ಶಹಾಪುರ,,
ರಾಯಚೂರ ಸಹಕಾರಿ ಬ್ಯಾಂಕಿನಲ್ಲಿ ಅಕ್ರಮ ಸಿಬ್ಬಂದಿ ನೇಮಕಾತಿ ಸದ್ದು ಸದ್ದಿಲ್ಲದೆ ನಡೆಯುತ್ತಿದೆ.1:5ರ ಅನುಪಾತದಡಿಯಲ್ಲಿ ದಾಖಲಾತಿಗಳ ಪರಿಶೀಲನೆ ಮುಗಿದಿದ್ದು, ಸಂದರ್ಶನದ ದಿನಾಂಕ ನಿಗದಿಪಡಿಸುವುದು ಮಾತ್ರ ಬಾಕಿ ಉಳಿದಿದ್ದು ಆರ್‌ಬಿಐ(2025) ಸುತ್ತೋಲೆ ನಿರ್ದೇಶನ ಪಾಲಿಸದೆ ನೇಮಕಾತಿಯನ್ನು ಮಾಡಿಕೊಂಡಿರುವುದು ಅಪರಾಧ. ನೇಮಕಾತಿಯಲ್ಲಿ ಬಾರಿ ಅಕ್ರಮದ ಸದ್ದು ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ S.M. ಹಿರೇಮಠ್ ಆರೋಪಿಸಿದ್ದಾರೆ.
ಆರ್‌ಬಿಐ(2025) ಹೊಸ ಸುತ್ತೋಲೆಯ ಪ್ರಕಾರ ಆರ್ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ಸೇರಿದಂತೆ ನಾಲ್ಕು ಜನ ನಿರ್ದೇಶಕರು ಅನರ್ಹರಾಗಿದ್ದಾರೆ. ಆರ್ ಬಿ ಐ 2025 ಸುತ್ತೋಲೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿಲ್ಲ.ಡಿಸಿಸಿ ಬ್ಯಾಂಕುಗಳು ರಾಜ್ಯದಲ್ಲಿ ದೊಡ್ಡ ಸಮುದಾಯಗಳ, ಪ್ರಭಾವಿ ರಾಜಕೀಯ ಮುಖಂಡರ ಕಪಿಮುಷ್ಟಿಯಲ್ಲಿರುವುದರಿಂದ ಸರಕಾರ ಆರ್‌ಬಿಐ ಹೊಸ ಸುತ್ತುಲಿಯನ್ನು ಜಾರಿಗೆ ತರಲು ಮೀನಾವೇಷ ಎಣಿಸುತ್ತಿದೆ. ಆರ್‌ಬಿಐ ಹೊಸ ಸುತ್ತೋಲೆ ಪ್ರಕಾರ 10 ವರ್ಷಕ್ಕಿಂತಲೂ ಹೆಚ್ಚು ಸತತವಾಗಿ ನಿರ್ದೇಶಕರಾಗಿ ಆಯ್ಕೆಯಾದವರು ಸಹಕಾರಿ ಬ್ಯಾಂಕುಗಳಲ್ಲಿ ಮತ್ತೋಮ್ಮೆ ನಿರ್ದೇಶಕರಾಗುವಂತಿಲ್ಲ. ಆದರೆ ಕೆಲವು ಪ್ರಭಾವಿಗಳು ಮೀಸಲಾತಿ ಇರದ ಕಾರಣ ಸತತವಾಗಿ ನಿರ್ದೇಶಕರಾಗಿ ರಾಜ್ಯಾದ್ಯಂತ ಆಯ್ಕೆಯಾಗಿ ಬ್ಯಾಂಕುಗಳನ್ನೆ ಕೊಳ್ಳೆ ಹೊಡೆದಿದ್ದಾರೆ. ರೈತರಿಗೆ ಸಾಲದ ಅಪರೂಪದಲ್ಲಿ ಸಾಲವನ್ನು ನೀಡಿ ಹಣವನ್ನು ಲೂಟಿ ಮಾಡಿದ್ದಾರೆ. ಇಷ್ಟೆಲ್ಲ ಇದ್ದರೂ ಸರಕಾರ ಮಾತ್ರ ಪ್ರಭಾವಿಗಳ ಕೈಗೊಂಬೆಯಾಗಿದೆ. ಅನರ್ಹ ಆದವರನ್ನು ಇಟ್ಟುಕೊಂಡು ರಾಯಚೂರು ಡಿ ಸಿ ಸಿ ಬ್ಯಾಂಕ್ ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಮುಗಿಸುವ ಹಂತದಲ್ಲಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ರಾಯಚೂರು ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದನ್ನು ಲೆಕ್ಕಿಸದೆ ಅಧ್ಯಕ್ಷರಿಗೆ ನೇಮಕಾತಿಯ ಸದಸ್ಯರನ್ನಾಗಿ ನೇಮಿಸಿರುವುದು ಹಾಸ್ಯಾಸ್ಪದ ಎಂದು ಹಿರೇಮಠ ಆರೋಪಿಸಿದರು.
ರಾಯಚೂರು ಡಿಸಿಸಿ ಬ್ಯಾಂಕಿಗೆ ಇನ್ನಾರು ತಿಂಗಳಲ್ಲಿ ಚುನಾವಣೆ ಬರುವ ನಿರೀಕ್ಷೆಯಿದ್ದು ಅಷ್ಟರೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಸಬೇಕೆಂದು ನಿರ್ದೇಶಕರು ತರಾತುರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ (ಗುತ್ತಿಗೆ ಆಧಾರಿತ ನೇಮಕಗೊಂಡ) ಮಲ್ಲಿಕಾರ್ಜುನ ಪೂಜಾರಿ ಅವರು ಮೇ 30ರಂದು ನಿವೃತ್ತರಾಗಲಿದ್ದು ಅಷ್ಟರೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಸಲೇಬೇಕೆಂದು ಆತುರಾತುರವಾಗಿ ಆತುರ ಪಡುತ್ತಿದ್ದಾರೆ ಎನ್ನಲಾಗಿದೆ.
ರಾಯಚೂರು ಡಿಸಿಸಿ ಬ್ಯಾಂಕಿನ ನಿರ್ದೇಶಕರಲ್ಲಿಯೇ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಬಲವಾದ ಪಿಸುಗುಸು ಮಾತುಗಳು ಜಿಲ್ಲೆಯಾದ್ಯಂತ ಗುಸು ಗುಸು ಗುಟ್ಟುತ್ತಿವೆ. ಅಧ್ಯಕ್ಷರಿಗೆ ಹೆಚ್ಚುವರಿ ನೇಮಕಾತಿಗಳನ್ನು ನೀಡಬೇಕೆಂದು ಕೆಲವು ನಿರ್ದೇಶಕರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಿರ್ದೇಶಕರು ಅಸಮಾಧಾನಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನೇಮಕಾತಿ ಪ್ರಾಧಿಕಾರಕ್ಕೆ 15 ಅಂಕಗಳನ್ನು ನಿಗದಿಪಡಿಸಲಾಗಿದ್ದು ಈ 15 ಅಂಕಗಳನ್ನು ಬೇಕಿದ್ದವರಿಗೆ ನೀಡಿ ನೇಮಕಾತಿ ಮುಗಿಸುವ ಪ್ರಕ್ರಿಯೆಯಲ್ಲಿ ನಿರ್ದೇಶಕರು ಆತುರತೆ ತೋರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಅಧಿಕಾರಿಗಳು ಕೂಡ ಸಾತ್ ನೀಡಿದ್ದಾರೆ ಎನ್ನುವ ಕೂಗು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ!
ಬ್ಯಾಂಕ್ ನೇಮಕಾತಿಯಲ್ಲಿ ಅಕ್ರಮ ದಂಧೆ ನಡೆದಿದ್ದರೂ ಮೌನವಹಿಸಿದ ವಿರೋದ ಪಕ್ಷ
ರಾಯಚೂರು ಡಿಸಿಸಿ ಬ್ಯಾಂಕಿನಲ್ಲಿ ಇಷ್ಟೆಲ್ಲಾ ನೇಮಕಾತಿ ಅಕ್ರಮ ನಡೆಯುತ್ತಿದ್ದರು ವಿರೋಧ ವ್ಯಕ್ತಪಡಿಸುವವರು ವಿರೋಧವಾಗಿ ಮಾತನಾಡುವವರು ವಿರೋಧ ಪಕ್ಷದವರು ಜಿಲ್ಲೆಯಲ್ಲಿ ಯಾರು ಇಲ್ಲದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ವಿಶೇಷವೇನೆಂದರೆ ಆರ್‌ಡಿಸಿಸಿ ಬ್ಯಾಂಕಿನಲ್ಲಿ ವಿಶ್ವನಾಥ ಪಾಟೀಲ್ ಬಿಜೆಪಿ ಪಕ್ಷದವರು. ಬ್ಯಾಂಕಿನಲ್ಲಿ ಮೀಸಲಾತಿ ಇರದ ಕಾರಣ ಪ್ರಬಲ ಒಂದೇ ಸಮುದಾಯದ ವ್ಯಕ್ತಿಗಳು ಹಾಗೂ ರಾಜಕೀಯ ಪ್ರಭಾವಶಾಲಿಗಳು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ನಿರ್ದೇಶಕರಾಗಿರುವ ಕಾರಣ ಅಕ್ರಮದ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ. ಬ್ಯಾಂಕಿನಲ್ಲಿ ಯಾವ ಸರಕಾರದಿದ್ದರೂ ಒಂದು ಪ್ರಬಲ ಸಮುದಾಯದ ನಾಯಕರು ಎಲ್ಲಾ ಪಕ್ಷದಲ್ಲಿರುವ ಕಾರಣ ಎಲ್ಲಾ ನಾಯಕರು ಗೌಣವಾಗಿದ್ದಾರೆ ಎನ್ನಲಾಗಿದೆ.
“ಕೊಟ್ಟವನು ಕೊಡಂಗಿ ಇಸಿದುಕೊಂಡವನು ವೀರಭದ್ರ” ಎನ್ನುವ ಗಾದೆ ಮಾತಿನಂತೆ ನೇಮಕಾತಿಯಲ್ಲಿ ಕಾಂಚಾಣ ಸದ್ದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆಹೊದರೆ ಕೊಟ್ಟವರು ತೊಂದರೆ ಅನುಭವಿಸಬೇಕಾಗುತ್ತದೆ ಎಂದುs.m. ಹಿರೇಮಠ್ ರವರು ಎಚ್ಚರಿಸಿದ್ದಾರೆ. ಪಾರದರ್ಶಕತೆ ಇಲ್ಲದೆ ನೇಮಕಾತಿ ನಡೆದಿದೆ. ನ್ಯಾಯಾಲಯ ಮೊರೆ ಹೋಗುತ್ತಾರೋ ಕಾದು ನೋಡಬೇಕಿದೆ.