ? ಎಂಬುದನ್ನು ಖಚಿತ ಮಾಹಿತಿ ಸಿಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *