ಕಾರ್ಯಕರ್ತರ ಕಡೆಗಣನೆ : ಅಸಮಾಧಾನ ಗೊಂಡ ತಿಪ್ಪನಹಳ್ಳಿ ಗ್ರಾಮಸ್ಥ

ಶಹಪುರ,,
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಮರನ್ನು ಕಡೆಗಣಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ರಾಜ್ಯಾದ್ಯಂತ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ ಎಂದು ಎಂದು ತಿಪ್ಪನಹಳ್ಳಿ ಗ್ರಾಮಸ್ಥ ಶಿಲಾರುದ್ದೀನ್ ಅಸಮಾಧಾನ ಹೊರಹಾಕಿದ್ದಾರೆ. ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಅವರನ್ನು ಭೇಟಿ ಮಾಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಕೇಳಲು ಹೋದಾಗ ತಿಪ್ಪನಹಳ್ಳಿ ಗ್ರಾಮದ
ಮಲ್ಲನಗೌಡರನ್ನು ಕೇಳಿ ಎಂದು ಹೇಳಿರುವುದು ಬೇಸರ ತಂದಿದೆ. ನಾವು ಮಲ್ಲನಗೌಡರನ್ನು ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಲ್ಲ.ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ ಹಾಗೂ ಕಾಂಗ್ರೆಸ್ ಪಕ್ಷ ನೋಡಿ ಮತ ಹಾಕಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿಯೇ ಶೇ. 80ರಷ್ಟು ಮುಸ್ಲಿಮರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ತಮ್ಮ ಸಮಸ್ಯೆಗಳೆನಿದ್ದರೂ ನೇರವಾಗಿ ನನ್ನಲ್ಲಿಗೆ ಬಂದು ಕೇಳಿ ಎಂದು ಹೇಳುತ್ತಿರುವ ಸಚಿವರು ಇಂದು ಮಲ್ಲನಗೌಡರನ್ನು ಕೇಳಿ ಎಂದಿರುವುದು ಬೇಸರ ತರಿಸಿದೆ ಎಂದು ಅಳಲು ತೋಡಿಕೊಂಡರು.
ವಾರ್ಡ್ ನಂಬರ್ 21ರಲ್ಲಿ ವಾರ್ಡಿನಲ್ಲಿರುವ ಒಳಚರಂಡಿ ಸಮಸ್ಯೆಯನ್ನು ಸಚಿವ ಶರಣಬಸಪ್ಪಗೌಡ ದರ್ಶನಪುರವರನ್ನು ಭೇಟಿ ಮಾಡಿ ಕಳೆದ 15 ವರ್ಷಗಳಿಂದಲೂ ಚರಂಡಿಗಳಿಲ್ಲದೆ ವಾರ್ಡಿನಲ್ಲಿ ಸಾರ್ವಜನಿಕರು ತೊಂದರೆಗೆ ಅನುಭವಿಸುತ್ತಿದ್ದಾರೆ. ಚರಂಡಿ ಮಾಡಿಕೊಡಿ ಎಂದು ಮನವಿ ಪತ್ರ ಸಲ್ಲಿಸಿದ್ದೇವೆ.ಮನವಿ ಪತ್ರ ಸಲ್ಲಿಸಿ ಎರಡು ವರ್ಷಗಳಾದವು. ನಿತ್ಯ ಕೆಟ್ಟ ವಾಸನೆಯಿಂದ ನರಕ ಯಾತನೆ ಅನುಭವಿಸುತ್ತಿದ್ದೇವೆ ಎಂದು ವಾರ್ಡ್ನನ ಜನರು ಅಸಮಾಧಾನ ಹೊರಹಾಕಿದ್ದಾರೆ.