ವಸತಿ ನಿವೇಶನ ಒದಗಿಸಿಕೊಡುವಂತೆ ಶಾಸಕರ ಕಾರ್ಯಲಯದ ಮುಂದೆ ಪ್ರತಿಭಟನೆ

ವಡಗೇರಾ,,

ಕೃಷ್ಣಾ ನದಿಯ ದಡದ ಮೇಲೆ ಬರುತ್ತಿರುವ ಯಕ್ಷಂತಿ ಅಯ್ಯಳಕ್ಕೆ ಬೊಮ್ಮನಹಳ್ಳಿ ಮಾಲಹಳ್ಳಿ ಐಕೂರು ವಡಗೇರಾ ತುಮಕೂರು ಗ್ರಾಮಗಳಿಗೆ ಕಳೆದ 50 ವರ್ಷಗಳಿಂದ ದಲಿತ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ಸೌಕರ್ಯವಿಲ್ಲದೆ ನರಳುತ್ತಿದ್ದು ಕೂಡಲೇ ಶಾಸಕರು ವಸತಿ, ನಿವೇಶನವನ್ನು ಒದಗಿಸಿ ಕೊಡುವಂತೆ ಶಾಸಕರ ಕಾರ್ಯಾಲಯದ ಮುಂದೆ  ದಲಿತ ಸಂಘರ್ಷ ಸಮಿತಿ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಸಕರಾದ ಚನ್ನಾರೆಡ್ಡಿ ತುನ್ನೂರವರಿಗೆ ಮನವಿ ಮಾಡಿದರು.

ಅಂಬೇಡ್ಕರ್ ವಸತಿ, ಬಸವ ವಸತಿ, ಪ್ರಧಾನ ಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಯಾವುದಾದರೂ ಒಂದು ಯೋಜನೆಯಲ್ಲಿ ವಸತಿ ಸೌಲಭ್ಯ ಒದಗಿಸಿ ಕೊಡಬೇಕು.ದಲಿತ ಕುಟುಂಬಗಳಿಗೆ ಅಂಬೇಡ್ಕರ್ ಭವನ ಮಂಜೂರು ಮಾಡಬೇಕು. ಯಕ್ಷಿಂತಿ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ರಸ್ತೆ ಸುಧಾರಣೆ ಮಾಡಿಸಬೇಕು. ಬಡ ರೈತರ ಜಮೀನುಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೊರವೆಲ್ ಹಾಗೂ ಕೃಷ್ಣ ನದಿ ಪಕ್ಕದಲ್ಲಿರುವ ನದಿ ಹಾಗೂ ಹಳ್ಳದಿಂದ ಪೈಪ್ ಲೈನ್ ಮೂಲಕ ರೈತರ ಜಮೀನುಗಳಿಗೆ ನೀರು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹತ್ತಿಗುಡೂರ ಸ ನಂ 62/1/2/3/4 ಒಟ್ಟು 25 ಎಕರೆ ಜಮೀನು ಭೂ ಮಾಲಿಕರು ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಒಪ್ಪಿಗೆ ನೀಡಿದ್ದು ಇಲ್ಲಿಗೆ ನಾಲ್ಕು ವರ್ಷಗಳಾದರೂ  ಭೂ ಒಡೆತನದ ಯೋಜನೆಯ ಸರ್ಕಾರದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದರು.ಪ್ರತಿಭಟನೆಯಲ್ಲಿ ಹತ್ತಿಗುಡೂರ ಶರಣರಡ್ಡಿ ಹತ್ತಿಗೂಡೂರು,  ನಿಂಗಣ್ಣ ಕರಡಿ, ಸಿದ್ದಣ್ಣ ಹೊಸಮನಿ, ಶರಣಪ್ಪ ಚಲುವಾದಿ, ದೇವಪ್ಪ ಅನಸೂರ ಮರೆಮ್ಮ ಹೊಸಮನಿ ಮಾಳಮ್ಮ ಹತ್ತಿಗುಡೂರ ಶಿವಮ್ಮ ಹತ್ತಿಗುಡೂರ ಮಹಾಲಕ್ಷ್ಮಿ ಮಲ್ಲಮ್ಮ ಕೊಂಗೊಂಡಿ ಲಕ್ಷ್ಮಿ ಅನವಾರ ಇತರೆ ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

One attachment  •  Scanned by Gmail

Leave a Reply

Your email address will not be published. Required fields are marked *