ಕಾಗಿನೆಲೆ,,
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕನಂಕಾಗಳದಲ್ಲಿ ಎಪ್ರಿಲ್ 30 ರಂದು ಮೊದಲ ದತ್ತಿ ಉಪನ್ಯಾಸ ನಡೆಯಲಿದೆ.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ‘ ಕನಕದಾಸ ಸಾಹಿತ್ಯ ದತ್ತಿನಿಧಿ’ ಯೋಜನೆಯನ್ನು ಪ್ರಾರಂಭಿಸಿದ್ದಲ್ಲದೆ ಕಳೆದ ವರ್ಷ ಶಿವೈಕ್ಯರಾದ ಅವರ ತಾಯಿ ಶರಣೆ ಮಲ್ಲಮ್ಮ ನವರ ಹೆಸರಿನಲ್ಲಿ 25000 ರೂಪಾಯಿಗಳ ದತ್ತಿನಿಧಿ ನೀಡುವ ಮೂಲಕ ಕನಕದಾಸ ಸಾಹಿತ್ಯ ದತ್ತಿನಿಧಿಗೆ ಚಾಲನೆ ನೀಡಲಾಗಿದೆ ಎಂದು ಕಾಗಿನೆಲೆ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ತಿಳಿಸಿದ್ದಾರೆ.
ಶಿವಕ್ಯೆ ಶರಣೆ ಮಲ್ಲಮ್ಮ ನಾಗಪ್ಪ ಕರಿಗಾರ ದತ್ತಿನಿಧಿಯಿಂದ ಎಪ್ರಿಲ್30 ರಂದು ” ಕನಕದಾಸರ ಸಾಹಿತ್ಯದಲ್ಲಿ ಸ್ತ್ರೀಪರ ನಿಲುವುಗಳು ” ವಿಷಯದ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಹನುಮಂತ ಸೋಮನಕಟ್ಟಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಹಾನಗಲ್ಲಿನ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಪುಷ್ಪಾವತಿ ಶೆಲವಡಿಮಠ ಅವರು ಉಪನ್ಯಾಸ ನೀಡಲಿದ್ದಾರೆ.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಲೆಕ್ಕಾಧೀಕ್ಷಕರಾದ ಸಿ ಬಿ ಸಪ್ಪಿನ್ ಅವರು ಉಪಸ್ಥಿತರಿರುವ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಪ್ರಾಧಿಕಾರದ ಸಂಶೋಧಕ ಡಾ. ಜಗನ್ನಾಥ ಆರ್ ಗೇನಣ್ಣನವರು..
