ಧ್ವಜಾರೋಹಣ ಭಾಗ್ಯ ಪಡೆದ ನಾವುಗಳೇ ಧನ್ಯರು – ಡಾ:ಗೌಳಿ

ಕಲಬುರ್ಗಿ : ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಅ ಮತ್ತು ಬ ಘಟಕಗಳು ಹಮ್ಮಿಕೊಂಡ ಮನೆ ಮನೆಗೂ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಯೋಧ ಹಾಗೂ ಮುಖ್ಯ ಗುರುಗಳಾದ ಡಾ.ಶಿವಲಿಂಗಪ್ಪ ಗೌಳಿ ಅವರು ಮಾತನಾಡಿದರು.ಈ ಮಣ್ಣಿನಲ್ಲಿ ಹುಟ್ಟಿದ ಬಳಿಕ ಋಣ ತಿರಿಸುವದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳುತ್ತಾ ನಮ್ಮ ರಾಷ್ಟ್ರ ಧ್ವಜ ಮೊದಲು ಯಾರಿಂದ ಪ್ರಾರಂಭವಾಯಿತು ಮತ್ತು ಯಾವಗ ಎಲ್ಲಿ ಎಂಬುದನ್ನು ಸವಿಸ್ತಾರವಾಗಿ ಹೇಳುತ್ತಾ ದೇಶದ ನಾಲ್ಕು ಸ್ಥಳಗಳಲ್ಲಿ ಮಾತ್ರ ರಾಷ್ಟ್ರಧ್ವಜ ತಯಾರಿಸಲಾಗುತ್ತದೆ ಅಂತಹ ಒಂದು ಸ್ಥಾನವನ್ನು ಪಡೆದ ಕನ್ನಡಿಗರಾದ ನಾವು ನಿಜಕ್ಕೂ ಧನ್ಯರು ಎಂದರು.ಈ ದೇಶದಲ್ಲಿ ಅದೆಷ್ಟೊ ಜನ ರಾಷ್ಟ್ರ ಧ್ವಜ ಮುಟ್ಟದೆ,ನೋಡದೆ ಮರಣ ಹೊಂದಿದ್ದಾರೆ ಆದರೆ ೭೫ ನೇ ಅಮೃತ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಮನೆ ಮನೆಗೂ ತ್ರಿವರ್ಣ ಧ್ವಜವನ್ನು ಹಾರಿಸಲು ಸರಕಾರ ಅವಕಾಶವನ್ನು ನೀಡಿದೆ ಅಂತಹ ಭಾಗ್ಯ ಪಡೆದ ನಾವು ನೀವುಗಳೇ ಭಾಗ್ಯವಂತರು ಎಂದು ಹೇಳಿದರು.

ಧ್ವಜದ ಅಳತೆ,ಮಡಚುವಿಕೆ,ಧ್ವಜದ ಕಟ್ಟುವಿಕೆ ಆರೋಹಣ ಅವರೋಹಣ ಸಲಾಂನ ಮಹತ್ವ ಕುರಿತು ರಾಷ್ಟ್ರ ಗೀತೆಯನ್ನು ರಾಗ ಬದ್ಧವಾಗಿ 48-52 ಸೆಕೆಂಡುಗಳಲ್ಲಿ ಹಾಡಿ ಮುಗಿಸಬೇಕು ಎಂದು ಹೇಳುತ್ತಾ ತಮ್ಮ ಬದುಕೀನ ಹಲವಾರು ರೊಮಾಂಚನಕಾರಿ ಘಟನೆಗಳನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿನಿಯರಲ್ಲಿ ರಾಷ್ಟ್ರ ಪ್ರೇಮದ ಮಹತ್ತ್ವವನ್ನು ಬಿತ್ತಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡಿದ್ದರು,ರಾ.ಸೇ,ಯೋ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಮಹೇಶ ಗಂವ್ಹಾರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮೋಹನರಾಜ್ ಪತ್ತಾರ ವಂದಿಸಿದರು, ರಾ.ಸೇ.ಯೋ ಅಧಿಕಾರಿಗಳಾದ ಡಾ.ಶಾಂತಾ ಮಠ ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author