ಶಹಾಪೂರ,,
ನಗರದ ಆರ್ ವಾಯ್ ದಿಗ್ಗಿ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಮಾಡಲಾಯಿತು ಪ್ರಾಸ್ತಾವಿಕ ಯುವ ಬರಹಗಾರರಾದ ವಿರೇಶ ಎಚ್ ಕೊಂಕಲ್ ೧೩ ಶತಮಾನದಲ್ಲಿ ಸವ೯ ಸಮುದಾಯದ ಶರಣರನ್ನು ಒಂದುಗೂಡಿಸಿ ಜಾತಿ ವ್ಯವಸ್ಥೆ ಕಂದಾಚಾರ ಮೌಢ್ಯದಿಂದ ಬಳಲುತ್ತಿರುವ ಸಮಾಜಕ್ಕೆ ಸಾಮಾಜಿಕ ಸಮಾನತೆ ಸಾರುವ ಮೂಲಕ ಅಸಮಾನತೆಯನ್ನು ಬೇರು ಸಮೇತ ಕಿತ್ತೆಸೆದು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಸಮಾಜಕ್ಕೆ ಸಾರಿದವರು ಬಸವಣ್ಣನವರು ಎಂದು ವಿರೇಶ ಕೊಂಕಲ್ ಹೇಳಿದರು.
ಆರ್.ಪಿ.ಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎ.ಬಿ.ಹೊಸ್ಮನಿ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡುತ್ತಾ, ಬಸವಣ್ಣನವರ ವಚನಗಳು ಸಮಸಮಾಜದ ಕನುಸುಗಳು ಈಡೇರಿಸಲು ನಮಗೆ ಆದರ್ಶವಾಗಿವೆ. ಬುದ್ಧ ಬಸವ ಅಂಬೇಡ್ಕರ್ ಫುಲೆ ಪೆರಿಯಾರ್ ಬಿಟ್ಟುಹೋದ ವೈಚಾರಿಕ ಚಿಂತನೆ ತತ್ವ ಸಿದ್ಧಾಂತಗಳು ನಮಗೆ ಮಾರ್ಗದರ್ಶನವಾಗಿವೆ. ಅವರ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕೆಂದು ಹೇಳಿದರು.
SSD ಮುಖಂಡರಾದ ದತ್ತಾತ್ರೇಯ, ಪಾಂಡುರಂಗ, ಆರ್.ವೈ.ದಿಗ್ಗಿ ಕಾಲೇಜಿನ ಪ್ರಾಂಶುಪಾಲ ಶ್ರೀಮತಿ ಮಲ್ಲಿಕಾ ಎಂ.ದಿಗ್ಗಿ, ಆರ್.ಪಿ.ಐ ಯಾದಗಿರಿ ಜಿಲ್ಲಾಧ್ಯಕ್ಷ ಅಂಬ್ರೇಶ ದಿಗ್ಗಿ, ಭೀಮಣ್ಣ, ನಾಗರಾಜ ಶಖಾಪುರ, ಲಕ್ಷ್ಮಣ ದಿಗ್ಗಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಡಾ.ಮರೇಪ್ಪ ಪರಮೇಶ್ವರ ನಿರೂಪಿಸಿದರು. ಕಾಲೇಜು ಕಾರ್ಯದರ್ಶಿ ಮಹೇಂದ್ರ ಕುಮಾರ ದಿಗ್ಗಿ ಸ್ವಾಗತಿಸಿದರು.ಭೀಮಾಶಂಕರ ವಿಭೂತಿಹಳ್ಳಿ ವಂದಿಸಿದರು