ಶಹಾಪುರ:
ಸಿಂದಗಿ ಪಟ್ಟಣದಲ್ಲಿ ಏಪ್ರಿಲ್ ೨೦ರಂದು ನಡೆದ ಧರ‍್ಮಿಕ ಕರ‍್ಯಕ್ರಮದಲ್ಲಿ ವೀರಶೈವ ರ‍್ಮ, ಸಮುದಾಯ ಹಾಗೂ ಅದರ ಅನುಯಾಯಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಸುಗೂರೇಶ್ವರ ಶಿವಾಚರ‍್ಯರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧರ‍್ಮಿಕ ವಿಚಾರಗಳ ಕುರಿತು ರ‍್ಚಿಸುವಾಗ ಅಶ್ಲೀಲ ಹಾಗೂ ಅವಹೇಳನಕಾರಿ ಪದಗಳನ್ನು ಬಳಸುವುದು ಯಾವುದೇ ಕಾರಣಕ್ಕೂ ಸಮಂಜಸವಲ್ಲ. ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಹಿರಿಯ ಶ್ರೀಗಳೊಂದಿಗೆ ರ‍್ಚೆ ನಡೆಸಿ ಸ್ಪಷ್ಟನೆ ಪಡೆಯಬಹುದಿತ್ತು. ಆದರೆ ಮನಬಂದಂತೆ ಮಾತನಾಡಿ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಳ್ಳುವವರು ಸರ‍್ವಜನಿಕ ವೇದಿಕೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುವ ಬದಲು ಮುಕ್ತ ಸಂವಾದಕ್ಕೆ ಬರಬೇಕು. ಒಂದು ರ‍್ಮ ಹಾಗೂ ಸಮುದಾಯವನ್ನು ಹೀಯಾಳಿಸುವ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಇಂತಹ ನಡೆ ಖಂಡನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಸರ‍್ವಜನಿಕವಾಗಿ ಕ್ಷಮೆಯಾಚಿಸಲು ಅವಕಾಶ ನೀಡಲಾಗಿದ್ದರೂ ಸಂಬಂಧಪಟ್ಟವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಧರ‍್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಡಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ಸುಗೂರೇಶ್ವರ ಶಿವಾಚರ‍್ಯರು ತಿಳಿಸಿದ್ದಾರೆ.