ಸುಬೇದಾರ ವಿದ್ಯಾಲಯದಲ್ಲಿ ಸಿಬಿಎಸ್‌ಇ ಕ್ಲಸ್ಟರ್-8 ಖೋ-ಖೋ ಟೂರ್ನಿ ಯಶಸ್ವಿ

ಶಹಾಪುರ,,

ಸುಬೇದಾರ ವಿದ್ಯಾಲಯ ವಸತಿ ಸಿಬಿಎಸ್‌ಇ ಶಾಲೆಯಲ್ಲಿ ಜು. 25ರಿಂದ 30ರವರೆಗೆ ನಡೆದ ಸಿಬಿಎಸ್‌ಇ ಕ್ಲಸ್ಟರ್-8 ಖೋ-ಖೋ ಟೂರ್ನಮೆಂಟ್-2026 ಯಶಸ್ವಿಯಾಗಿ ಸಮಾಪ್ತಿಯಾಯಿತು.ಐದು ದಿನಗಳ ಕ್ರೀಡಾಕೂಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 400ಕ್ಕೂ ಹೆಚ್ಚು ಶಿಕ್ಷಕರು, ತರಬೇತುದಾರರು, ವ್ಯವಸ್ಥಾಪಕರು, ಪೋಷಕರು ಮತ್ತು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. 14, 17 ಹಾಗೂ 19 ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಜಿದ್ದಾಜಿದ್ದಿನ ಪಂದ್ಯಗಳು ನಡೆದಿದ್ದು, ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದರು.

ಡಾ. ಚಂದ್ರಶೇಖರ ಸುಬೇದಾರ ಹಾಗೂ ಶ್ರೀಮತಿ ಸುನಂದಾ ಸುಬೇದಾರ ಅವರ ಮಾರ್ಗದರ್ಶನದಲ್ಲಿ, ವ್ಯವಸ್ಥಾಪಕ ನಿರ್ದೇಶಕ ಕರಣ್ ಸುಬೇದಾರ ಅವರ ನೇತೃತ್ವದಲ್ಲಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಶಾಲೆಯ ಪ್ರಾಂಶುಪಾಲ ಡಾ. ದತ್ತಾರಾಜ್ ಕುಲಕರ್ಣಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದರು.

ಪಂದ್ಯಾವಳಿಯಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು. ತರಬೇತುದಾರರು ಮತ್ತು ತಂಡದ ವ್ಯವಸ್ಥಾಪಕರನ್ನೂ ಸನ್ಮಾನಿಸಲಾಯಿತು.ಶಾಲೆಯ ಆಡಳಿತ ಮಂಡಳಿ ಭಾಗವಹಿಸಿದ ಎಲ್ಲಾ ಶಾಲೆಗಳು, ವಿದ್ಯಾರ್ಥಿಗಳು, ತರಬೇತುದಾರರು, ಪೋಷಕರು, ಅಧಿಕಾರಿಗಳು, ಸ್ವಯಂಸೇವಕರು ಹಾಗೂ ಸಹಕರಿಸಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿತು.


ವಿಜೇತರ ಪಟ್ಟಿ

14 ವರ್ಷದೊಳಗಿನ ಬಾಲಕರ ವಿಭಾಗ

.ಪ್ರಥಮ: ನಂದಿ ಸ್ಕೂಲ್ ಸಿಬಿಎಸ್‌ಇ ಬಳ್ಳಾರಿ,

ದ್ವಿತೀಯ: ಜನನಿ ವಿದ್ಯಾ ಮಂದಿರ, ಬೆಂಗಳೂರು,

ತೃತೀಯ: ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಗಂಗಾವತಿ.

ಬಾಲಕಿಯರ ವಿಭಾಗ.

 ಪ್ರಥಮ: ಶಾರದಾ ದೇವಿ ಸ್ಕೂಲ್

ದ್ವಿತೀಯ: ಚಿತ್ರಕೂಟ ಸ್ಕೂಲ್,

ತೃತೀಯ: ಚಾಣಕ್ಯ ಸ್ಕೂಲ್.


 17 ವರ್ಷದೊಳಗಿನ ಬಾಲಕರ ವಿಭಾಗ.

ಪ್ರಥಮ: ಎಸ್. ಎಂ. ಕಲುಟಿ ಸ್ಪೋರ್ಟ್ಸ್ ಸ್ಕೂಲ್, ಚಂದರಗಿ,

ದ್ವಿತೀಯ: ಚಿತ್ರಕೂಟ ಸಿಬಿಎಸ್‌ಇ ಸ್ಕೂಲ್, ಬೆಂಗಳೂರು,

ತೃತೀಯ: ಶ್ರೀ ಸಾಯಿ ಸದ್ಭಾವನ ಸ್ಕೂಲ್ ಬೆಂಗಳೂರು.

 ಬಾಲಕಿಯರ ವಿಭಾಗ..

ಪ್ರಥಮ: ಚಿತ್ರಕೂಟ ಸ್ಕೂಲ್

ದ್ವಿತೀಯ : ನಂದಿ ಸ್ಕೂಲ್ ಸಿಬಿಎಸ್‌ಇ

ತೃತೀಯ: ಎಚ್.ಕೆ.ಎಸ್. ಇಂಟರ್ನ್ಯಾಷನಲ್ ಸ್ಕೂಲ್


19 ವರ್ಷದೊಳಗಿನ ಬಾಲಕರ ವಿಭಾಗ

ಪ್ರಥಮ: ಈಸ್ಟ್ ವೆಸ್ಟ್ ಇಂಟರ್ನ್ಯಾಷನಲ್ ಸ್ಕೂಲ್ ಮೈಸೂರು,

ದ್ವಿತೀಯ: ಪೊಲೀಸ್ ಪಬ್ಲಿಕ್ ಸ್ಕೂಲ್ ಬೆಂಗಳೂರು,

ತೃತೀಯ: ಶ್ರೀ ಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲೆ, ಬೆಂಗಳೂರು.

 ಬಾಲಕಿಯರ ವಿಭಾಗ..

 ಪ್ರಥಮ: ಎಂ.ಇ.ಸಿ. ಪಬ್ಲಿಕ್ ಸ್ಕೂಲ್, ಬೆಂಗಳೂರು,

ದ್ವಿತೀಯ: ಶ್ರೀ ಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲೆ ಬೆಂಗಳೂರು,

ತೃತೀಯ: ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್,

Leave a Reply

Your email address will not be published. Required fields are marked *