2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿ ಗಳಿಂದಲ್ಲ. ಒಟ್ಟುಗೂಡಿದ ಸಮುದಾಯಗಳಿಂದ ?

ಬಸವರಾಜ ಕರೇಗಾರ

ಕವಿಡೆಸ್ಕ,,

2023ರ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಮುಂದಿನ ಐದು ವರ್ಷಗಳ ಚುನಾವಣೆಗಾಗಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. 2023ರ ಹಿಂದಿನ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ರಾಜ್ಯದ ಜನತೆ ಬೇಸತ್ತ ಪರಿಣಾಮವಾಗಿ ಬೇರೆ ಪಕ್ಷಗಳ ಕಡೆ ಮತದಾರರು ವಾಲಿದ್ದರು.

ಸಂದರ್ಭ ಹೇಗಿತ್ತು ನೋಡಿ,, ಕಾಂಗ್ರೆಸ್ ಪಕ್ಷ 2023ರ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಕೊಡುವುದಾಗಿ ಘೋಷಿಸಿತು. ಮಾಸಿಕ 200 ಯುನೀಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಕುಟುಂಬದ ಯಜಮಾನಿಗೆ ಮಾಸಿಕ 2000 ರೂ, ನಿರುದ್ಯೋಗಿಗಳಿಗೆ 3000 ರೂ ಮಾಸಿಕ ಭತ್ಯೆ ಸೇರಿದಂತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ಘೋಷಿಸಿತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಚಾರ ಮಾಡಿದರೂ ಮತದಾರರು ಅವರನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡರು. 2023ರಲ್ಲಿ ಕಾಂಗ್ರೆಸ್ 135ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದು ಈಗ ಇತಿಹಾಸ.

“ಆದರೆ ರಾಜಕೀಯ ವಿಶ್ಲೇಷಕರು ಹೇಳುವುದೆ ಬೇರೆ”

 ರಾಜ್ಯದಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರಬಹುದು. ಆದರೆ ವಾಸ್ತವಾಂಶ ಬೇರೆ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಗ್ಯಾರೆಂಟಿಗಳು ನೆಪ ಮಾತ್ರ.ಇಲ್ಲಿ ಕೆಲಸ ಮಾಡಿದ್ದು ಜಾತಿ ಸಮುದಾಯಗಳು. ಒಂದು ಮುಸ್ಲಿಂ ಸಮುದಾಯದವರು ರಾಜ್ಯಾದ್ಯಂತ ಪ್ರಬಲ ತೀರ್ಮಾನ ಕೈಗೊಂಡು ಕಾಂಗ್ರೆಸ್ ಪಕ್ಷ ಬೆಂಬಲಿಸಿತು. ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಯಾಗುವರು ಎನ್ನುವ ಬಲವಾದ ನಂಬಿಕೆಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು ಎನ್ನಲಾಗಿದೆ. ಇನ್ನೂ ದಕ್ಷಿಣ ಕರ್ನಾಟಕದಲ್ಲಿ ಪ್ರಬಲ ಸಮುದಾಯವೆಂದರೆ ಒಕ್ಕಲಿಗ ಸಮುದಾಯ. ಸದಾ H.D. ದೇವೇಗೌಡರ ಪರ ನಿಲ್ಲುತ್ತಿದ್ದ ಅವರು ಡಿಕೆ ಶಿವಕುಮಾರ್ ಅವರ ಭಾಷಣದಲ್ಲಿ ನಾನು ಮುಂದಿನ ಬಾರಿ ಮುಖ್ಯಮಂತ್ರಿ ಯಾಗುವುದು ನಿಮಗೆ ಬೇಕಿಲ್ಲವೇ ಎಂದು ಹೇಳಿಕೊಂಡು, ಇಡೀ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ವಾಲುವಂತೆ ಮಾಡಿದರು.

ಕುರುಬ ಸಮುದಾಯದವರು ಇವತ್ತಿಗೂ ಕೂಡ ಸಿದ್ದರಾಮಯ್ಯನವರನ್ನು ಸಮುದಾಯದ ಪ್ರಬಲ ನಾಯಕ ಎಂದು ಸದಾ ಬೆನ್ನಿಗೆ ನಿಂತಿದ್ದಾರೆ. ಈ ಸಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎರಡನೇ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿ ಕುರುಬ ಸಮುದಾಯವನ್ನು ಕಾಂಗ್ರೆಸ್ ಪಕ್ಷಕ್ಕೆ ವಾಲವಂತೆ ಮಾಡಿದರು.

ಹಿಂದೆ ಐದು ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತಿದ್ದ ಜನರು ವೀರಶೈವ ಲಿಂಗಾಯತ ಸಮುದಾಯದ ನಮ್ಮ ಯಡಿಯೂರಪ್ಪ ಅವರನ್ನು ಬಿಜೆಪಿ ಪಕ್ಷ ಅಧಿಕಾರದಲ್ಲಿರುವಾಗಲೇ ಕೆಳಗಿಳಿಸಿರುವುದನ್ನು ಸಹಿಸದ ಸಮುದಾಯದ ಮುಖಂಡರು ರಾಜ್ಯಾದ್ಯಂತ ಚದುರಿ ಹೋದರು. ಅದರಲ್ಲಿ ಕೆಲವೊಂದಿಷ್ಟು ಜನರು ಕಾಂಗ್ರೆಸ್ ಪಕ್ಷದ ಕಡೆ ವಾಲಿದರು ಎನ್ನಲಾಗಿದೆ.

ಅಲ್ಪಸಂಖ್ಯಾತರು, ಕುರುಬರು, ಒಕ್ಕಲಿಗರು, ದಲಿತರು, ವೀರಶೈವ ಲಿಂಗಾಯತ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಬಲತುಂಬಿ ರಾಜ್ಯದಲ್ಲಿ 140 ಸ್ಥಾನಗಳ ಸಮೀಪ ತಂದು ಅಧಿಕಾರ ಹಿಡಿಯಲು ಕಾರಣವಾಯಿತು ಇದೇ ಸತ್ಯಾಂಶ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.