ರಾಜ್ಯ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ಡಾ ಶರಣು ಬಿ ಗದ್ದುಗೆ ಪದ ಗ್ರಹಣ

ರಾಜ್ಯ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ಡಾ ಶರಣು ಬಿ ಗದ್ದುಗೆ ಪದ ಗ್ರಹಣ

ಡಾ.ಹರ್ಷ ಹಾಗೂ ಶಿವಾನಂದ ತಗಡೂರು ಉಪಸ್ಥಿತಿ

ಬೆಂಗಳೂರು:ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ಬೆಂಗಳೂರು ಗಾಂಧಿ ಭವನದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಯಾದಗಿರಿ ಜಿಲ್ಲೆಯ ಶರಣಾರ್ಥಿ ಕನ್ನಡಿಗರೆ ಪ್ರಾದೇಶಿಕ ಪತ್ರಿಕೆಯ ಸಂಪಾದಕರಾದ ಡಾ.ಶರಣು ಬಿ ಗದ್ದುಗೆ ಯವರು ಪದ ಗ್ರಹಣ ಸ್ವೀಕರಿಸಿದರು. ಸರಕಾರದ ವಾರ್ತಾ ಇಲಾಖೆಯ ಕಮಿಷನರ್ ಡಾ ಹರ್ಷ ಐ ಪಿ ಎಸ್ ಪತ್ರ ನೀಡಿದರು.

ಪತ್ರಕರ್ತರ ಸಂಘದ ರಾಜ್ಯ ಅದ್ಯಕ್ಷರಾದ ಶಿವಾನಂದ ತಗಡೂರು ಶಾಲು ಹೊದಿಸಿ ಶುಭ ಹಾರೈಸಿದರು.ಸಂಘದ ರಾಜ್ಯ ಪದಾಧಿಕಾರಿಗಳಾದ ಕೆಂಚೆಗೌಡ,ಎನ್ ಮಂಜುನಾಥ,ಮದನ್ ಗೌಡ,ಗಿರೀಶ ಕುಲಕರ್ಣಿ, ಗಂಗಾಧರ ಹಿರೆಗುತ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ವಾರ್ತಾ ಇಲಾಖೆ ಡಾ.ಹರ್ಷ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಪತ್ರಕರ್ತರ ಬಗ್ಗೆ ಪತ್ರಿಕೆಗಳ ಬಗ್ಗೆ ಸವಿಸ್ತಾರವಾಗಿ ವಿಷಯ ಕುರಿತು ಮಾತನಾಡಿದರು.ಒಟ್ಟು 15 ಜನ ಸಂಪಾದಕರ ಪದಗ್ರಹಣ ನಡೆಯಿತು

Leave a Reply

Your email address will not be published. Required fields are marked *