ಕೆಂಭಾವಿ:- ನಾರಾಯಣ ಜಲಾಶಯ ಕೇಂದ್ರಕ್ಕೆ ಶಹಾಪುರ ಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ-2 ಕಾಮಗಾರಿ ಸ್ಥಳ ವೀಕ್ಷಿಸಿದರು. ಕೆಬಿಜೆಎನ್ಎಲ್ ನಿಗಮದ ಮುಖ್ಯ ಎಂಜಿನಿಯರ್ ಅವರೂಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
![]() 769.34 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್ಲೈನ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಅಳವಡಿಸಲಾಗುತ್ತಿರುವ ಪೈಪ್ಗಳು ಎಂಎಸ್ ಮತ್ತು ಹೆಚ್ಡಿಪಿ ಪೈಪ್ಗಳನ್ನು ಒಳಗೊಂಡಿವೆ.ಈ ಕಾಮಗಾರಿ ಪೂರ್ಣಗೊಳ್ಳುವುದರಿಂದ ಐವತ್ತು ಸಾವಿರಕ್ಕೂ ಅಧಿಕ ಜಮೀನು ನೀರಾವರಿಗೆ ಒಳಪಡಲಿದ್ದು,38 ಗ್ರಾಮಗಳು ಸಂಪೂರ್ಣ ನೀರಾವರಿಯಾಗಲಿವೆ ಎಂದು ತಿಳಿಸಿದರು.ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ-2 ಕಾರ್ಯಭರದಿಂದ ಸಾಗಿದೆ. ಬರುವ ಜನವರಿಯೊಳಗೆ ಮುಕ್ತಾಯವಾಗುವ ಹಂತದಲ್ಲಿದೆ ಎಂದು ಹೇಳಿದರು.
![]() ಕೆಂಭಾವಿ ಬ್ಲಾಕ್ ಅಧ್ಯಕ್ಷ ಬಸವರಾಜ ಎಸ್ ಪಾಟೀಲ ಚಿಂಚೋಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಬಸನಗೌಡ ಪಾಟೀಲ ಹೊಸಮನಿ ಯಾಳಗಿ, ನಿಂಗನಗೌಡ ಮರಡ್ಡಿ ಚಿಂಚೋಳಿ, ಲಾಲಪ್ಪ ಹೊಸಮನಿ ಆಲ್ಹಾಳ, ಪ್ರಶಾಂತಗೌಡ ದೊಡ್ಡಮನಿ, ಹಿರಿಯ ಪತ್ರಕರ್ತ ಸಂಜೀವ್ ರಾವ ಕುಲಕರ್ಣಿ, ರಾಮನಗೌಡ ದೊಡ್ಡಮನಿ, ಗುತ್ತೆಪ್ಪಗೌಡ ಯಕ್ತಾಪುರ, ಶಿವನಗೌಡ ಆಲ್ಹಾಳ, ಶಿವು ಗೂಗಲ್ ಶಿವಶಂಕರ ಯಕ್ತಾಪುರ ಕೆಬಿಜೆಎನ್ಎಲ್ ನಿಗಮದ ಅಧಿಕಾರಿಗಳು ಸೇರಿದಂತೆ ಅಮೃತ ಕನ್ಸ್ಟ್ರಕ್ಷನ್ಸ್, ಪ್ರೆ.ಲೀ. ಬೆಂಗಳೂರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
|
|