ಬಸವರಾಜ ಕರೇಗಾರ.
ಯಾದಗಿರಿ,,
ಕೇಂದ್ರ ಸರ್ಕಾರ ಡಿಲಿಮಿಟೇಶನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಜಾರಿಗಾಗಿ ರಣತಂತ್ರ ರೂಪಿಸಿ ವಿಶೇಷ ಅಧಿವೇಶನಕ್ಕೆ ಮತಕ್ಕೆ ಹಾಕಿ ಸೋಲು ಅನುಭವಿಸಿತು. ಮಹಿಳಾ ಮೀಸಲಾತಿಗೆ ಮೊದಲು ಕ್ಷೇತ್ರ ಪುನರ್ ವಿಂಗಡನೆಗಾಗಿ ಮತಕ್ಕೆ ಹಾಕಿದರೆ ಸೋಲುತ್ತೇನೆ ಎನ್ನುವ ಭಯ ಬಿಜೆಪಿ ಪಕ್ಷಕ್ಕಿತ್ತು. ಆದ್ದರಿಂದ ಮಹಿಳಾ ಮೀಸಲಾತಿ ಬಿಲ್ ನ್ನು ಮೊದಲು ಪಾಸ್ ಮಾಡಿದರೆ ಅದು ಪಾಸಾದರೆ ಡಿಲಿಮಿಟೇಶನ್ ಹೆಸರಿನಡಿ ಕ್ಷೇತ್ರ ಪುನರ್ವಿಂಗಡಣೆ ಆರಾಮವಾಗಿ ಗೆಲ್ಲುತ್ತೇವೆ ಎನ್ನುವ ಬಲವಾದ ನಂಬಿಕೆ ಬಿಜೆಪಿ ಪಕ್ಷದ್ದಾಗಿತ್ತು.
ಆಡಳಿತ ರೂಡ ಎನ್ಡಿಎ ಮೈತ್ರಿಕೂಟದಲ್ಲಿ 300ಕ್ಕೂ ಹೆಚ್ಚು ಸಂಸದರಿದ್ದಾರೆ.ಮನಸ್ಸು ಮಾಡಿದರೆ ಮಹಿಳಾ ಮೀಸಲಾತಿ ಗೆಲ್ಲಬಹುದಿತ್ತು. ಬಿಜೆಪಿಯ ಮೂಲ ಉದ್ದೇಶವೇ 2029 ಕ್ಕೆ ನಡೆಯುವ ಚುನಾವಣೆ ಕ್ಷೇತ್ರ ಪುನರ್ ವಿಂಗಡಣೆಯ ಮೂಲಕ ನಡೆಯಬೇಕು ಎಂದು, ಕ್ಷೇತ್ರ ಪುನರ್ ವಿಂಗಡಣೆಯಿಂದ ಹಿಂದಿ ಭಾಷೆ ಪ್ರಾಬಲ್ಯವಿರುವ ಉತ್ತರ ಭಾರತದ ರಾಜ್ಯಗಳದ್ದೇ ಸಿಂಹ ಪಾಲಾಗುವದರಲ್ಲಿ ಎರಡು ಮಾತಿಲ್ಲ. ಜನಸಂಖ್ಯೆ ಆಧಾರಿತವಾಗಿ ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಿವೆ.ಅಂದಿನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದಾಗ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದರು. ಕೇಂದ್ರ ಸರ್ಕಾರದ ನಿಯಮಗಳನ್ನು ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳು ಯಥಾವತ್ತಾಗಿ ಪಾಲಿಸಿದೆ.
ಉತ್ತರ ಭಾರತದ ರಾಜ್ಯಗಳು ಪಾಲಿಸಿಲ್ಲ. ಇದರಿಂದಾಗಿ ಉತ್ತರ ಭಾರತದ ರಾಜ್ಯಗಳಿಗೆ ಜನಸಂಖ್ಯೆ ಆಧಾರಿತವಾಗಿ ಕ್ಷೇತ್ರಗಳ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬ ಕಲ್ಯಾಣ ಯೋಜನೆ ಯನ್ನು ಅನುಸರಿಸಿಕೊಂಡು ಕುಟುಂಬಕ್ಕೆ ಎರಡು ಮಕ್ಕಳು ಸಾಕು ಎಂದ ಅಂದಿನ ಕೇಂದ್ರ ಸರ್ಕಾರದ ಯೋಜನೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತವೆ. ಇದನ್ನೇ ಕೇಂದ್ರ ಸರ್ಕಾರ 2034ರ ಬದಲು 2029ರಲ್ಲಿಯೇ ಕ್ಷೇತ್ರ ಪುನರ್ ವಿಂಗಡಣೆಗೆ ಕೈ ಹಾಕಿತು. ಹೆಸರಿಗೆ ಮಾತ್ರ ಮಹಿಳಾ ಮೀಸಲಾತಿ. ಒಳಾಂತರ ಅಸಲಿ ವಿಷಯವೇ ಬೇರೆಯಾಗಿತ್ತು. 2029 ಕ್ಷೇತ್ರ ಪುನರ್ ವಿಂಗಡಣೆಯಾದರೆ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಮುಂದಿನ 20 ವರ್ಷಗಳ ಕಾಲ ಬಿಜೆಪಿ ಪಕ್ಷ ದೇಶದಲ್ಲಿ ಆಡಳಿತ ನಡೆಸುವ ಉನ್ನಾರ ಹೊಂದಿತ್ತು. ಮೊದಲು ಮಹಿಳಾ ಮೀಸಲಾತಿ ಕಾಯ್ದೆಗೆ ಮತಗಳು ಹಾಕುವ ಯತ್ನಕ್ಕೆ ಕೈ ಹಾಕಿ ಸೋಲುತ್ತೇವೆ ಎಂದು ಗೊತ್ತಿದ್ದರೂ ಬಿಜೆಪಿ ಕೈ ಹಾಕಿ ಸುಟ್ಟುಕೊಂಡಿತು.
ನೋಡಿ ಹೇಗಿದೆ ಎಂದರೆ ದೇಶದಲ್ಲಿ ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಮಾಧ್ಯಮಗಳಲ್ಲಿ ಖುದ್ದು ಪ್ರಧಾನಿಯವರೇ ದೇಶವನ್ನು ಉದ್ದೇಶಿಸಿ ರಾಜಕೀಯ ಭಾಷಣ ಮಾಡಿದ್ದಾರೆ.ಪದೇ ಪದೇ ಕಾಂಗ್ರೆಸ್ ಪಕ್ಷವನ್ನೇ ದೂಷಿಸುತ್ತಾರೆ.2014 ರಿಂದ 2024ರ ವರೆಗೆ ಎನ್ಡಿಎಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಆಗ ಮಹಿಳಾ ಮೀಸಲಾತಿ ಜಾರಿಗೆ ತರಲಿಲ್ಲ. 2029 ರ ಚುನಾವಣೆ ಆದರಿಸಿ ಮಹಿಳಾ ಮೀಸಲಾತಿಗೆ ಕೈ ಹಾಕಿದೆ. 2014ರ ಹಿಂದೆ ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರುವುದಕ್ಕೆ ಮುಂದಾದಾಗ ಇದೇ ಬಿಜೆಪಿಯವರು ವಿರೋಧಿಸಿದ್ದರು. ಈಗಲೂ ಕೂಡ ಬಿಜೆಪಿ ಸಂಸದರಲ್ಲಿ ಪುನರ್ ವಿಂಗಡನೆ ಬಗ್ಗೆ ವಿರೋಧವಿದೆ!

ಮಹಿಳೆಯರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ತಳಿಸಿದರು. ಆಗ ಕಾಳಜಿ ಇರಲಿಲ್ಲವೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಪ್ರಸ್ತುತ ಬಿಜೆಪಿಯಲ್ಲಿ ಎಷ್ಟು ಜನ ಮಹಿಳಾ ಸಂಸದರಿದ್ದಾರೆ ಎನ್ನುವುದನ್ನು ನೋಡಿಕೊಳ್ಳಿ ಎಂದು ಮೂದಲಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವರು ಕ್ಷೇತ್ರ ಪುನರ್ ವಿಂಗಡಣೆಯಾದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ದುಪ್ಪಟ್ಟು ಸಂಸದರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಅದು ಮೌಖಿಕವಾಗಿ ಮಾತ್ರ. ಆದರೆ ಜನಸಂಖ್ಯೆಯಾಧಾರಿತವಾಗಿ ಹೆಚ್ಚಿನ ಸಂಖ್ಯೆ ಇರುವುದು ಉತ್ತರ ಭಾರತದ ರಾಜ್ಯಗಳು ಮಾತ್ರ. ಉತ್ತರ ಭಾರತದ ರಾಜ್ಯಗಳಲ್ಲಿ ಸಂಸದರ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಕರ್ನಾಟಕ ರಾಜ್ಯಕ್ಕೆ ಕೇವಲ 45 ಸ್ಥಾನಗಳು ಸಿಗಬಹುದು. ಅದೇ ಉತ್ತರ ಪ್ರದೇಶಕ್ಕೆ 120, ಬಿಹಾರ್ ರಾಜ್ಯಕ್ಕೆ 80 ಸ್ಥಾನಗಳು ಸಿಗುತ್ತವೆ. ಅತಿ ಹೆಚ್ಚು ಸ್ಥಾನ ಉತ್ತರ ಭಾರತಕ್ಕೆ ಹೋಗುತ್ತದೆ. ಇದನ್ನು ರಾಜ್ಯದ ಸಂಸದರು ಅರ್ಥ ಮಾಡಿಕೊಂಡಿಲ್ಲ. ಗೊತ್ತಿದ್ದರೂ ಅಧಿಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿರುವುದು ದುರದೃಷ್ಟಕರ.
ಜಮ್ಮು ಮತ್ತು ಕಾಶ್ಮೀರ ಸ್ಥಿತಿ ಹೇಗಾಗಿದೆ ನೋಡಿ. ಡಿಲಿಮಿಟೇಶನ್ ಹೆಸರಿನಡಿ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಭಾಗಗಳಿಗೆ ವಿಭಿನ್ನ ರೀತಿಯಲ್ಲಿ ವಿಂಗಡನೆ ಮಾಡಲಾಗಿದೆ. ಶೋಷಿತರು ದಲಿತರು ಅಲ್ಪಸಂಖ್ಯಾತರನ್ನು ವಿಂಗಡಣೆ ಮಾಡಿ ಕ್ಷೇತ್ರಗಳಲ್ಲಿ ಹಂಚಿಹಾಕಿದ್ದಾರೆ. ಗಡಿಯ ಭಾಗಗಳು ಹರಿದು ಹಂಚಿವಿ. ಬಿಜೆಪಿ ತಮ್ಮ ಇಚ್ಛಾನುಸಾರ ಗಡಿಭಾಗ ನಿರ್ಧರಿಸಿದೆ. ಇದು ಒಕ್ಕೂಟ ವ್ಯವಸ್ಥೆಯ ಅಧ:ತನವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ತನ್ನ ಹಿಡಿತದಲ್ಲಿ ಇಟ್ಟುಕೊಂಡರು ಅಚ್ಚರಿ ಪಡಬೇಕಿಲ್ಲ.ಕನ್ನಡಿಗರ ಬದುಕು ಬೀದಿ ಪಾಲಾಗಲಿದೆ ಎನ್ನಲಾಗಿದೆ.
ದೇಶಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವವರು ದಕ್ಷಿಣದ ರಾಜ್ಯಗಳು. ಎಲ್ಲಾ ರಂಗಗಳನ್ನು ಅಭಿವೃದ್ಧಿ ಸಾಧಿಸಿವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ತೆರಿಗೆಯಲ್ಲಿ ಮುಂದೆ ಇವೆ. ಆದರೆ ಉತ್ತರ ಭಾರತದ ರಾಜ್ಯಗಳು ಅಭಿವೃದ್ಧಿ ಹೊಂದಿಲ್ಲ. ತೆರಿಗೆ ಕಟ್ಟುವುದರಲ್ಲಿ ಹಿಂದೆ ಬಿದ್ದಿವೆ.ಜನಸಂಖೆಯಲ್ಲಿ ಅತಿ ದೊಡ್ಡ ರಾಜ್ಯಗಳು ಎನ್ನುವ ಹೆಸರಿದೆ.
ಕೇಂದ್ರ ಸರ್ಕಾರ 2026-27ನೇ ಸಾಲಿನಲ್ಲಿ 63049 ಕೋಟಿ ತೆರಿಗೆ ಪಾಲು ಕೊಡಬೇಕು. ಆದರೆ ನಮಗೆ ಬಂದಿದ್ದು ಕೇವಲ 3705 ಕೋಟಿ ಮಾತ್ರ. ಒಂದು ರಾಜ್ಯ ಕೇಂದ್ರಕ್ಕೆ ಒಂದು 100ರೂ ತೆರಿಗೆ ಕಟ್ಟಿದರೆ 13ರೂ ಕೇಂದ್ರ ಸರಕಾರ ರಾಜ್ಯಕ್ಕೆ ಕೊಡಬೇಕು. ಅದೇ 100 ರೂಪಾಯಿ ತೆರಿಗೆಯನ್ನು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳು ಕಟ್ಟಿದರೆ ಶೇಕಡ ಮೂರರಷ್ಟು ಅಂದರೆ 39ರೂ ಆ ರಾಜ್ಯಗಳಿಗೆ ತೆರಿಗೆ ಹಿಂದಿರುಗಿಸಲಾಗುತ್ತದೆ. ಇದು ತೆರಿಗೆ ಭಯೋತ್ಪಾದಕ ಎಂದು ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿವೆ.
ಕೇಂದ್ರ ಸರ್ಕಾರ ಪ್ರಾದೇಶಿಕ ಅಸಮಾತೋಲನ ಮಾಡುತ್ತಿದೆ. ಜನಸಂಖ್ಯೆಯ ಆಧಾರ ಮೇಲೆ ತೆರಿಗೆ ಪಾಲನ್ನು ಹಿಂದಿರಿಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ದಕ್ಷಿಣ ಭಾರತದ ಪ್ರಭಾವ ಕುಗ್ಗಿಸಲು ಡಿಲಿಮಿಟೇಶನ್ ಹೆಸರಿನಡಿ ಕ್ಷೇತ್ರಗಳನ್ನು ಕಡಿಮೆ ಮಾಡಲಾಗುತ್ತದೆ ಎಂದು ದಕ್ಷಿಣದ ರಾಜ್ಯಗಳ ಆರೋಪವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೂಪು ಪಡೆಯುತ್ತದೆ ಕಾದು ನೋಡಬೇಕಿದೆ.