ನೂತನ ಪದಾಧಿಕಾರಿಗಳ ಆಯ್ಕೆ : ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪುನಶ್ಚೇತನ ಕಾರ್ಯಾಗಾರ, ವಿಶೇಷ ಅಧ್ಯಯನ ಶಿಬಿರ: ಡಾ.ರವೀಂದ್ರನಾಥ

ಯಾದಗಿರಿ,,
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಲ್ಲಿ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ ತರಬೇತಿ ಶಿಬಿರವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಎಸ್. ಹೊಸಮನಿ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ವಾರ್ಷಿಕ ಕ್ರಿಯಾಯೋಜನೆಗಳ ರೂಪುರೇಷೆ ಹಾಗೂ ವಿವಿಧ ಶೈಕ್ಷಣಿಕ ಸಮಾವೇಶಗಳ ಆಯೋಜನೆ ಕುರಿತು ಚರ್ಚಿಸಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಜಿಲ್ಲಾ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಲೆಕ್ಕಪರಿಶೋಧಕರಾಗಿ ಸುರೇಶಬಾಬು ಅರುಣಿ (ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಶಹಾಪುರ), ಶೈಕ್ಷಣಿಕ ಕಾರ್ಯದರ್ಶಿಯಾಗಿ ಸಾಬಪ್ಪ ಮೇತ್ರಿ (ಸರಕಾರಿ ಪದವಿ ಪೂರ್ವ ಕಾಲೇಜು, ಭೀಮರಾಯನಗುಡಿ), ಸಂಘಟನಾ ಕಾರ್ಯದರ್ಶಿಗಳಾಗಿ ದಶರಥ ಕೆ., ಶಾಂತ ಮಲ್ಲಯ್ಯ ಹಾಗೂ ಭೀಮಶ್ಯಪ್ಪ, ಕಾನೂನು ಮತ್ತು ಎನ್‌ಪಿಎಸ್ ಸಲಹೆಗಾರರಾಗಿ ಮಾನಪ್ಪ ದೊಡ್ಡಮನಿ (ಸರಕಾರಿ ಪದವಿ ಪೂರ್ವ ಕಾಲೇಜು, ಬಳಿಚಕ್ರ), ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ಶೇಖಪ್ಪ ವಾರಿ (ಸಿ.ಬಿ. ಪದವಿ ಪೂರ್ವ ಕಾಲೇಜು, ಶಹಾಪುರ) ಹಾಗೂ ಮಹಿಳಾ ಪ್ರತಿನಿಧಿಯಾಗಿ ಜ್ಯೋತಿಲತಾ ತಡಿಬಿಡಿಮಠ (ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಗುರಮಿಠ್ಕಲ್) ಅವರನ್ನು ಜಿಲ್ಲಾ ನಾಮನಿರ್ದೇಶಿತ ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಸುದರ್ಶನ್ ರೆಡ್ಡಿ, ಯಾದಗಿರಿ ತಾಲೂಕು ಅಧ್ಯಕ್ಷ ಸಾಬಯ್ಯ ಕವಲ್ದಾರ, ಶಹಾಪುರ ತಾಲೂಕು ಅಧ್ಯಕ್ಷ ಭೀಮಣ್ಣ ಅಂಚೆಸೂಗೂರ, ಸುರಪುರ ತಾಲೂಕು ಅಧ್ಯಕ್ಷ ಮೊನಯ್ಯ ಗೋನಾಲ, ಹುಣಸಗಿ ತಾಲೂಕು ಅಧ್ಯಕ್ಷ ಲಕ್ಷ್ಮಣ ರಾಠೋಡ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಾದ ಮರೆಪ್ಪ ನಾಯ್ಕೋಡಿ, ಚಂದ್ರಶೇಖರ್ ದೊಣ್ಣೆಗೌಡರ, ರುದ್ರಗೌಡ ಬಿರಾದರ್, ಶ್ಯಾಮ್ಯಲ್ ಕನ್ನಡಿ, ಸಿದ್ರಾಮಪ್ಪ ಅನ್ವಾರ್, ವಿಜಯಲಕ್ಷ್ಮಿ, ಭೀಮಶಂಕರ ದೊಡ್ಡಮನಿ, ಬಸರೆಡ್ಡಿ, ರಾಜಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *