ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ : ಮೌಖಿಕ ಸಂದರ್ಶನಕ್ಕೆ ಹೈಕೋರ್ಟ್ ತಡೆ 

ರಾಯಚೂರು,,

ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅಕ್ರಮ ವಾಸನೆ ಕೇಳಿ ಬಂದಿದ್ದರು ಕೂಡ ಬ್ಯಾಂಕ್ ಆಡಳಿತ ಮಂಡಳಿಯವರು ಯಾವುದನ್ನು ಲೆಕ್ಕಿಸದೆ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನು ಮುಂದುವರಿಸಿದ್ದರು. ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದ ಹೊರತು ನೇಮಕಾತಿ ಮಾಡಿಕೊಳ್ಳುವಂತಿಲ್ಲ ಎನ್ನುವ ಆದೇಶವಿದ್ದರೂ ಕೂಡ ಇದಾವುದನ್ನು ರಾಯಚೂರು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಲೆಕ್ಕಿಸದೆ ಸಿಬ್ಬಂದಿ ನೇಮಕಾತಿಗೆ ನವಂಬರ್ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿತ್ತು. ಪರೀಕ್ಷೆ ಮುಗಿಸಿ ದಾಖಲಾತಿ ಪರಿಶೀಲಗಳನ್ನು ಮುಗಿಸಿ 1:5 ರಂತೆ ಮೌಕಿಕ ಸಂದರ್ಶನ ಪ್ರಕ್ರಿಯೆಯನ್ನು ಬ್ಯಾಂಕ್ ಆಡಳಿತ ಮಂಡಳಿಯವರು ಆರಂಭಿಸಲು ತರತುರಿಯಲ್ಲಿ ದಿನಾಂಕ ನಿಗದಿಪಡಿಸಿತ್ತು.

ಆದರೆ ಹೈಕೋರ್ಟ್ ಇಂದು ಒಳಮಿಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತಡೆ ನೀಡಿದೆ. ಇದನ್ನರಿತ ರಾಯಚೂರು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಹೈಕೋರ್ಟಿನ ಆದೇಶವನ್ನು ಪಾಲಿಸುತ್ತಾ ಮೌಕಿಕ ಸಂದರ್ಶನ ದಿನಾಂಕವನ್ನು ಮುಂದೂಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

 

ಮೌಖಿಕ ಅಂಕಗಳನ್ನು ಹೆಚ್ಚಿಸುವ ಪಿಸು ಮಾತಿನ ಸದ್ದು ?

ರಾಯಚೂರು ಡಿಸಿಸಿ ಬ್ಯಾಂಕಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ 1:5ರಂತೆ ಮೌಖಿಕ ಸಂದರ್ಶನಕ್ಕಾಗಿ 15 ಅಂಕಗಳ ಬದಲಿಗೆ 30 ಅಂಕಗಳನ್ನು ಹೆಚ್ಚಿಸುವ ಲೆಕ್ಕಾಚಾರ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ನಡೆದಿದೆ ಎನ್ನುವ ಮಾತು ಜಿಲ್ಲೆಯಾದ್ಯಂತ ಪಿಸುಗುಟ್ಟುತ್ತಿದೆ ಎನ್ನಲಾಗಿದೆ. ಕೆಲವು ಸಮುದಾಯಗಳ ಅಭ್ಯರ್ಥಿಗಳನ್ನು ಮೇಲಕ್ಕೆ ತರಲು ಮೌಖಿಕ ಅಂಕಗಳೇ ಆಧಾರ. ಆದ್ದರಿಂದ ಆಡಳಿತ ನಿರ್ದೇಶಕ ಮಂಡಳಿಯಲ್ಲಿ ಬೇಕಿದ್ದವರನ್ನು ಮೇಲಕ್ಕೆ ತರಲು ಮೌಖಿಕ ಅಂಕಗಳನ್ನು ಹೆಚ್ಚಿಸುವ ಸಂಚು ನಡೆದಿದೆ ಎನ್ನಲಾಗಿದೆ. ಇದರಿಂದ ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಮೌಖಿಕ ಅಂಕಗಳು ಹೆಚ್ಚಾಗುವುದರಿಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ನೌಕರಿ ಗಿಟ್ಟಿಸಿಕೊಳ್ಳುವ ಆತಂಕ ವ್ಯಕ್ತವಾಗುತ್ತಿದೆ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಆತಂಕ ವ್ದಯಕ್ತಪಡಿಸಿದ್ದಾರೆ. ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳಬೇಕಾದರೆ ಪರೀಕ್ಷೆಯು ಯಾಕೆ ಬೇಕಿತ್ತು ಎಂದು ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದು ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *