ಬೈ ಎಲೆಕ್ಷನ್ ಎಫೆಕ್ಟ್ : ಮೇ 16ರಂದು ಮುಸ್ಲಿಂ ಸಮಾವೇಶ : ಕಾಂಗ್ರೆಸ್ಸಿಗೆ ಕೌಂಟರ್ ಕೊಡಲು ಸಜ್ಜು : ಚುನಾವಣೆಯಲ್ಲಿ ಆಯ್ಕೆ ಮುಕ್ತವಾಗಿಡಲು ಅವಕಾಶ ? 

ಬಸವರಾಜ ಕರೇಗಾರ 

ಬೆಂಗಳೂರು,,

ರಾಜ್ಯದಲ್ಲಿ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯ ಬಗ್ಗೆ ರಾಜ್ಯ ಮುಸ್ಲಿಂ ಸಂಘಟನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಕೌಂಟರ್ ಕೊಡಲು ಮೇ 16 ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲು ಮುಸ್ಲಿಂ ವಿವಿಧ ಸಂಘಟನೆಗಳು ಮುಂದಾಗಿದ್ದು ಅದರ ಪ್ರಯುಕ್ತ ಶಿವಾಜಿನಗರದ ಎಜೆ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ರಾಜ್ಯದ ಹಲವು ಮುಸ್ಲಿಂ ಸಂಘಟನೆಗಳು, ಉಲೇಮಾ ಸಂಘಟನೆಗಳು, ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಘಟನೆಗಳು ಸಭೆ ಕರೆದಿದ್ದು ಕಾಂಗ್ರೆಸ್ ಪಕ್ಷ ಕಳೆದ ಮೂರು ವರ್ಷದಲ್ಲಿ ನಮ್ಮನ್ನು ಹೇಗೆ ನಡೆಸಿಕೊಂಡಿವೆ, ನಮ್ಮ ಎಷ್ಟು ಬೇಡಿಕೆಗಳನ್ನು ಈಡೇರಿಸಿವೆ ಎನ್ನುವ ಬಗ್ಗೆ ಪ್ರಬಲವಾದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ?.

2023ರ ಚುನಾವಣೆಯಲ್ಲಿ ಏಕಪಕ್ಷೀಯ ನಿರ್ಧಾರ.

2023ರ ಚುನಾವಣೆಯಲ್ಲಿ ಏಕಪಕ್ಷಿಯವಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಬೆಂಬಲಿಸಿದ್ದರು. ಆದರೆ ಕಾಂಗ್ರೆಸ್ ನಮ್ಮನ್ನು ಯಾವ ರೀತಿಯಾಗಿ ನಡೆಸಿಕೊಂಡಿತು ಎನ್ನುವುದಕ್ಕೆ ದಾವಣಗೆರೆ ಚುನಾವಣೆ ಸಾಕ್ಷಿ.ಪ್ಯಾಸಿಸ್ಟ್ ಧೋರಣೆ ಸರಿಪಡಿಸಬೇಕು, ಬಿಜೆಪಿಯ ದಮನಕಾರಿ ಧೋರಣೆಗಳು ಸರಿ ಕಾಣಿಸಲಿಲ್ಲ ಎಂದು ಕಾಂಗ್ರೆಸ್ ಬೆಂಬಲಿಸಿದೆವು. ನಮ್ಮ ಬೇಡಿಕೆಗಳಾದ ಮೀಸಲಾತಿ,ಹಿಜಾಬ್ ನಿರ್ಬಂಧ, ಬಜೆಟ್ ಹಂಚಿಕೆ, ಗೋ ಹತ್ಯೆ ಕಾಯ್ದೆ, ಸಮುದಾಯದ ಅಗತ್ಯ ಬೇಡಿಕೆಗಳನ್ನು ಈಡೇರಿಸದ ಕಾಂಗ್ರೆಸ್ ಪಕ್ಷ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯವಾಗಿ ಮುಸ್ಲಿಮರಿಗೆ ಸ್ವಾತಂತ್ರ್ಯ ನೀಡಲು ಬೆಂಬಲ.

ಮುಸ್ಲಿಮರು 2023ರಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಕಳೆದ ಮೂರು ವರ್ಷಗಳಿಂದ ಮುಸ್ಲಿಂ ಸಮುದಾಯವನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಅದಕ್ಕೆ ದಾವಣಗೆರೆ ಉಪಚುನಾವಣೆಯೇ ಸಾಕ್ಷಿ. ಮುಂದಿನ 2028 ರ ಚುನಾವಣೆಯಲ್ಲಿ ಆವಾವ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎನ್ನುವ ನಿರ್ಣಯವನ್ನು ಸ್ಥಳೀಯ ಕ್ಷೇತ್ರದ ಮುಸ್ಲಿಂ ಮುಖಂಡರಿಗೆ ಬಿಟ್ಟು ಕೊಡಬೇಕು ಎನ್ನುವ ನಿರ್ಣಯ ಸಮಂಜಸ ಎನ್ನುವ ವಿಷಯದ ಬಗ್ಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು ಎಂದು ತಿಳಿದುಬಂದಿದ್ದು, ಇದು ಮುಂದುವರೆದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ. ಜೆಡಿಎಸ್ ಪಕ್ಷ ಈ ವಿಷಯವನ್ನು ಯಾವ ರೀತಿ ಎನ್ಕ್ಯಾಚ್ ಮಾಡಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಮಾವೇಶಕ್ಕೆ ರಾಜಕಾರಣಿಗಳಿಗೆ ಆಹ್ವಾನವಿಲ್ಲ.

ಮೇ ೧೬ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಯಾವ ಪಕ್ಷದ ರಾಜಕಾರಣಿಗಳಿಗೂ ಆಹ್ವಾನ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ನಾಯಕತ್ವದ ಕೊರತೆಯಿಂದಾಗಿ ಅಲ್ಲಿನ ಮುಸ್ಲಿಂ ನಾಯಕರು ಪರ ವಿರೋಧವಾಗಿದ್ದಾರೆ ಎನ್ನಲಾಗಿದೆ.

ಲಕ್ಷಗಟ್ಟಲೆ ಜನ ಸೇರುವ ನಿರೀಕ್ಷೆ.

 ಸಮಾವೇಶದಲ್ಲಿ ರಾಜ್ಯಾದ್ಯಂತ ವಿವಿಧ ಮುಸ್ಲಿಂ ಸಂಘಟನೆಯ ಮತ್ತು ಸಮುದಾಯದ ನಾಯಕರು ಸೇರುವಂತೆ ಸಮಾವೇಶದ ಸಂಚಾಲಕರಾದ ಸುಹೈಲ್ ಅಹ್ಮದ್ ಕರೆ ನೀಡಿದ್ದಾರೆ. ನಮ್ಮಿಂದ ಮತ ಹಾಕಿಸಿಕೊಂಡು ನಮ್ಮನ್ನು ಮರೆಯುವ ನಾಯಕರನ್ನು ಎಚ್ಚರಿಸಲು ಸಮಾವೇಶಗಳು ನಡೆಯಬೇಕು. ಪ್ರಜಾಪ್ರಭುತ್ವ ದುರ್ಬಲ ಎಂದುಕೊಂಡಿದ್ದಾರೆ. ನಾವು ನಾಯಕರನ್ನು ಎಚ್ಚರಿಸಬೇಕು. ಮುಸ್ಲಿಂ ಸಮುದಾಯ ಅತಿ ದೊಡ್ಡ ಸಮುದಾಯ. ಒಂದು ಸಮುದಾಯಕ್ಕೆ ಏಕನಾಯಕತ್ವ ಇರಬಾರದು ಎನ್ನುವುದು ನನ್ನ ಅನಿಸಿಕೆ ಎಂದು ಸುಹೈಲ್ ಹೇಳಿದ್ದಾರೆ.

ಕಾಂಗ್ರೆಸ್ಸಿಗೆ ಎಚ್ಚರಿಕೆಯ ಗಂಟೆ 

ಮೇ 16ರ ಸಮಾವೇಶದಲ್ಲಿ ನಡೆಯುವ ಚಟುವಟಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಘಂಟೆಯಾಗಲಿದೆ ಎನ್ನಲಾಗಿದೆ. ಮುಸ್ಲಿಮರು ಸತತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದಾರೆ. ಉಪಚುನಾವಣೆಯಲ್ಲಿ ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಉದ್ದೇಶದಿಂದ ಅಸಮಾಧಾನಗೊಂಡ ಮುಸ್ಲಿಮರು ಬೃಹತ್ ಸಮಾವೇಶಕ್ಕೆ ಸಜ್ಜಾಗಿದ್ದಾರೆ. ಸಮಾವೇಶದಲ್ಲಿ ನಡೆಯುವ ವಿಚಾರಗಳು 2028ರ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ… ?.

Leave a Reply

Your email address will not be published. Required fields are marked *