ಒಳ ಮೀಸಲಾತಿ ಜಾರಿ ಸಚಿವರಿಗೆ ಸನ್ಮಾನ 

ಶಹಾಪೂರ,,

ರಾಜ್ಯ ಸರ್ಕಾರ ಎಪ್ರಿಲ್ 24ರಂದು ನಡೆದ ಸಚಿವ ಸಂಪುಟದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಿದ್ದು ಸಂತಸ ತಂದಿದೆ. 35 ವರ್ಷಗಳ ಹೋರಾಟದ ಫಲವಾಗಿ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ನಗರ ಆಶ್ರಯ ಸಮಿತಿಯ ಅಧ್ಯಕ್ಷ ವಸಂತ ಸುರಪುರಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಸಮುದಾಯದ ಹಿರಿಯ ಮುಖಂಡ ಶಾಂತಪ್ಪ ಗುತ್ತೇದಾರ,ರುದ್ರಪ್ಪ ಹುಲಿಮನಿ, ಮಲ್ಲಪ್ಪ ಉಳ್ಳಂಡಗೇರಿ, ವಿಜಯ ಕುಮಾರ ಎದುರುಮನೆ ,

ಭೀಮರಾಯ ಕದರಪುರ, ವಾಸುದೇವ ಕಟ್ಟಿಮನಿ, ಭೀಮರಾಯ ಕಾಂಗ್ರೆಸ್, ಮಾನಪ್ಪ ವಠಾರ,ಶಿವಕುಮಾರ್ ದೊಡ್ಮನಿ, ಭೀಮಣ್ಣ ದರಿಯಾಪುರ, ಬಸವರಾಜ ಪೂಜಾರಿ, ಪರಶುರಾಮ ರೋಜಾ, ಭೀಮಾಶಂಕರ ದರಿಯಾಪುರ, ಖಂಡಪ್ಪ ಕಂಚನಕವಿ, ಮಲ್ಲಪ್ಪ ಅಣಬಿ, ರವಿ ಎದರುಮನಿ ಸೇರಿದಂತೆ ಇತರರು ಇತರರಿದ್ದರು.

Leave a Reply

Your email address will not be published. Required fields are marked *