2023 ರ ವಿಧಾನಸಭಾ ಚುನಾವಣೆ | ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪನವರ ಕಡೆಗಣನೆ | ಬಿಜೆಪಿಯ ಸೋಲು ನಿಶ್ಚಿತವೇ ?

ಬಸವರಾಜ ಕರೇಗಾರ
basavarajkaregar@gmail.com

 

ರಾಜ್ಯ ಕಂಡ ಅಪ್ರತಿಮ ನಾಯಕ ಇಂದು ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಯಡಿಯೂರಪ್ಪನವರ ಕೃಪೆಯಿಂದ ಎಂದರೆ ತಪ್ಪಾಗಲಾರದು. ರೈತ ನಾಯಕನಾಗಿ ಬಡವರ ರೈತರ ನಾಡಿಮಿಡಿತವರಿತ ಧೀಮಂತ ವ್ಯಕ್ತಿ ಯಡಿಯೂರಪ್ಪ.ಇಂದು ಯಡಿಯೂರಪ್ಪನವರನ್ನು ವೀರಶೈವ ಸಮುದಾಯದ ಉನ್ನತ ನಾಯಕನೆಂದು ಗುರುತಿಸಲಾಗುತ್ತಿದೆ. ಆದರೆ ಯಡಿಯೂರಪ್ಪನವರ ಗರಡಿಯಲ್ಲಿ ಎಲ್ಲ ಸಮುದಾಯದವರು ನಾಯಕರಾಗಿ ಹೊರಬಂದಿದ್ದಾರೆ.ಆದರೆ ಅಧಿಕಾರಕ್ಕಾಗಿ ಅವರನ್ನೇ ತಳ್ಳಿದುಂಟು. ಶಿವಮೊಗ್ಗದಿಂದ ಆರಂಭವಾದ ಅವರ ರಾಜಕೀಯ ಜೀವನ ಒಂದು ಚಿಕ್ಕ ಸ್ಕೂಟಿ ಗಾಡಿಯಲ್ಲಿ ಕೆ ಎಸ್ ಈಶ್ವರಪ್ಪನವರು ಇಬ್ಬರೂ ಕೂಡಿಕೊಂಡು ಪಕ್ಷವನ್ನು ಅಪಾರ ಮಟ್ಟಕ್ಕೆ ಬೆಳೆಸಿದವರು.

 

 

ರಾಜ್ಯದ ಮೂಲೆ ಮೂಲೆಯಲ್ಲೂ ಹೋರಾಟ ಮಾಡಿ ಒಂದರಿಂದ ಒಂದು ನೂರರ ವರೆಗೆ ವಿಧಾನಸಭೆಯ ಬಿಜೆಪಿ ಸದಸ್ಯರನ್ನಾಗಿ ಮಾಡಿದವರು. ಮುಖ್ಯಮಂತ್ರಿಗಳಾಗಿ ಬಡವರಿಗೆ ಶಾಲಾ ಮಕ್ಕಳಿಗೆ ಸ್ತ್ರೀಯರಿಗೆ ಅವರು ಕೊಟ್ಟ ಕೊಡುಗೆ ಅಪಾರ. ಬಡವರೆಂದರೆ ಎಲ್ಲಿಲ್ಲದ ಪ್ರೀತಿ. ಅಂತಹ ಮಹಾನ್ ನಾಯಕ ರಾಜ್ಯದ ಮುಖ್ಯಮಂತ್ರಿಯಾಗಿ ರೈತರಿಗೆ ಬಡವರಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಂಥವರನ್ನು ಸರಿಯಾಗಿ ಬಳಸಿಕೊಂಡ ಬಿಜೆಪಿ ಆಪರೇಷನ್ ಕಮಲ ಮಾಡಿಸಿ ಮುಖ್ಯಮಂತ್ರಿಗಳನ್ನಾಗಿ ಮಾಡಿ, ಎರಡೇ ವರ್ಷದಲ್ಲಿ ರಾಜೀನಾಮೆ ಕೊಡಿಸಿ ಮೂಲೆ ಗುಂಪು ಮಾಡಲು ಹೊರಟಿದೆ. ಬಿಜೆಪಿಯಲ್ಲಿ ಯಾರು ಮಾಸ್ ಲೀಡರ್ ಇಲ್ಲ.

 

ಯಡಿಯೂರಪ್ಪನವರ ಆಶೀರ್ವಾದದಿಂದ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಸದಾನಂದ ಗೌಡ, ಬಸವರಾಜ್ ಬೊಮ್ಮಾಯಿ.

 

ಮೂರು ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರನ್ನೇ ನೆಚ್ಚಿ ಕೊಳ್ಳಬೇಕಿದೆ. ಯಡಿಯೂರಪ್ಪನವರನ್ನು ನಿರ್ಲಕ್ಷಿಸಿದರೆ ಕರ್ನಾಟಕದಲ್ಲಿ ಬಿಜೆಪಿ ನೆಲ ಕಚ್ಚುವುದರಲ್ಲಿ ಅನುಮಾನವೇ ಇಲ್ಲ. ಬಿಜೆಪಿಯಿಂದ ಹೊರಹೋದ ಯಡಿಯೂರಪ್ಪನವರು ಅಂದು ಬಿಜೆಪಿ ಯಾವ ಮಟ್ಟಕ್ಕೆ ಹೋಗಿತ್ತು ಎಂದು ನೆನಪಿಸಿಕೊಳ್ಳಬೇಕಿದೆ. ಆದರೂ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಹೊರಟಿದೆ ಎಂದರೆ ಸೋಲಿಗೆ ಮೊದಲ ಏಣಿ ಎಂದರ್ಥ. ರಾಷ್ಟ್ರ ರಾಜಕಾರಣದಂತಲ್ಲ ರಾಜ್ಯ ರಾಜಕಾರಣ. ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರ ಆಶೀರ್ವಾದದಿಂದ ಗೆದ್ದವರು ರಾಜ್ಯದ ಸಂಸದರು. ರಾಜ್ಯದಲ್ಲಿ ಕೆಲವು ಸಮುದಾಯಗಳ ಮುಖಂಡರ ಪ್ರಭಾವಿತವಾದ ಮತಗಳಿವೆ. ಕರ್ನಾಟಕದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ ವೀರಶೈವ ಸಮುದಾಯ. ಅದನ್ನು ಬಿಜೆಪಿ ಅರಿತುಕೊಂಡಿಲ್ಲ ಎಂದು ಕಾಣಿಸುತ್ತಿದೆ. ಯಡಿಯೂರಪ್ಪನವರನ್ನು ಎದುರು ಹಾಕಿಕೊಂಡ ಈಶ್ವರಪ್ಪ ಶಿವಮೊಗ್ಗದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದ. ಜನಾರ್ಧನ ರೆಡ್ಡಿ ಇನ್ನೂ ರಾಜಕೀಯಕ್ಕೆ ಬರಲಾಗುತ್ತಿಲ್ಲ. ಸದಾನಂದ ಗೌಡ ಜಗದೀಶ ಶೆಟ್ಟರ್ ಯಡಿಯೂರಪ್ಪನವರ ಆಶೀರ್ವಾದದಿಂದಲೇ ಮುಖ್ಯಮಂತ್ರಿಯಾದವರು. ಯಡಿಯೂರಪ್ಪನವರ ಆಶೀರ್ವಾದದಿಂದಲೇ ಮುಖ್ಯಮಂತ್ರಿಯಾದವರು ಎನ್ನುವುದು ಇಂದು ಮರೆತಂತಿದೆ ಬಿಜೆಪಿ.

ಚುನಾವಣೆ ಹೊಸ್ತಿಯಲ್ಲಿ ಹುತ್ತಕ್ಕೆ ಕೈ ಹಾಕುತ್ತಿದೆಯಾ ಬಿಜೆಪಿ

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇದ್ದರೂ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಕೈ ಹಾಕುತ್ತಿದೆ ಬಿಜೆಪಿ. ನಿಗಮ ಮಂಡಳಿಯಲ್ಲಿ ಇರುವವರೆಲ್ಲರೂ ಯಡಿಯೂರಪ್ಪನವರ ಆಪ್ತರು ಎಂದು ಆರ್ ಅಶೋಕ್, ಕಟೀಲ್, ಬಸವರಾಜ ಬೊಮ್ಮಾಯಿಯವರು ಮರೆತಂತಿದೆ. ಅಧ್ಯಕ್ಷರ ಬದಲಾಯಿಸಿದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.ಯಡಿಯೂರಪ್ಪನವರನ್ನು ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗ ಬಿಜೆಪಿ ಅಂದೆ ನೆಲಕಚ್ಚಿದೆ. ಮುಂದಿನ ದಿನಗಳಲ್ಲಿ ಅವರ ಮಗನಾದ ವಿಜಯೇಂದ್ರನಿಗೆ ನಾಯಕತ್ವ ಕಟ್ಟದಿದ್ದರೆ ಆಂದ್ರಪ್ರದೇಶದಲ್ಲಾದ ಸ್ಥಿತಿ ಕರ್ನಾಟಕದ ಬಿಜೆಪಿಗೆ ಆಗುವುದರಲ್ಲಿ ಅನುಮಾನವಿಲ್ಲ. ಬಿಜೆಪಿಯ ರಾಷ್ಟ್ರನಾಯಕರು 2023ರ ಚುನಾವಣೆ ಯಾವ ರೀತಿ ಎದುರಿಸುವರು ಎಂದು ಕಾದು ನೋಡಬೇಕಿದೆ. ಯಡಿಯೂರಪ್ಪನವರನ್ನು ಚುನಾವಣಾ ಸಂದರ್ಭದಲ್ಲಿ ಬಳಸಿಕೊಂಡು ನಂತರ ಕೈ ಕೊಡುವರು ಎನ್ನುವ ಅನುಮಾನಗಳು ಹೆಚ್ಚಾಗುತ್ತಿವೆ. ಕಾದು ನೋಡಬೇಕಿದೆ

About The Author