ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಕನಕದಾಸರ ಪಠ್ಯ ಕಡಿತ ಖಂಡನೆ

ಶಹಾಪುರ:ರಾಜ್ಯ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ದಾಸಶ್ರೇಷ್ಠ ಕನಕದಾಸರ ಪಠ್ಯವನ್ನು ಕಡಿತ ಮಾಡಿರುವುದಕ್ಕೆ ಕನಕ ಯುವ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಜೆಡಿ ಖಂಡಿಸಿದ್ದಾರೆ.2021-22 ರ ಸಾಲಿನ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಭಕ್ತಿಪಂಥದ ಕುರಿತು ದಾಸಶ್ರೇಷ್ಠ ಕನಕದಾಸರ ಬಗ್ಗೆ ಒಂದು ಪುಟಕ್ಕೂ ಹೆಚ್ಚು ಮಾಹಿತಿ ಇತ್ತು. ಈಗಿನ ಪರಿಷ್ಕರಣೆಯಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಭಕ್ತಿ ಪಂಥದಲ್ಲಿ ಕನಕದಾಸರ ಕುರಿತು ವಿಚಾರವನ್ನು ಸ್ವಲ್ಪಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ.16 ನೇ ಶತಮಾನದಲ್ಲಿ ಸಮಾಜದಲ್ಲಿನ ಮೂಡನಂಬಿಕೆ ಕಂದಾಚಾರಗಳನ್ನು ಹೋಗಲಾಡಿಸಲು ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡಿದವರು ಕನಕದಾಸರು.  ತಮ್ಮ ಕೀರ್ತನೆಗಳ ಮೂಲಕ ದಾಸ ಸಾಹಿತ್ಯವನ್ನು ಉಳಿಸಿ ಬೆಳೆಸಿದವರು. ಅಂತಹ ಮಹಾನ್ ವ್ಯಕ್ತಿಯ ಮಾಹಿತಿಯನ್ನು ಕಡಿತಗೊಳಿಸಿ ಸಮಾಜಕ್ಕೆ ನೋವುಂಟುಮಾಡಿದ ರೋಹಿತ ಚಕ್ರತೀರ್ಥ ಅಧ್ಯಕ್ಷತೆಯಲ್ಲಿರುವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ರದ್ದುಗೊಳಿಸಿ ಈಗಾಗಲೇ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಪುಸ್ತಕವನ್ನು ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿಂಗಣ್ಣ ಜಡಿ ಆಗ್ರಹಿಸಿದ್ದಾರೆ.

 

About The Author