ನಾಳೆ ಶಹಾಪುರದಲ್ಲಿ ಪ.ಗು. ಹಳಕಟ್ಟಿ ಕುರಿತು ವಿಚಾರ ಸಂಕಿರಣ

ಶಹಾಪುರ,

ವಿಶ್ವ ಚೇತನ ಜನ ಸೇವಾ ಸಂಸ್ಥೆ (ರಿ.), ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (ಯಾದಗಿರಿ) ಇವರ ಸಂಯುಕ್ತ ಆಶ್ರಯದಲ್ಲಿ “ವಚನ ಸಾಹಿತ್ಯದ ಪಿತಾಮಹ ಪ.ಗು. ಹಳಕಟ್ಟಿ” ಕುರಿತ ವಿಚಾರ ಸಂಕಿರಣವನ್ನು ಜುಲೈ 19ರಂದು(ನಾಳೆ) ಸಂಜೆ 5 ಗಂಟೆಗೆ ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಚೇತನ ಜನಸೇವಾ ಸಂಸ್ಥೆಯ ಅಧ್ಯಕ್ಷ ದೆವಿಂದ್ರಪ್ಪ ಎಸ್. ವಿಶ್ವಕರ್ಮ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಅಜೇಂದ್ರ ಮಹಾಸ್ವಾಮಿಗಳು, ಏಕದಂಡಿಗಿ ಮಠ, ಶಹಾಪುರ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶ್ರೀ ಶಂಭುಲಿಂಗ ಬಿ. ದೇಸಾಯಿ, ಕೆಎಂಎಎಸ್ ಮುಖ್ಯಾಧಿಕಾರಿ, ಪುರಸಭೆ ಜೇವರ್ಗಿ ಉದ್ಘಾಟಿಸಲಿದ್ದಾರೆ.ಶಹಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ಕರೇಗಾರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಚೇತನ ಜನಸೇವಾ ಸಂಸ್ಥೆಯ ಅಧ್ಯಕ್ಷ ದೆವಿಂದ್ರಪ್ಪ ಎಸ್. ವಿಶ್ವಕರ್ಮ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ರಾಜು ಬೊಮ್ಮನಹಳ್ಳಿ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಲಯನ್ಸ್ ಕ್ಲಬ್ ಶಹಾಪುರದ ಅಧ್ಯಕ್ಷ  ಸಾಯಬಣ್ಣ ಪುರ್ಲೆ ಹಾಗೂ ಡಿಡಿಯು ಪಿಯು ಕಾಲೇಜು ದೋರನಹಳ್ಳಿಯ ಪ್ರಾಂಶುಪಾಲ ಮಹೇಶ ಪತ್ತಾರ ಉಪಸ್ಥಿತರಿರುವರು. ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *