ನಿವೇಶನದ ಜೊತೆಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು:ಶರಣಬಸಪ್ಪಗೌಡ ದರ್ಶನಾಪುರ

 ಶಹಾಪುರ:ನಗರದಲ್ಲಿ ನಿವೇಶನ ಮತ್ತು ಮನೆ ಇರಲಾರದವರು ಬಹಳಷ್ಟು ಜನರಿದ್ದು,ಸುಮಾರು 10 ವರ್ಷಕ್ಕಿಂತಲೂ ಇದುವರೆಗೂ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಅಂತಹವರಿಗೆ ನಿವೇಶನದ ಜೊತೆಗೆ ಮತ್ತು ಮನೆಯಿಲ್ಲದವರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ಇಂದು ನಗರದ ಫಿಲ್ಟರ್ ಬೆಡ್ ನಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿಯನ್ನು ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.

ನಗರದಲ್ಲಿ ಕೆಲವರು ಸರಕಾರಿ ಉದ್ಯಾನವನದಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಿದ್ದು ಅಂತಹವರಿಗೆ ನಿವೇಶನದ ಜೊತೆಗೆ ಮನೆಗಳನ್ನು  ನಿರ್ಮಿಸಿಕೊಡಲಾಗುವುದು. ದೇವಿನಗರದಲ್ಲಿ 15 ಕುಟುಂಬಸ್ಥರು ಮನೆ ಮತ್ತು ನಿವೇಶನಗಳಿಲ್ಲದೆ ಪರದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಅಂತಹವರಿಗೆ ನಿವೇಶನ ದೊರಕಿಸಿಕೊಡಲಾಗುವುದು ಎಂದು ಹೇಳಿದರು.ನಗರಕ್ಕೆ 924 ನಿವೇಶನಗಳಲ್ಲಿ 770 ನಿವೇಶನಗಳನ್ನು ಶಹಾಪುರದಲ್ಲಿ ಹಂಚಿಕೆ ಮಾಡಲಾಗುವುದು.ಈ ಕಾರ್ಯ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳುವುದು ಎಂದು ತಿಳಿಸಿದರು.

 

ಕೆಕೆಆರ್ಡಿಬಿಯಿಂದ 6 ಕೋಟಿ ಸೇರಿದಂತೆ ನಗರೋತ್ತಾನದ ಅನುದಾನ ಸೇರಿದಂತೆ ಒಟ್ಟು 16 ಕೋಟಿ ಅನುದಾನದಲ್ಲಿ 11.5 ಲಕ್ಷ ಲೀಟರ್ ಹೆಚ್ಚುವರಿಯಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಲಾಗುವುದು.ಶುದ್ಧ ಕುಡಿಯುವ ನೀರಿಗಾಗಿ 120 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು,ಈಗಾಗಲೇ ಭೀಮಾ ನದಿಯಿಂದ ಶಹಪೂರ ನಗರಕ್ಕೆ 70 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು,ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು.ನಗರದ ಪ್ರತಿ ಬಡಾವಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುಕರ್, ಪೌರಾಯುಕ್ತರಾದ ಓಂಕಾರ ಪೂಜಾರಿ. ಎಇಇ ನಾನಾಸಾಹೇಬ್. ಜೆಇ ಮಲ್ಲಿಕಾರ್ಜುನ,  ನಗರಸಭೆ ಸದಸ್ಯರಾದ ಅಮಲಪ್ಪ ಬಾದ್ಯಾಪುರ, ಮುಖಂಡರಾದ ಶಿವಮಾಂತ ಚಂದಾಪುರ, ಮಹಾದೇವಪ್ಪ ಸಾಲಿಮನಿ, ವಿಜಯಕುಮಾರ ಎದರಮನಿ. ಕಾಂಗ್ರೆಸ್ ಉಪಾಧ್ಯಕ್ಷರಾದ  ಬಸವರಾಜ ನಾಯ್ಕಲ್ ಸೇರಿದಂತೆ ಇತರರು ಇದ್ದರು

ಪ್ರಗತಿಯಲ್ಲಿರುವ ಕಾಮಗಾರಿಗಳು ಮತ್ತು ಅನುದಾನ

* ಹಳಿಸಗರದ ಮಲ್ಲಯ್ಯನ ಗುಡಿ ಹತ್ತಿರ 12 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ  ಬಡಾವಣೆಯಲ್ಲಿ ಆಶ್ರಯ  ನಿವೇಶನ ಮತ್ತು ಮನೆ ನಿರ್ಮಾಣ.

 

ಹೊಸ ಬಡಾವಣೆಯಲ್ಲಿ

* 1.60 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣ.

* 1.53 ಲಕ್ಷದಲ್ಲಿ ಚರಂಡಿ ನಿರ್ಮಾಣ

*1.23 ಲಕ್ಷದಲ್ಲಿ ವಿದ್ಯುತ್ ಸರಬರಾಜು.

*1.50 ಲಕ್ಷದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.

* 5.50 ಲಕ್ಷ ಹೆಚ್ಚುವರಿಯಾಗಿ ಮುಖ್ಯಮಂತ್ರಿಗಳಿಗೆ ಅನುದಾನಕ್ಕಾಗಿ ಬೇಡಿಕೆ.

ಶುದ್ಧ ಕುಡಿಯುವ ನೀರಿಗಾಗಿ

*16 ಕೋಟಿ ಅನುದಾನದಲ್ಲಿ 11.5 ಲಕ್ಷ ಲೀಟರ್ ಹೆಚ್ಚುವರಿಯಾಗಿ ಶುದ್ಧ ಕುಡಿಯುವ ನೀರು

* 1.25 ಲಕ್ಷ ನಗರೋತ್ಥಾನ ಅನುದಾನದಲ್ಲಿ ಶುದ್ಧಕುಡಿಯುವ ನೀರಿನ ಹೊಸ ಪೈಪ್ಲೈನ್ ಅಭಿವೃದ್ಧಿ.

*2 ಕೊ.ವೆಚ್ಚದಲ್ಲಿ ರಾಕಂಗೇರಾದಲ್ಲಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್ ಹೊಸ ಪೈಪ್ಲೈನ್ ಅಳವಡಿಕೆ

* ಹೆಚ್ಚುವರಿಯಾಗಿ ಸರಕಾರಕ್ಕೆ 80 ಕೋಟಿ ಬೇಡಿಕೆ.

 

 

 

About The Author