ಹಿರಿಯ ಸಾಹಿತಿ, ಸಂಶೋಧಕ ಡಿ.ಎನ್. ಅಕ್ಕಿ ಅವರಿಗೆ ಚಾವುಂಡರಾಯ ದತ್ತಿ ಪ್ರಶಸ್ತಿ : ಡಾ. ರಾಘವೇಂದ್ರ ಹಾರಣಗೇರಾ

ಲೇಖನ : ಡಾ.ರಾಘವೇಂದ್ರ ಹಾರಣಗೇರಾ


     ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ಹಾಗೂ ಇತಿಹಾಸ ಸಂಶೋಧಕರಾದ ಡಿ.ಎನ್. ಅಕ್ಕಿ ಅವರಿಗೆ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಚಾವುಂಡರಾಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ೩೦ ಸಾವಿರ ರೂ. ನಗದು ಬಹುಮಾನವನ್ನು ಹೊಂದಿರುವ ಈ ಪ್ರಶಸ್ತಿಯು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ವಿ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮತ್ತು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಪದ್ಮರಾಜ ದಂಡಾವತಿ ಮುಂತಾದವರನ್ನು ಒಳಗೊಂಡ ಸಮಿತಿಯು ಡಿ.ಎನ್. ಅಕ್ಕಿ ಅವರನ್ನು ಚಾವುಂಡರಾಯ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
       ಸರಳ ಸಜ್ಜನಿಕೆಯ, ಸುಂಸ್ಕೃತ, ಸಾತ್ವಿಕ ನಡೆ ನುಡಿಯ, ಸದುವಿನಯಶೀಲ ದೇವಿಂದ್ರಪ್ಪ ನಾಭಿರಾಜ ಅಕ್ಕಿಯವರು ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಡಿ.ಎನ್. ಅಕ್ಕಿಯವರೆಂದೇ ಚಿರಪರಿಚಿತರಾಗಿದ್ದಾರೆ. ಶಿಕ್ಷಕರಾಗಿ ವೃತ್ತಿಬದ್ಧತೆಯಿಂದ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಡಿ.ಎನ್. ಅಕ್ಕಿ ಅವರು ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲಾ, ಕಾವ್ಯ, ಲೇಖನ, ಸಂಶೋಧನ ಕ್ಷೇತ್ರಕ್ಕೆ ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಮುಂಬೆಳಗು, ಚಿಗುರು ಚಿಂತನ, ಶಹಾಪುರ ತಾಲೂಕ ದರ್ಶನ, ಸಗರನಾಡಸಿರಿ, ಹಡೆದವ ಹಾಡ್ಯಾಳ, ಸನ್ನತಿ ಚಂದ್ರಲಾAಬಾ, ಮಯಾಮದ್ದಲೆ, ಯಕ್ಷಪ್ರಶ್ನೆ, ಬಾನರಂಗ, ಜೈನ ವಿಗ್ರಹಗಳು, ವರ್ಧಮಾನ ಮಹಾವೀರ, ಜೀನದನಿ, ಹಕ್ಕುಲತೆನಿ ಮುಂತಾದ ೩೦ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.
     ಅಪಾರ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಕನ್ನಡದ ಪ್ರಮುಖ ಕವಿ, ಸಾಹಿತಿ, ಇತಿಹಾಸ ಸಂಶೋಧಕ, ಚಿತ್ರಕಲಾವಿದ, ಲೇಖಕ, ಹೀಗೆ ಡಿ.ಎನ್. ಅಕ್ಕಿ ಅವರ ಬದುಕು ಹಲವು ವೈವಿಧ್ಯತೆಗಳಿಂದ ಕೂಡಿದೆ. ೧೯೯೬ರಲ್ಲಿ ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ೧೯೯೭-೯೮ರಲ್ಲಿ ಕೇಂದ್ರ ಸರ್ಕಾರದಿಂದ ಆದರ್ಶ ಶಿಕ್ಷಕ ರಾಷ್ಟç ಪ್ರಶಸ್ತಿ ಹಾಗೂ ೨೦೨೦ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾಡಿನ ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.
     ಡಿ.ಎನ್. ಅಕ್ಕಿಯವರ ಅಧ್ಯಯನದ ಶಿಸ್ತು, ಸಂಶೋಧನೆಯ ಕ್ಷೇತ್ರ ಕಾರ್ಯ, ಬರವಣಿಗೆಯ ಅಚ್ಚುಕಟ್ಟುತನ, ವಿಸ್ತಾರವಾದ ಓದು, ಮಾನವೀಯಪರ ಮತ್ತು ನಾಡುನುಡಿಯ ಬಗ್ಗೆ ಅಪಾರ ಕಾಳಜಿ, ಹೊಸ ತಲೆಮಾರಿನವರಿಗೆ ತುಂಬಾ ಅನುಕರಣೀಯವಾಗಿದೆ. ಸದ್ದುಗದ್ದಲವಿಲ್ಲದೆ ಅಪರೂಪದ ಸಾಧಕರಾಗಿರುವ ಸಾಹಿತಿ ಡಿ.ಎನ್. ಅಕ್ಕಿ ಅವರು ಬದುಕು-ಬರಹ, ಒಳ-ಹೊರ ಒಂದಾಗಿಸಿಕೊAಡು ಮಾನವೀಯ ಸಂವೇದನೆಯ ಸಾಹಿತಿ, ಸಂಶೋಧಕರಾಗಿ ತುಂಬಾ ವಿಶಿಷ್ಠವಾಗಿ ಕಾಣುತ್ತಾರೆ.
     ನಾಡಿನಲ್ಲಿ ಹಲವು ದಶಕಗಳಿಂದ ಸದ್ದಿಲ್ಲದೆ ಸಾಹಿತ್ಯ, ಇತಿಹಾಸ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಠವಾಗಿ ಕೆಲಸ ಮಾಡುತ್ತಿರುವ ಡಿ.ಎನ್. ಅಕ್ಕಿಯವರು ಕಲ್ಯಾಣ ಕರ್ನಾಟಕ ಪ್ರಮುಖ ಸಂಪನ್ಮೂಲ ಇತಿಹಾಸ ಸಂಶೋಧಕರಾಗಿದ್ದಾರೆ. ಅವರ ಬದುಕು ಮತ್ತು ಬರಹಗಳ ಮೇಲೆ ಎಮ್.ಫಿಲ್., ಪಿ.ಎಚ್.ಡಿ. ಪದವಿ ಅಧ್ಯಯಗಳಾಗಿವೆ. ಪ್ರೀತಿ, ವಾತ್ಸಲ್ಯ, ಆತ್ಮೀಯತೆ, ಮಾನವೀಯ ಅನುಕಂಪ ಮೊದಲಾದ ಗುಣಗಳಿಂದ ಎಲ್ಲರಿಗೂ ಬೇಕಾದವರಾಗಿದ್ದಾರೆ.
      ತಮ್ಮ ವೃತ್ತಿ, ಪ್ರವೃತ್ತಿಗಳೊಂದಿಗೆ ನಾಡು-ನುಡಿಯ ಸಾಹಿತ್ಯ ಹಾಗೂ ಸಾಂಸ್ಕೃತಿ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಕಾರ್ಯನಿರ್ವಹಿಸಿದ ಡಿ.ಎನ್. ಅಕ್ಕಿಯವರು ಆ ಸ್ಥಾನಗಳಿಗೆ ಗೌರವವನ್ನು ಮತ್ತು ಮಹತ್ವವನ್ನು ತಂದು ಕೊಟ್ಟಿದ್ದಾರೆ. ಅವರ ಬದುಕು, ಬರಹ ಹಾಗೂ ಸಾಧನೆಗಳ ಮೂಲಕ ಮಾತನಾಡುವ ಸಾತ್ವಿಕ ವಿದ್ವತ್ತನ್ನು ಹೊಂದಿರುವ ಡಿ.ಎನ್. ಅಕ್ಕಿಯವರಿಗೆ ಚಾವುಂಡರಾಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕಲ್ಯಾಣ ಕರ್ನಾಟಕದ ಹಾಗೂ ಸಗರನಾಡಿನ ಹೆಮ್ಮೆಯ ಸಂಗತಿ.

Leave a Reply

Your email address will not be published. Required fields are marked *